ಕ್ವಾರ್ಟರ್ ಫಿನಾಲೆಯಿಂದ ಎಲಿಮಿನೇಟ್ ಆದ ಮಿಸ್ಟರ್ ಆ್ಯಂಡ್ ಮಿಸಸ್ ಸುಜಯ್. ಭಾವುಕವಾಯಿತು ಇಡೀ ಕುಟುಂಬ....
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ (Reality Show) ಸೆಮಿ ಫಿನಾಲೆ ಹಂತ ತಲುಪುತ್ತಿದೆ. ಕಳೆದ ವೀಕೆಂಡ್‌ನಲ್ಲಿ ನಡೆದ ಕ್ವಾರ್ಟರ್ ಫಿನಾಲೆ ಎಪಿಸೋಡ್‌ನಲ್ಲಿ ಮಿಸ್ಟರ್ ಮತ್ತು ಮಿಸಸ್ ಸುಜಯ್ ಎಲಿಮಿನೇಟ್ (Eliminate) ಆಗಿದ್ದಾರೆ. ರಾಜಾ ರಾಣಿ (Raja Rani) ಇಡೀ ತಂಡ ವಿದಾಯ ಹೇಳುವಾಗ ಭಾವುಕವಾಗಿತ್ತು.
ಕ್ವಾರ್ಟರ್ ಫಿನಾಲೆ (Quater Finale) ಎಪಿಸೋಡ್‌ನಲ್ಲಿ ಪ್ರತಿ ಜೋಡಿಯೂ ತಮ್ಮ ಸಾಮರ್ಥ್ಯಕ್ಕೂ ಮೀರಿದ ಡ್ಯಾನ್ಸ್ (Dance) ಅನ್ನು ಆಯ್ಕೆ ಮಾಡಿಕೊಂಡು, ಹೆಜ್ಜೆ ಹಾಕಬೇಕು. ಡ್ಯಾನ್ಸ್ ಮಾಡುವಾಗ ಒಂದು ಪ್ರಾಪರ್ಟಿ (Property) ಬಳಸಿ ಡ್ಯಾನ್ಸರ್‌ಗಳ ಜೊತೆ ಕುಣಿಯಬೇಕಿತ್ತು. ಇಡೀ ಶೋನಲ್ಲಿ ಅತಿ ಕಡಿಮೆ ಅಂಕ (Marks), ಒಂದು ವಾರವೂ ರಾಜಾ ರಾಣಿ ಆಫ್ ದಿ ವೀಕ್ ಪಡೆಯದ ಹಾಗೂ ಎರಡು ಜೋಡಿಗಳ ನಡುವೆ ನಡೆಯುವ ಟಾಸ್ಕ್ (Task) ಗೆಲ್ಲದಿದ್ದರೆ, ಎಲಿಮಿನೇಷನ್ ಝೋನ್ ಮುಟ್ಟುತ್ತಾರೆ. ಈ ವಾರ ಎಲಿಮಿನೇಟ್ ಆಗಲು ಮೂರು ಜೋಡಿಗಳಿದ್ದವು. ಅವರಲ್ಲಿ ಸಮೀರ್ ಆಚಾರ್ಯ (Sameer Acharya) ಮತ್ತು ಶ್ರಾವಣಿ ಮೊದಲು ಸೇಫ್ ಆದರು. ಆನಂತರ ಪವನ್ ವೇಣುಗೋಪಾಲ್ (Pavan Venugopal) ಮತ್ತು ಸುಮನ್ ಸೇಫ್ ಆಗಿದ್ದಾರೆ.
ಅವಸರದಲ್ಲಿ ಜಿಲೇಬಿ ತಿನ್ನಲು ಹೋಗಿ ಚಂದನ್ ಶೆಟ್ಟಿ ಬೆರಳು ಕಚ್ಚಿದ ನಿವೇದಿತಾ ಗೌಡ!ಸುಜಯ್ (Sujay) ಮತ್ತು ಸಿಂಚನಾ (Sinchana) ವೇದಿಕೆ ಬಿಡುತ್ತಿದ್ದಾರೆ, ಎನ್ನುವ ವಿಚಾರ ತಿಳಿಸುವಾಗ ತಾರಾ ಅನುರಾಧ (Tara Anuradha) ಭಾವುಕರಾದರು. ಕಾರ್ಯಕ್ರಮದಿಂದ ಒಂದೊಳ್ಳೆ ನೆನಪುಗಳು, ಸ್ನೇಹಿತರನ್ನು ಸಂಪಾದಿಸಿಕೊಂಡು ಹೋಗುತ್ತಿರುವ ಸಂತೋಷವಿದೆ ಎಂದು ಸಿಂಚನಾ ಭಾವುಕವಾಗಿ ಮಾತನಾಡಿದ್ದಾರೆ. ಅಪರೂಪಕ್ಕೆ ಇಬ್ಬರೂ ವೇದಿಕೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿರುವುದು, ಎಲ್ಲರ ಪ್ರೀತಿ ಗಳಿಸಿದ್ದೀವಿ ಹಾಗೂ ಇಲ್ಲಿ ಒಂದು ಕುಟುಂಬ ಕಟ್ಟಿ ಕೊಂಡಿದ್ದೀವಿ ಎಂದು ಸುಜಯ್ ಹೇಳಿದ್ದಾರೆ.
ವೇದಿಕೆ ಮೇಲೆ ವೀಕ್ಷಕರನ್ನು ನಗಿಸಿ, ಅಳಿಸುವ ಏಕೈಕಾ 'ರಾಜಾ ರಾಣಿ' ಜೋಡಿ ಪವನ್ ವೇಣುಗೋಪಾಲ್!'ಈಗ ಕ್ವಾರ್ಟರ್ ಫಿನಾಲೆಗೆ ನಡೆಯುತ್ತಿರುವ ಎಲಿಮಿನೇಷನ್ ಮುಂಚೆಯೇ ನಡೆಯಬೇಕಿತ್ತು. ಆದರೆ ರಾಜು ತಾಳಿಕೋಟಿ (Raju Talikote) ಕುಟುಂಬ ಅವರಾಗೇ ಹೊರಟರು, ಅಯ್ಯಪ್ಪ (Cricketer Ayappa) ಅವರಿಗೆ ಕ್ರಿಕೆಟ್ ಮ್ಯಾಚ್ ಇತ್ತು ಎಂದು ಆ ಜೋಡಿಯೂ ಸೆಲ್ಫ್ ಎಲಿಮಿನೇಟ್ ಆಯಿತು. ಹೀಗಾಗಿ ಇವತ್ತು ನೀವು ಹೋಗುತ್ತಿರುವುದು. ಈಗ ಎಲಿಮಿನೇಟ್ ಆದವರು ಫಿನಾಲೆ ಕಾರ್ಯಕ್ರಮಕ್ಕೆ ಬರಲೇ ಬೇಕು,' ಎಂದು ತೀರ್ಪುಗಾರ ಸೃಜನ್ ಲೋಕೇಶ್ (Srujan Lokesh) ಮಾತನಾಡಿದ್ದಾರೆ.
ಈ ಕಾರ್ಯಕ್ರಮಲ್ಲಿರುವ ಹಲವರು ಈಗಾಗಲೇ ಸೋಷಿಯಲ್ ಮೀಡಿಯಾ (Social Media) ಅಥವಾ ಟಿವಿ ಮೂಲಕ ಗುರುತಿಸಿಕೊಂಡಿರುವವರು. ಆದರೆ ಇಬ್ಬರು ಮಾತ್ರ ರಾಜ ರಾಣಿ ವೇದಿಕೆಗೆ ಬಂದು ಎಲ್ಲರೊಂದಿಗೆ ಬೆರೆತು ಎಲ್ಲರ ಪ್ರೀತಿ ಗಳಿಸಿ, ಈಗ ಅವರು ಕೂಡ ಸೆಲೆಬ್ರಿಟಿ ಆಗಿ ಹೊರಗಡೆ ಬರುತ್ತಿದ್ದಾರೆಂದು ಹೇಳಿ ತಾರಾ ಅನುರಾಧ ಅವರು ವೇದಿಕೆ ಮೇಲೆ ಸುಮನ್ (Suman) ಮತ್ತು ಸಿಂಚನಾ ಅವರನ್ನು ಕರೆದು ಹೊಗಳಿದ್ದಾರೆ. ಈ ರಾಜ ರಾಣಿ ವೇದಿಕೆಯನ್ನು ಉಪಯೋಗಿಸಿಕೊಂಡು, ವೃತ್ತಿ ಜೀವನದಲ್ಲಿ ಬೆಳೆಯುತ್ತಿರುವುದು ಪವನ್ ವೇಣುಗೋಪಾಲ್ ಎಂದು ಸೃಜನ್ ಹೇಳಿದ್ದಾರೆ