
ಕಿರುತೆರೆಯ ಖ್ಯಾತ ನಟಿ, ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮ ಆಗಿ ಪ್ರೇಕ್ಷಕರ ಹೃದಯ ಗೆದಿದ್ದ ನಟಿ ಚಿತ್ಕಲಾ ಬಿರಾದರ್ ಇದೀಗ ಸನ್ಯಾಸತ್ವ ಪಡೆದಿದ್ದಾರೆ. ಕನ್ನಡತಿ ಧಾರಾವಾಹಿಯಿಂದ ಹೊರ ಬಂದಿರುವ ನಟಿ ಚಿತ್ಕಲಾ ಬಿರಾದರ್ ಬಳಿಕ ಏನ್ಮಾಡ್ತಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಇದೀಗ ಸನ್ಯಾಸತ್ವ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸನ್ಯಾಸತ್ವ ಪಡೆದ ಚಿತ್ಕಲಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಯ್ಯೋ ಚಿತ್ಕಲಾ ಅವರು ಸನ್ಯಾಸಿ ಆದ್ರಾ ಅಂಥ ಅಚ್ಚರಿ ಪಡಬೇಡಿ. ಅವರ ಸನ್ಯಾಸತ್ವ ಪಡೆದಿದ್ದು ಧಾರಾವಾಹಿಗಾಗಿ. ಹೌದು, ಚಿತ್ಕಲಾ ಹೊಸ ಧಾರಾವಾಹಿ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅದರಲ್ಲಿ ಸನ್ಯಾಸಿಯಾಗಿ ಕಾಣಿಸಿಕೊಂಡಿದ್ದಾರೆ.
ನಟಿ ಚಿತ್ಕಲಾ ಅವರು ಕನ್ನಡತಿ ಧಾರಾವಾಹಿಯಲ್ಲಿ ರತ್ನಮಾಲಾ ಹಾಗೂ ಅಮ್ಮಮ್ಮ ಎಂದೇ ಖ್ಯಾತಿ ಗಳಿಸಿದ್ದರು. ಈ ಪಾತ್ರ ಚಿತ್ಕಲಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು, ಅನೇಕರು ಇಷ್ಟಪಟ್ಟಿದ್ದರು. ಆದರೆ ರತ್ನಮಾಲಾ ಪಾತ್ರ ಈಗ ಕನ್ನಡತಿಯಲ್ಲಿ ಕೊನೆಯಾಗಿದೆ. ಆಸ್ತಿಯನ್ನೆಲ್ಲ ಭುವಿ ಹೆಸರಿಗೆ ಬರೆದಿಟ್ಟು ರತ್ನಮಾಲಾ ನಿಧನಹೊಂದಿರು. ರತ್ನಮಾಲಾ ಕೊನೆಗೊಳಿಸಿದ ಬಗ್ಗೆ ಪ್ರೇಕ್ಷಕರು ಕೂಡ ಬೇಸರ ಹೊರಹಾಕಿದ್ದರು. ಅಭಿಮಾನಿಗಳು ಮಾತ್ರವಲ್ಲದೆ ಧಾರಾವಾಹಿ ತಂಡದ ಅನೇಕ ಮಂದಿ ಕೂಡ ಬೇಸರ ಹೊರಹಾಕಿದ್ದರು. ಧಾರಾಹಿಯ ನಾಯಕ ವರ್ಷ ಪಾತ್ರದ ಕಿರಣ್ ರಾಜ್ ಕೂಡ ಕಣ್ಣೀರಾಕಿದ್ದರು.
ಕನ್ನಡತಿ ಸೀರಿಯಲ್: ಶಿಕ್ಷಣದ ಬಗ್ಗೆ ಅರಿವು ಮೂಡಿಸೋ ಭುವಿ ಮಾತು ಸಿಕ್ಕಾಪಟ್ಟೆ ವೈರಲ್!
ಕನ್ನಡತಿ ಧಾರಾವಾಹಿ ಮುಕ್ತಾಯದ ಹಂತಕ್ಕೆ ಬಂದಿದೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಕನ್ನಡತಿ ಧಾರಾವಾಹಿ ಮುಗಿಯಲಿದೆ. ಪ್ರೇಕ್ಷಕರ ಹೃದಯ ಗೆದ್ದಿರುವ ಹರ್ಷ-ಭುವಿ ಪಾತ್ರ ಮುಗಿಯಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಧಾರಾವಾಹಿ ತಂಡ ಎಲ್ಲೂ ಬಹಿರಂಗ ಪಡಿಸಿಲ್ಲ. ರತ್ನಮಾಲಾ ಅಧಿಕಾರವನ್ನು ಭುವಿ ವಹಿಸಿಕೊಂಡಿದ್ದಾಳೆ. ಭಾರಿ ಕುತೂಹಲದಿಂದ ಪ್ರಸಾರವಾಗುತ್ತಿದ್ದ ಕನ್ನಡತಿ ಅಮ್ಮಮ್ಮ ಪಾತ್ರ ಕೊನೆಯಾದ ಬಳಿಕ ಮಂಕಾಗಿತ್ತು. ಅಭಿಮಾನಿಗಳು ಬೇಸರ ಹೊರಹಾಕಿದ್ದರು.
Ramachari Serial: ಶೈಲೂನ ದೇವ್ರೇ ಕಾಪಾಡಿದ, ರಾಮಾಚಾರಿಯನ್ನು ಮದುವೆ ಆಗಲು ಅಜ್ಜಿಯ ಆಫರ್
ಇದೀಗ ಚಿತ್ಕಲಾ ಅವರು ಮತ್ತೊಂದು ಧಾರಾವಾಹಿ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸನ್ಯಾಸಿ ಆಗಿರುವ ಚಿತ್ಕಲಾ ವಿಡಿಯೋ ವೈರಲ್ ಆಗಿದೆ. ಸನ್ಯಾಸಿನಿ ರೀತಿಯಲ್ಲಿ ಬಟ್ಟೆ ಹಾಕಿದ್ದಾರೆ. ಅಂದಹಾಗೆ ಇದು ಯಾವ ಧಾರಾವಾಹಿ ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಈ ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ವಿಡಿಯೋ ಶೇರ್ ಮಾಡಿ ಚಿತ್ಕಲಾ ಅವರು, 'ಕನ್ನಡತಿ ಇನ್ನು ಸನ್ಯಾಸಿನಿ. ಸಿನಿಮಾ ಸೆಟ್ ಒಂದರಲ್ಲಿ' ಎಂದು ಹೇಳಿದ್ದಾರೆ. ಅಂದಹಾಗೆ ಚಿತ್ಕಲಾ ಅವರು ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರ ನಿಭಾಯಿಸಿದ್ದಾರೆ. ಕನ್ನಡತಿ ಮೂಲಕ ದೊಡ್ಡ ಮಟ್ಟದ ಖ್ಯಾತಿ ಪಡಿಸಿದ್ದ ಚಿತ್ಕಲಾ ಅವರ ಹೊಸ ಧಾರಾವಾಹಿ ಕುತೂಹಲ ಮೂಡಿಸಿದೆ. ಅಂದಹಾಗೆ ಯಾವ ಧಾರಾವಾಹಿ, ಯಾವ ವಾಹಿನಿ ಎನ್ನುವ ಮಾಹಿತಿ ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.