ಮೂಡಲಮನೆ ‘ನಾಣಿ’ ಕಿರುತೆರೆ ಕಲಾವಿದ ಅನಿಲ್ ಇನ್ನಿಲ್ಲ

Published : Apr 03, 2019, 10:16 PM ISTUpdated : Apr 03, 2019, 10:23 PM IST
ಮೂಡಲಮನೆ ‘ನಾಣಿ’ ಕಿರುತೆರೆ ಕಲಾವಿದ ಅನಿಲ್ ಇನ್ನಿಲ್ಲ

ಸಾರಾಂಶ

ಕನ್ನಡ ಕಿರುತೆರೆ ಒಬ್ಬ ಅತ್ಯುತ್ತಮ ಕಲಾವಿದರನ್ನು ಕಳೆದುಕೊಂಡಿದೆ.  ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಅನಿಲ್ ಕೊನೆಯುಸಿರು ಎಳೆದಿದ್ದಾರೆ.

ಬೆಂಗಳೂರು[ಏ. 03]  ರಂಗಭೂಮಿ ಹಾಗೂ ಕಿರುತೆರೆಯಲ್ಲಿ ತಮ್ಮದೆ ಆದ ಅಭಿನಯದ ಮೂಲಕ ಮನೆಮಾತಾಗಿದ್ದ ಕಲಾವಿದ ಅನಿಲ್ ನಿಧನ ಹೊಂದಿದ್ದಾರೆ. ಬಹು ಅಂಗಾಂಗಗಳ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ.

ಅನಿಲ್ ಕುಮಾರ್ ಹಾಗೂ ದರ್ಶನ್ ನೀನಾಸಂನಲ್ಲಿ ಒಟ್ಟಾಗಿ ನಾಟಕ ಅಭ್ಯಾಸ ಮಾಡುತ್ತಿದ್ದು ಒಳ್ಳೆಯ ಸಹಪಾಠಿಗಳಾಗಿದ್ದರು. ಕಷ್ಟ ಎಂದಾಕ್ಷಣ ಒಂದು ನಿಮಿಷವೂ ಯೋಚಿಸದೇ ಸಹಾಯಕ್ಕೆ ಮುಂದಾಗುವ ದರ್ಶನ್ ತನ್ನ ಸಹಪಾಠಿ ಅನಿಲ್ ಗೆ ನೆರವು ನೀಡಿದ್ದರು. ಅನಿಲ್ ನಿಧನಕ್ಕೆ ಅನೇಕ ಕಲಾವಿದರು ಸಂತಾಪ ಮಿಡಿದಿದ್ದಾರೆ.

ಮಾತು ನಿಲ್ಲಿಸಿದ್ದ ಅಪ್ರತಿಮ ಕಲಾವಿದ

'ಮೂಡಲ ಮನೆ'  ಧಾರಾವಾಹಿಯ ನಾಣಿ ಪಾತ್ರದ ಹೆಸರು ಅನಿಲ್ ಅವರಿಗೆ ಜತೆಯಾಗಿತ್ತು. ದುನಿಯಾ ವಿಜಯ್ ಅಭಿನಯದ 'ಕರಿಯ ಕಣ್ಬಿಟ್ಟ' ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚಿಗೆ ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಕವಲುದಾರಿ' ಸಿನಿಮಾದಲ್ಲಿಯೂ ಅಭಿನಯಿಸಿದ್ದ ಅವರು ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ಎಲ್ಲ ರೀತಿಯ ಪಾತ್ರ ನಿರ್ವಹಿಸಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial Update: ಕರ್ಣ-ನಿಧಿ ಮತ್ತೆ ದೂರ… ಪ್ರೇಮಿಗಳನ್ನು ಒಂದು ಮಾಡದ ಸೀರಿಯಲ್ ತಂಡಕ್ಕೆ ವೀಕ್ಷಕರ ಹಿಡಿಶಾಪ
BBK 12 ಮಿಡ್‌ ವೀಕ್‌ ಎಲಿಮಿನೇಶನ್‌ ಆಯ್ತು; ಭಯದಲ್ಲೇ ಪ್ರಾರ್ಥಿಸುತ್ತ ಬಾಗಿಲೊಳಗೆ Rakshita Shetty