ಕನ್ನಡತಿ ಧಾರವಾಹಿಯಲ್ಲಿ ಹರ್ಷ ಮತ್ತು ಭುವಿ ಒಂದಾಗುವ ಸಮಯ ಹತ್ತಿರವಾಗಿರುವಂತೆ ಕಾಣುತ್ತದೆ. ತಂದೆಯನ್ನು ಕಳೆದುಕೊಂಡ ಭುವಿ ಅಮ್ಮಮ್ಮನ ಮಡಿಲಲ್ಲಿ ಮಗುವಾಗಿ ಮಲಗಿದ ಕ್ಷಣ ಭಾವುಕವಾಗಿರಲಿದೆ.
ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ ಅಮ್ಮಮ್ಮನ ಪಾತ್ರ ಸುಂದರವಾಗಿ ಮೂಡಿ ಬರುತ್ತಿದೆ. ನಟಿ ಚಿತ್ಕಲಾ ಬಿರಾದಾರ್ ಅವರು ಮಮತಾಮಯಿ ಅಮ್ಮನಾಗಿ ಹಾಗೆಯೇ ಸದೃಢ ಮಹಿಳೆಯಾಗಿ ಧಾರವಾಹಿಯಲ್ಲಿ ಕಂಡು ಬಂದಿದ್ದಾರೆ.
ಇದೀಗ ಹರ್ಷ-ಭುವಿ ಲವ್ ಸ್ಟೋರಿಯೂ ನಿಧಾನವಾಗಿ ಮುಂದುವರಿಯುತ್ತಿದ್ದು. ರೊಮ್ಯಾನ್ಸ್ ಬದಲಾಗಿ, ಭಾವನಾತ್ಮಕವಾಗಿ ಹಿರೋ ಮತ್ತು ಹಿರೋಯಿನ್‌ಗಳನ್ನು ಒಂದು ಮಾಡುತ್ತಿದ್ದಾರೆ ನಿರ್ದೇಶಕರು.
ಅಪ್ಪಟ ಮಲೆನಾಡ ಹುಡುಗಿಯಾಗಿ ರಂಜನಿ: ತಮ್ಮ ಪಾತ್ರದ ಬಗ್ಗೆ ಹೇಳಿದ್ದಿಷ್ಟು
ಮಂಚದಲ್ಲಿ ಕುಳಿತ ಅಮ್ಮಮ್ಮ, ಆಕೆಯ ಮಡಿಲಲ್ಲಿ ಮಲಗಿದ ಹರ್ಷ-ಮತ್ತು ಭುವಿನ ಸಂದರ್ಭ ಭಾವುಕವಾಗಿ ಮೂಡಿಬರಲಿದೆ. ತಾಯಿ ಇಲ್ಲದೆ, ಈಗ ತಂದೆಯನ್ನೂ ಕಳೆದುಕೊಂಡ ಭುವಿ ಅಮ್ಮಮ್ಮನಲ್ಲಿಯೇ ತನ್ನ ತಾಯಿಯನ್ನು ಕಾಣುತ್ತಿದ್ದಾಳೆ.
ಸಿಂಪಲ್ ಹುಡುಗಿ ಹರ್ಷನ ಹೆಂಡತಿಯಾಗ್ತಾಳಾ..? ಆದರೂ ಸಾನ್ಯಾಳಂನ್ನು ಎದುರಿಸಿ ಅಮ್ಮಮ್ಮನ ಜವಾಬ್ದಾರಿಗಳನ್ನು ಮುಂದುವರೆಸೋಕೆ ಸಾಧ್ಯವಾ..? ಅಮ್ಮಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗಿದ್ದ ಹರ್ಷ ಭುವಿಯ ಲವ್‌ಸ್ಟೋರಿ ಇಂಟ್ರೆಸ್ಟಿಂಗ್ ತಿರುವು ಪಡೆಯಲಿದೆ.