
ಕನ್ನಡತಿ ಧಾರವಾಹಿ ಬಹಳಷ್ಟು ಕುತೂಹಲಕಾರಿ ತಿರುವಿಗೆ ಬಂದು ನಿಂತಿದೆ. ಹೀರೋ ಹೀರೋ ಎಂದು ಕನಸು ಕಾಣುತ್ತಿದ್ದ ವರುಧಿನಿ ಹರ್ಷನಿಗೆ ಪ್ರಪೋಸ್ ಮಾಡುವ ಮುನ್ನವೇ ಫ್ಲಾಪ್ ಆಗಿದೆ.
ಡಿನ್ನರ್‌ಗೆ ಕರೆದು ಟ್ಯಾಟೂ ಬಗ್ಗೆ ಬಹಳಷ್ಟು ಪ್ರಶ್ನೆ ಕೇಳಿ ಹರ್ಷನಿಗೆ ಇರಿಟೀಟ್ ಮಾಡುತ್ತಾಳೆ ವರುಧಿನಿ. ತನ್ನ ಬಗ್ಗೆ ವೈಯಕ್ತಿಯ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಸಿಟ್ಟಾಗೋ ಹರ್ಷ ಜೋರಾಗಿಯೇ ಮಾತನಾಡುತ್ತಾನೆ.
ತನ್ನ ಹೀರೋಗೆ ಪ್ರಪೋಸ್ ಮಾಡ್ತಾಳಾ ವರುಧಿನಿ..? ಭುವಿ ಕಥೆಯೇನು?
ಅವಮಾನ, ಹರ್ಷನ ನಡತೆ, ಡಿನ್ನರ್‌ನಲ್ಲಿ ಆಗುವ ಸೀನ್‌ನಿಂದ ವರುಧಿನಿ ಕುಗ್ಗುತ್ತಾಳೆ. ಏನೋ ಒಂದನ್ನು ಪಕ್ಕಾ ತೀರ್ಮಾನಿಸಿ ಬಿಟ್ಟವಳಂತೆ ಆಡೋ ವರುಧಿನಿ ನೇರ ಬರೋದು ಭುವಿ ಮನೆಗೆ.
ಭುವಿ ಕೈಯಿಂದ ಕೈತುತ್ತು ತಿನ್ನಿಸಿಕೊಂಡು ಕುಂಕುಮ ಇಡಿಸ್ಕೊಂಡು ಬಾಯ್ ಹೊರಡುತ್ತಾಳೆ ವರುಧಿನಿ. ಗೂಡಾರ್ಥದ ಮಾತುಗಳು, ಅತಿಯಾದ ನೆಮ್ಮದಿಯಲ್ಲಿ ಕಾಣಿಸೋ ವರುಧಿನಿ ಸಾವಿಗೆ ದೃಢ ನಿಶ್ಚಯ ಮಾಡಿದಂತೆ ಕಾಣಿಸುತ್ತಾಳೆ. ಒಬ್ಬಳೇ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗ್ತಾಳಾ ವರುಧಿನಿ..? ಇದು ಸದ್ಯದ ಕುತೂಹಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.