ಮದುವೆ ಸೀರೆ ಸಿಕ್ತು, ಛತ್ರ ಬುಕ್ ಆಯ್ತು; ಫಸ್ಟ್‌ ನೈಟ್‌ನೂ ತೋರ್ಸಮ್ಮ ಎಂದು ಮಧು ಗೌಡ ಕಾಲೆಳೆದ ನೆಟ್ಟಿಗರು!

By Vaishnavi Chandrashekar  |  First Published Aug 8, 2024, 5:19 PM IST

ಸೆಪ್ಟೆಂಬರ್‌ ತಿಂಗಳಿನಲ್ಲಿ ಮಧು ಗೌಡ- ನಿಖಿಲ್ ರವೀಂದ್ರ ಮದುವೆ. ಅತ್ತಿಗೆ- ನಾದಿನಿ ವ್ಲಾಗ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್.... 


ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟ-ನಟಿಯರಿಗಿಂತ ಸೋಷಿಯಲ್ ಮೀಡಿಯಾ ಕಂಟೆಂಟ್‌ ಕ್ರಿಯೇಟರ್‌ಗಳ ಹಾವಳಿ ಹೆಚ್ಚಾಗಿದೆ. ಪ್ರತಿನಿತ್ಯ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ತಮ್ಮ ಜೀವನದ ಬಗ್ಗೆ ಅಪ್ಡೇಟ್ ಮಾಡುತ್ತಾರೆ. ಟಿಕ್‌ಟಾಕ್‌ ಮತ್ತು ಮೂಸಿಕಲಿ ಇದ್ದ ಸಮಯದಿಂದ ಬೆಳೆದ ಪ್ರತಿಭಿಗಳು ಅಂದ್ರೆ  ಮಧು ಗೌಡ ಮತ್ತು ನಿಶಾ ರವೀಂದ್ರ. ಕೆಲವು ದಿನಗಳ ಹಿಂದೆ ಮಧು ಗೌಡ ಮತ್ತು ನಿಶಾ ಗೌಡ ಅಣ್ಣನಾದ ನಿಖಿಲ್ ರವೀಂದ್ರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಇವರು ಮದುವೆ ಬಗ್ಗೆ ನೆಟ್ಟಿಗರಿಗೆ ಸಾಕಷ್ಟು ಕುತೂಹಲವಿದೆ. 

ಹೌದು! ಇದೇ ಸೆಪ್ಟೆಂಬರ್‌ ತಿಂಗಳಿನಲ್ಲಿ ಮಧು ಗೌಡ ಮತ್ತು ನಿಖಿಲ್ ರವೀಂದ್ರ ಮದುವೆಯಾಗುತ್ತಿದ್ದಾರೆ. ಆಷಾಡ ಮಾಸ ಕಳೆಯುತ್ತಿದ್ದಂತೆ ಈ ಜೋಡಿ ಮದುವೆ ಶಾಪಿಂಗ್ ಶುರು ಮಾಡಿಕೊಂಡಿದ್ದಾರೆ. ಯೂಟ್ಯೂಬ್ ವ್ಲಾಗ್‌ನಲ್ಲಿ ಅತ್ತಿಗೆ ನಾದಿನಿ ಒಬ್ರೂ ಪ್ರತಿಯೊಂದನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಕಂಚಿಯಲ್ಲಿ ಸೀರೆ ಶಾಪಿಂಗ್ ಮಾಡಿರುವುದು, ಬೀಗರ ಊಟಕ್ಕೆ ಛತ್ರ ಹುಡುಕುತ್ತಿರುವುದು, ಮದುವೆ ಮುನ್ನ ಭೀಮನ ಅಮವಾಸ್ಯೆಗೆ ಏನ್ ಮಾಡ್ತಾರೆ, ಮದುವೆ ಛತ್ರ ಫಿಕ್ಸ್‌ ಹೀಗೆ ಒಂದೊಂದೆ ಹಾಕುತ್ತಿದ್ದಾರೆ. ಇವರು ನಿಜಕ್ಕೂ ದುಡ್ಡು ಖರ್ಚು ಮಾಡಿ ಮದುವೆಯಾಗುತ್ತಿದ್ದಾರಾ ಅಥವಾ ಅದೂ ಕೋಲಾಬೋರೇಷನ್‌ ಅನ್ನೋ ಹೆಸರಿನಲ್ಲಿ ಫ್ರೀ ಮಾಡಿಸಿಕೊಳ್ಳುತ್ತಿದ್ದಾರಾ ಅಂತ. 

Tap to resize

Latest Videos

ಯಾರಿಗೂ ಸಿಗುತ್ತಿಲ್ಲ, ಎಲ್ಲೂ ಕಾಣಿಸುತ್ತಿಲ್ಲ; ರಚಿತಾ ರಾಮ್‌ ಮನೆಗೆ ನುಗ್ಗುತ್ತೇವೆ ಅಂತಿದ್ದಾರೆ ಫ್ಯಾನ್ಸ್!

ಇನ್ನೂ ಪ್ರತಿಯೊಂದನ್ನು ಅಪ್ಲೋಡ್ ಮಾಡುತ್ತಿರುವ ಕಾರಣ ಕೆಲವರು ಗರಂ ಆಗಿದ್ದಾರೆ. ಇಷ್ಟೆಲಾ ತೋರಿಸುತ್ತಿದ್ದೀರಿ ಅಂದ್ಮೇಲೆ ನೀವು ಮದುವೆ ಮೊದಲ ರಾತ್ರಿ ಎಲ್ಲಿ ನಡೆಯುತ್ತದೆ, ಹೇಗಿರುತ್ತೆ, ಯಾವ ರೀತಿ ರೆಡಿಯಾಗಿದ್ದೀರಿ, ಯಾವ ಡಿಸೈನರ್‌ ನಿಮ್ಮ ಫಸ್ಟ್‌ ನೈಟ್‌ಗೆ ಡ್ರೆಸ್‌ ರೆಡಿ ಮಾಡಿದ್ದಾರೆ ಎಂದು ಪ್ರತಿಯೊಂದನ್ನು ತೋರಿಸಿಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಹೊರತಾಗಿ ನಮಗೂ ಒಂದು ಜೀವನ ಇದೆ ನಾವು ಕೂಡ ಪ್ರತಿಯೊಂದನ್ನು ತೋರಿಸುವುದಿಲ್ಲ ಎಂದು ವಿಡಿಯೋದಲ್ಲಿ ಹೇಳುತ್ತಲೇ ಇರುತ್ತಾರೆ ಆದರೂ ಕೂಡ ವಿಡಿಯೋಗಳನ್ನು ನೋಡುವ ನೆಟ್ಟಿಗರು ಅದನ್ನು ನಂಬುವುದಿಲ್ಲ. ಫೋಟೋಶೂಟ್ ಮೂಲಕ ನಿಶ್ಚಿತಾರ್ಥದ ದಿನಾಂಕವನ್ನು ರಿವೀಲ್ ಮಾಡಿದ್ದರು,....ಇನ್ನು ಮದುವೆಗೆ ಯಾವ ರೀತಿ ಶೂಟ್ ಮಾಡಿಸುತ್ತಾರೆ ನೋಡಬೇಕಿದೆ. 

click me!