ಜನಪ್ರಿಯ ಸೀರಿಯಲ್ 'ಕನ್ನಡತಿ'ಯ ನಾಯಕಿ ರಂಜನಿ ರಾಘವನ್ ಇದೀಗ ಲಂಗ ದಾವಣಿ ಸವಾಲಿನೊಂದಿಗೆ ಬಂದಿದ್ದಾರೆ. ಚಂದದ ಲಂಗ ದಾವಣಿಯಲ್ಲಿ ಮುದ್ದು ಮುದ್ದಾಗಿ 'ಗುರು ಶಿಷ್ಯರು' ಚಿತ್ರದ 'ಆಣೆ ಮಾಡಿ ಹೇಳುತೀನಿ' ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಜನಪ್ರಿಯ ಸೀರಿಯಲ್ 'ಕನ್ನಡತಿ'ಯ ನಾಯಕಿ ರಂಜನಿ ರಾಘವನ್ (Kannadathi Actor Ranjana Raghavan) ಇದೀಗ ಲಂಗ ದಾವಣಿ ಸವಾಲಿನೊಂದಿಗೆ ಬಂದಿದ್ದಾರೆ. ಚಂದದ ಲಂಗ ದಾವಣಿಯಲ್ಲಿ ಮುದ್ದು ಮುದ್ದಾಗಿ 'ಗುರು ಶಿಷ್ಯರು' ಚಿತ್ರದ 'ಆಣೆ ಮಾಡಿ ಹೇಳುತೀನಿ' ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಜೊತೆಗೆ ನೀವೂ ಲಂಗ ದಾವಣಿ ಹಾಕ್ಕೊಂಡು ಡ್ಯಾನ್ಸ್ ಮಾಡಿ ಅಂತ ಗುರುಶಿಷ್ಯರು ಚಿತ್ರದಲ್ಲಿ ಈ ಹಾಡಿನಲ್ಲಿ ಕಾಣಿಸಿಕೊಂಡ ನಿಶ್ವಿಕಾ ನಾಯ್ಡು ಗೆ ಚಾಲೆಂಜ್ ಹಾಕಿದ್ದಾರೆ. ಈ ಪೋಸ್ಟ್ ನಲ್ಲಿ ರಂಜನಿ ಸ್ಟೆಪ್ಸ್ ನೋಡಿ ನಿಶ್ವಿಕಾ ಮುದ್ದು ಹುಡುಗಿ ಅಂತ ಹೊಗಳಿದ್ದಾರೆ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನ ಈ ಡ್ಯಾನ್ಸ್‌ಅನ್ನು ಲೈಕ್ ಮಾಡಿದ್ದಾರೆ.
'ಗುರುಶಿಷ್ಯರು' ಚಿತ್ರ ಈಗಾಗಲೇ ಹಾಡುಗಳ ಮೂಲಕ ಸುದ್ದಿಯಲ್ಲಿದೆ. ಅದರಲ್ಲೂ ಶರಣ್, ನಿಶ್ವಿಕಾ ನಾಯ್ಡು ಸ್ಟೆಪ್ಸ್ ಹಾಕಿರುವ 'ಆಣೆ ಮಾಡಿ ಹೇಳುತೀನಿ' ಹಾಡು ಸಾಕಷ್ಟು ಜನರಿಗೆ ಇಷ್ಟವಾಗಿದೆ. ಇದರಲ್ಲಿ ನಟಿ ನಿಶ್ವಿಕಾ ನಾಯ್ಡು ಅವರು ಲಂಗ ದಾವಣಿಯಲ್ಲಿ ಕಾಣಿಸಿಕೊಂಡಿದ್ದರು. ಈ ಉಡುಗೆಯಲ್ಲೇ ಇವರು ಈ ಹಾಡಿಗೆ ಸುಂದರವಾಗಿ ಸ್ಟೆಪ್ಸ್ ಹಾಕಿದ್ದರು. ಇದನ್ನು ಲಕ್ಷಾಂತರ ಜನ ಮೆಚ್ಚಿಕೊಂಡಿದ್ದಾರೆ. ಅಚ್ಚಗನ್ನಡದಲ್ಲಿರುವ ಈ ಹಾಡು ಕನ್ನಡತಿಗೂ ಇಷ್ಟವಾಗಿದೆ. ಇದೇ ಹಾಡಿಗೆ ಇದೀಗ ರಂಜನಿ ರಾಘವನ್ ಅವರೂ ಸ್ಟೆಪ್ ಹಾಕುವ ಮೂಲಕ ಈ ಹಾಡನ್ನು ಇನ್ನಷ್ಟು ಫೇಮಸ್ ಮಾಡಿದ್ದಾರೆ.
ಇದನ್ನೂ ಓದಿ: ವೈರಲ್ ಆಗುತ್ತಿದೆ ಕನ್ನಡತಿಯ ರತ್ನಮಾಲಾ ಕಣ್ಣೀರು! ಮತ್ತೆ ಬರಲ್ವಾ ಅಮ್ಮಮ್ಮಾ?
ಇನ್‌ಸ್ಟಾಗ್ರಾಂನಲ್ಲಿ ಈ ಹಾಡಿನ ರೀಲ್ಸ್ ಮಾಡಿ ಪೋಸ್ಟ್ ಮಾಡಿರೋ ರಂಜನಿ ತನ್ನ ಉಡುಗೆಯ ಬಗ್ಗೆಯೂ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈಗಾಗಲೇ ಸ್ವಚ್ಛ ಕನ್ನಡದ ಮಾತುಗಳ ಮೂಲಕ, ಕಥೆಗಾರ್ತಿಯಾಗಿ ಪ್ರಸಿದ್ಧಿ ಪಡೆದಿರುವ ರಂಜನಿ ಇದೀಗ ಈ ಹಾಡಿಗೆ ಸ್ಟೆಪ್ಸ್ ಹಾಕುವ ಮೂಲಕ ತಾನೊಬ್ಬ ಪ್ರತಿಭೆಯ ಗಣಿ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಲಂಗ ದಾವಣಿ ದಕ್ಷಿಣ ಭಾರತೀಯ ಹೆಣ್ಣುಮಕ್ಕಳ ಅದರಲ್ಲೂ ಕನ್ನಡತಿಯರ ಮೆಚ್ಚಿನ ಉಡುಗೆ. ಆದರೆ ಆಧುನಿಕ ದಿರಿಸುಗಳ ಭರದಲ್ಲಿ ಈಗ ಈ ಸಾಂಪ್ರದಾಯಿಕ ಉಡುಗೆಯನ್ನು ಕೇಳೋರೆ ಇಲ್ಲದ ಹಾಗಾಗಿ ಬಿಟ್ಟಿದೆ. ಇದೀಗ ರಂಜನಿ ಈ ಉಡುಪಿನಲ್ಲಿ ಡ್ಯಾನ್ಸ್ ಮಾಡಿ ಈ ಉಡುಗೆಯನ್ನು ರಾತ್ರೋ ರಾತ್ರಿ ಜನಪ್ರಿಯ ಮಾಡಿದ್ದಾರೆ.
'ಯಾವ್ದು ಯಾವ್ದೋ ಚಾಲೆಂಜ್ ಮಾಡ್ತೀವಂತೆ, ನಮ್ಮ ಲಂಗ ದಾವಣಿ ಚಾಲೆಂಜ್ ತಗೊಳಲ್ವಾ' ಅನ್ನೋ ರಂಜನಿ ರಾಘವನ್ ಇನ್‌ಸ್ಟಾ ಪೋಸ್ಟ್ ಗೆ ನೂರಾರು ಮಂದಿ ಅಭಿಮಾನಿಗಳು ಹೃದಯದ ಇಮೋಜಿ ಕಳಿಸಿ ಖಂಡಿತಾ ಚಾಲೆಂಜ್ ತಗೊಳ್ತೀವಿ ಅಂದಿದ್ದಾರೆ. ಈ ಹಾಡಿನ ಬಗ್ಗೆಯೂ ರಂಜನಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಪೋಸ್ಟ್‌ಅನ್ನು ನಾಯಕಿ ನಿಶ್ವಿಕಾ ನಾಯ್ಡು ಅವರಿಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: Kannadathi serial: ಹವಿ ಮದುವೆಯಲ್ಲಿ ರಾಮಾಚಾರಿಯ ಪೌರೋಹಿತ್ಯಕ್ಕೆ ಫುಲ್ ಮಾರ್ಕ್ಸ್ ನೀಡಿದ ಫ್ಯಾನ್ಸ್
ರಂಜನಿ ಅವರ ಈ ಪೋಸ್ಟ್‌ಅನ್ನು ನೋಡಿ ಮನಸಾರೆ ಮೆಚ್ಚಿಕೊಂಡಿರುವ ನಿಶ್ಚಿಕಾ, 'ಏನ್ ಚಂದ ಕಾಣ್ತೀರಿ..' ಅಂತ ಲವ್ ಸಿಂಬಲ್ ಹಾಕಿ ರಿಪ್ಲೈ ಮಾಡಿದ್ದಾರೆ. ಇನ್‌ಸ್ಟಾದ ಈ ಕಮೆಂಟ್ಸ್ ಈ ಇಬ್ಬರೂ ನಾಯಕ ನಟಿಯರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. 'ಎಲ್ಲಾ ಹೆಣ್ಮಕ್ಕಳಿಗೂ ಈ ಚಾಲೆಂಜ್ ಕೊಡಿ, ಈ ಮೂಲಕವಾದರೂ ಮರೆಗೆ ಸರಿದ ನಮ್ಮ ಸಂಸ್ಕೃತಿಯ ಭಾಗವಾಗಿರುವ ಲಂಗ ದಾವಣಿಗೆ ಮರು ಜೀವ ಬರಲಿ' ಅಂತ ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.
'ಕನ್ನಡತಿ' ಸೀರಿಯಲ್‌ನಲ್ಲೂ ರಂಜನಿ ನಟನೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇತ್ತೀಚೆಗೆ ತಾನೇ ಮದುವೆ ಶಾಸ್ತ್ರಗಳೆಲ್ಲ ನಡೆದಿದ್ದು ಇದರಲ್ಲಿ ಮದು ಮಗಳಾಗಿ ರಂಜನಿ ಅವರ ಸೀರೆ, ಅವರು ತೊಟ್ಟ ಆಭರಣ, ಮೇಕಪ್‌ಅನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ.
ಒಟ್ಟಿನಲ್ಲಿ ರಂಜನಿ ರಾಘವನ್‌ಗೆ ಈಗ ಶುಕ್ರದೆಸೆ ಶುರುವಾದಂತಿದೆ.