
ಕಾರು ಖರೀದಿ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಕಿರುತೆರೆ ನಟ| ಗಟ್ಟಿಮೇಳದ ರಕ್ಷ ಅವರಿಂದ ಅಭಿಮಾನಿಗಳಿಗೆ ವಂದನೆ| ಬಿಎಂಟಿಸಿ ಪಾಸ್ ನಿಂದ ಇಲ್ಲಿಯವರೆಗೆ
ಒಂದು ಕಾಲದಲ್ಲಿ ಬಿಎಂಟಿಸಿ ಪಾಸ್ ಪಡೆದು ಸಂಚಾರ ಮಾಡುತ್ತಿದ್ದೆ. ಇಂದು ಅದೇ ಜಾಗದಲ್ಲಿ ಆಡಿ ಕಾರ್ ತಂದು ನಿಲ್ಲಿಸಿದ್ದೇನೆ ಎಂದು ತಮ್ಮ ಸಂತಸವನ್ನು ಕಿರುತೆರೆ ನಟ ಹಂಚಿಕೊಂಡಿದ್ದಾರೆ.
ಕಿರುತೆರೆ ಕಲಾವಿದ, ಗಟ್ಟಿಮೇಳ ಧಾರಾವಾಹಿ ಮೂಲಕ ಮನೆ ಮಾತಾಗಿರುವ ರಕ್ಷ್ ದುಬಾರಿ ಕಾರು ಖರೀದಿಸಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
‘ಗಟ್ಟಿಮೇಳ’ ಧಾರಾವಾಹಿಯಲ್ಲಿ ವೇದಾಂತ್ ಪಾತ್ರದಲ್ಲಿ ನಟಿಸುತ್ತಿರುವ ನಟ ರಕ್ಷ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ತಮ್ಮ ಹುಟ್ಟುಹಬ್ಬಕ್ಕಾಗಿ ರಕ್ಷ್ ದುಬಾರಿ ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಖರೀದಿಸಿದ್ದಾರೆ. ಈ ಬಗ್ಗೆ ಸ್ವತಃ ರಕ್ಷ್ ತಮ್ಮ ಇಸ್ಟಾಗ್ರ್ಯಾಮ್ ಖಾತೆಯಲ್ಲಿ ವಂದನೆ ಹೇಳಿದ್ದಾರೆ.
ಅಗ್ನಿಸಾಕ್ಷಿ ಮುಗಿದ ಮೇಲೆ ಸನ್ನಿಧಿ ಎಲ್ಲಿಗೆ ಹೋದ್ರು?
ಕಿರುತೆರೆಯಲ್ಲಿ 10 ವರ್ಷ ದುಡಿದ ಬಳಿಕ ನನ್ನ ಹುಟ್ಟುಹಬ್ಬದಂದು ಈ ದುಬಾರಿ ಮತ್ತು ಅಪರೂಪದ ಕಾರು ಖರೀದಿ ಮಾಡಿದ್ದೇನೆ. ಈ ಕಾರನ್ನು ಖರೀದಿಸಲು ನನಗೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು. ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಇದಾಗಿದ್ದು, ದೇಶದಲ್ಲಿ ಇದು ಬಹಳ ಅಪರೂಪ. ಬಿಎಂಟಿಸಿ ಪಾಸ್ ನಿಂದ ಇಲ್ಲಿಯವರೆಗೆ..... ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ರಕ್ಷ್ ಅವರ ಈ ಕಮೆಂಟ್ ಗೆ ಅಭಿಮಾನಿಗಳು ಸಹ ಉತ್ತರ ನೀಡಿದ್ದಾರೆ. ನೀವು ಸದಾ ಹೀಗೆ ಇರಬೇಕು..ಒಳ್ಳೆಯದಾಗಲಿ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.