ಅಬ್ಬಾ! ಈ ಪಾಪ್​ ಡ್ಯಾನ್ಸರ್​ ನಿಜವಾಗ್ಲೂ ಹಿಟ್ಲರ್​ ಕಲ್ಯಾಣದ ಅಂತರನಾ ಎಂದು ಪ್ರಶ್ನಿಸ್ತಿದ್ದಾರೆ ಫ್ಯಾನ್ಸ್​

Published : Sep 18, 2023, 04:14 PM IST
ಅಬ್ಬಾ! ಈ ಪಾಪ್​ ಡ್ಯಾನ್ಸರ್​ ನಿಜವಾಗ್ಲೂ ಹಿಟ್ಲರ್​ ಕಲ್ಯಾಣದ ಅಂತರನಾ ಎಂದು ಪ್ರಶ್ನಿಸ್ತಿದ್ದಾರೆ ಫ್ಯಾನ್ಸ್​

ಸಾರಾಂಶ

ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ಮನೆ ಮಾತಾಗಿರುವ ವಿಲನ್​ ಪಾತ್ರಧಾರಿ ಪ್ರಾರ್ಥನಾ (ಅಂತರಾ) ಚಿಕ್ಕ ಡ್ರೆಸ್​ ಧರಿಸಿ ಪಾಪ್​  ಡ್ಯಾನ್ಸ್​ಗೆ ಸ್ಟೆಪ್​ ಹಾಕಿದ್ದಾರೆ.   

ಒಬ್ಬರೇ ವ್ಯಕ್ತಿ ಒಮ್ಮೆ ಅತಿ ಒಳ್ಳೆಯವರಂತೆ, ಇನ್ನೊಮ್ಮೆ ಅತಿ ಕೆಟ್ಟವರಂತೆ ಆ್ಯಕ್ಟಿಂಗ್​ ಮಾಡುವುದು ತುಸು ಕಷ್ಟವೇ. ಇಂಥ ಕಲೆ ಕೆಲವರಿಗೆ ಮಾತ್ರ ಕರಗತವಾಗಿರುತ್ತದೆ. ಅಂಥವರಲ್ಲಿ ಒಬ್ಬರು ಹಿಟ್ಲರ್​ ಕಲ್ಯಾಣ ಸೀರಿಯಲ್​ನ ಅಂತರಾ ಉರ್ಫ್​ ಪ್ರಾರ್ಥನಾ. ಮೊದಲಿಗೆ ಸೌಮ್ಯ ರೂಪದ ಅಂತರಾಳ ರೂಪವನ್ನೇ ಪಡೆದಿರುವ ವಿಲನ್​ ಪ್ರಾರ್ಥನಾ ತಾನೇ ಅಂತರಾ ಎಂದುಕೊಂಡು ಮನೆಯವರನ್ನು ನಂಬಿಸುತ್ತಿದ್ದಾಳೆ. ಈಕೆಯ ಬಂಡವಾಳ ಬಯಲಾಗುವುದೇ ಎನ್ನುವುದು ಈಗಿರುವ ಕುತೂಹಲ. ಅದೇನೆ ಇದ್ದರೂ ಅಂತರಾ ಹಾಗೂ ಪ್ರಾರ್ಥನಾ ಪಾತ್ರಕ್ಕೆ ಜೀವ ತುಂಬಿರುವ ನಟಿ ರಜನಿ. ಪ್ರತಿಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದ ರಜನಿ, ಇದೀಗ ವಿಲನ್ ಆಗಿ ನಟಿಸುತ್ತಿದ್ದು, ಉತ್ತಮವಾಗಿ ನಟಿಸುತ್ತಿದ್ದಾರೆ. ಹೆಚ್ಚಿನ ಜನರು ರಜನಿ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.  

ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ರಂಜಿನಿ, ನಂತರ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದರು. ಸೋಶಿಯಲ್ ಮೀಡಿಯಾದಲ್ಲೂ ನಟಿ ಸದಾ ಆಕ್ಟೀವ್ ಆಗಿರುತ್ತಾರೆ. ಯಾವಾಗಲೂ ರೀಲ್ಸ್ ಮಾಡುತ್ತಾ, ಅಥವಾ ಫೋಟೋ ಶೂಟ್ ಮಾಡಿಸಿ  ಶೇರ್ ಮಾಡುತ್ತಿರುತ್ತಾರೆ. ಇದೀಗ ಪಾಪ್​ ಡ್ಯಾನ್ಸ್​ಗೆ ರೀಲ್ಸ್​ ಮಾಡಿ ಅದರ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ಎಲ್ಲೆ ಇದ್ದರೂ  ಅದು Dance stage ಥರನೆ ಕಾಣುತ್ತೆ ಎಂದು ಹೇಳಿಕೊಂಡಿರುವ ರಜನಿ ಅವರು ಸಕತ್​ ಸ್ಟೆಪ್​ ಹಾಕಿ ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಇವರಿಗೆ  ಕಮೆಂಟ್​ಗಳ ಸುರಿಮಳೆಯೇ ಆಗುತ್ತಿದೆ.

ಮೈ ಚಳಿ ಬಿಟ್ಟು ಸ್ವಾತಿ ಮುತ್ತಿನ ಹಾಡಿಗೆ ಸಕತ್​ ಸ್ಟೆಪ್​ ಹಾಕಿದ 'ಹಿಟ್ಲರ್​ ಕಲ್ಯಾಣ'ದ ಅಂತರಾ

ಇತ್ತೀಚೆಗೆ ಅವರು, ಸ್ವಾತಿ ಮುತ್ತಿನ ಮಳೆಹನಿಯೇ ಡ್ಯಾನ್ಸ್​ಗೆ ಮೈಚಳಿ ಬಿಟ್ಟು ರೀಲ್ಸ್​ ಮಾಡಿದ್ದರು. ಸದಾ ಸೀರೆಯಲ್ಲಿ ಕಂಗೊಳಿಸುವ ಪ್ರಾರ್ಥನಾ, ಈಗ ಈ ಪರಿಯ ಡ್ರೆಸ್​ ತೊಟ್ಟು ಪಾಪ್​ ಡ್ಯಾನ್ಸ್​ಗೆ ಸ್ಟೆಪ್​ ಹಾಕಿದ್ದನ್ನು ನೋಡಿ ನಿಜಕ್ಕೂ ಇವರು ಅವರೇನಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ರಜನಿ ಅವರು ಕೆಲವು ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡು ಸಕತ್​ ಸುದ್ದಿ ಮಾಡಿದವರು. ಅನಕ್ಷರಸ್ಥ ಸೊಸೆ ಅಮೃತಾಗೆ ಅತ್ತೆ ಶಕುಂತಲಾ ವಿದ್ಯೆ ಕಲಿಸಿ ಒಳ್ಳೆಯ ಗೃಹಿಣಿ, ಬುದ್ಧಿವಂತೆಯನ್ನಾಗಿ ಮಾಡುವ ಕಥೆಯನ್ನು ಇದು ಹೊಂದಿತ್ತು.  6 ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರವಾಗಿತ್ತು. ಮೊದಲ ಆಡಿಶನ್‌ನಲ್ಲಿ ಧಾರಾವಾಹಿಯ ಲೀಡ್ ಪಾತ್ರಕ್ಕೆ ಆಯ್ಕೆಯಾದವರು ರಜನಿ. ಈ ಸೀರಿಯಲ್‌ನಲ್ಲಿ ತುಂಬ ತಾಳ್ಮೆ ಹೊಂದಿದ ಪಾತ್ರ ಎಂದರೆ ಅದು ಅಮೃತಾ ಪಾತ್ರವಾಗಿತ್ತು. ಎಷ್ಟೋ ಜನ ಪ್ರೇಕ್ಷಕರು ಇದ್ದರೆ ಅಮೃತಾ ರೀತಿ ಇರಬೇಕು ಎಂದುಕೊಳ್ಳುತ್ತಿದ್ದರು. 

ಅಂದಹಾಗೆ  ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ ಹಿಟ್ಲರ್​ ಕಲ್ಯಾಣ (Hitler Kalyana) ಧಾರಾವಾಹಿಯಲ್ಲಿ ರಜನಿ ಅವರದ್ದು ವಿಲನ್​ ಪಾರ್ಟ್​. ಈ ಧಾರಾವಾಹಿಯಲ್ಲಿ ಹೈಲೈಟ್​ ಆಗ್ತಿರೋದು ಪಾತ್ರಗಳಲ್ಲಿ ಒಂದು ಲೀಲಾದ್ದಾದರೆ, ಇನ್ನೊಂದು ಅಂತರಾ ಅಲಿಯಾಸ್​ ಪ್ರಾರ್ಥನಾ.  ಲೀಲಾ ಪಾತ್ರಧಾರಿ ಮಾಡುವುದೆಲ್ಲವೂ ಎಡವಟ್ಟೇ ಆಗಿದ್ದರೂ ಅದೆಲ್ಲವೂ ಪ್ಲಸ್​ ಪಾಯಿಂಟೇ ಆಗಿ ಈಕೆಯ ಮನೆಗೆ ನೆರವಾಗುತ್ತಿರುವುದು ಕೂಡ ಇಂಟರೆಸ್ಟಿಂಗ್​ ವಿಷಯ  ಅದೇ ಇನ್ನೊಂದೆಡೆ ಎಜೆಯ ಮೊದಲ ಪತ್ನಿಯಾಗಿದ್ದ ಅಂತರಾ ಸತ್ತು ಹೋಗಿದ್ದಾಳೆ. ಆದರೆ ಅವಳದ್ದೇ ರೂಪ ಇರುವ ಪ್ರಾರ್ಥನಾ ಅಂತರಾ ಎಂದು ಹೇಳಿಕೊಂಡು ಎ.ಜೆ ಮನೆ ಸೇರಿದ್ದು ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?