ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ರಂಜನಿ ನಟಿಸ್ತಿರೋದು ನಿಮಗೆ ಗೊತ್ತೇ ಇದೆ. ಇದರಲ್ಲಿ ರಂಜನಿ ರಾಘವನ್ ಪಾತ್ರವೇನು..? ಪಾತ್ರದ ಬಗ್ಗೆ ಕನ್ನಡತಿ ನಟಿ ಹೇಳಿದ್ದಿಷ್ಟು
ಐಂದಿತ್ರಾ ಮತ್ತು ದಿಗಂತ್ ಮದುವೆಯಾದ ಮೇಲೆ ಮತ್ತೆ ಜೊತೆಯಾಗಿ ಮಾಡುತ್ತಿರುವ ಸಿನಿಮಾದಲ್ಲಿ ಕನ್ನಡತಿಯ ರಂಜನಿ ಕೂಡಾ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಂಜನಿ ಪಾತ್ರವೇನು..?
ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ರಂಜನಿ ಅಪ್ಪಟ ಮಲೆನಾಡ ಹುಡುಗಿಯಾಗಿ ಕಾಣಿಸಲಿದ್ದಾರೆ. ಆದರೆ ಲಂಗ ದಾವಣಿ ಧರಿಸಿ ಟಿಪಿಕಲ್ ಇಮೇಜ್‌ನಲ್ಲಿ ಕಾಣಿಸುವುದಿಲ್ಲ, ಇಂದಿನ ಮಲೆನಾಡ ಸಾಮಾನ್ಯ ಹುಡುಗಿ ಹೇಗಿರುತ್ತಾಳೆ, ಅದೇ ರೀತಿ ನೈಜ್ಯತೆಗೆ ಹತ್ತಿರವಿರಲಿದೆ ಪಾತ್ರ ಎಂದಿದ್ದಾರೆ ರಂಜನಿ ರಾಘವನ್
ನೀಲಿ ಬಟ್ಟೆ ಧರಿಸಿದ್ರೆ ನೋವೇ ಇಲ್ಲ ಎಂದ್ರು ರಂಜನಿ..!
ಇದು ತುಂಬಾ ವಿಭಿನ್ನವಾಗಿರುವ ಪಾತ್ರವಿದು. ಕಾಸ್ಟ್ಯೂಮ್, ಮೇಕಪ್‌ಗಿಂತ ನಾನು, ನನ್ನ ಪಾತ್ರ, ಪರ್ಫಾರ್ಮೆನ್ಸ್ ಕಾಣಿಸಬೇಕು ಅನ್ನೋ ಆಸೆ ಇತ್ತು. ಅದು ಈ ಸಿನಿಮಾ ಮೂಲಕ ನೆರವೇರಿದೆ ಎಂದಿದ್ದಾರೆ ರಂಜನಿ.
ಸದ್ಯ ಕನ್ನಡತಿ ಧಾರವಾಹಿ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ಸಿನಿಮಾದಲ್ಲಿ ಹೇಗೆ ಮಾಡಿದ್ದಾರೆ ಎಂದು ಕಾದು ನೋಡಬೇಕಿದೆ. ಇದು ಐಂದ್ರಿತಾ-ದಿಂಗತ್ ಮದುವೆಯಾದ ಮೇಲೆ ಜೊತೆಗೇ ನಟಿಸುತ್ತಿರುವ ಸಿನಿಮಾ ಆದ ಕಾರಣ ಮಹತ್ವ ಪಡೆದಿದೆ.