ಚಂದನಾ ಹೊರಬರಲು ಅಸಲಿ ಕಾರಣ ಹೇಳಿದ ಸುದೀಪ್, ಪಾಪ ಪ್ರಿಯಾಂಕಾ!

By Suvarna News  |  First Published Jan 5, 2020, 10:39 PM IST

ಬಿಗ್ ಬಾಸ್ ಮನೆಯಿಂದ ಹೊರ ಬಂದ ಸುಂದರಿ| ಚಂದನಾ ಅನಂತಕೃಷ್ಣ ಮನೆಯಿಂದ ಹೊರಕ್ಕೆ| ಚಂದನಾ ಹೊರಬರಲು ನಿಜವಾದ ಕಾರಣ ಏನು?


ಬಿಗ್ ಬಾಸ್ ಮನೆಯ ಕ್ಯೂಟ್ ಚಂದನಾ ಅನಂತಕೃಷ್ಣ ಮನೆಯಿಂದ ಹೊರಗೆ ಬಿದ್ದಿದ್ದಾರೆ. ವೇದಿಕೆ ಮೇಲೆ ಸುದೀಪ್ ಕೇಳಿದ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾಗಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿ ನೀವೊಂದು ಕಂಪ್ಲೆಂಟ್ ಬಾಕ್ಸ್ ಆದ್ರಿ? ಮಾತೆತ್ತಿದರೆ ವಾಸುಕಿ, ಶೈನ್ ಎಂದುಕೊಂಡಿದ್ದೆ ನಿಮ್ಮ ಈ ಸ್ಥಿತಿಗೆ ಕಾರಣ ಆಯ್ತಾ? ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಸಾಗಿದರು.

Tap to resize

Latest Videos

undefined

ಅತಿ ಕಿರಿಯ ಕಂಟೆಸ್ಟಂಟ್ ಆಗಿದ್ರಿ. ಭೂಮಿ ಆಟ ನೋಡಿ ಬದಲಾಯಿಸಿಕೊಳ್ಳಬೇಕು ಎಂದು ಅನಿಸಲಿಲ್ವಾ? ವ್ಯತ್ಯಾಸ ಏನು ಎಂದರೆ ಅವರು ಮನೆಯೊಳಗಿದ್ದಾರೆ, ನೀವು ಇಲ್ಲಿಗೆ ಹಲೋ ಹೇಳಲು ಬಂದಿದ್ದೀರಿ ಎಂದು ಸುದೀಪ್ ಹೇಳಿದರು.

ಎಲ್ಲರಿಂದಲೂ ನಾಮಿನೇಶನ್ ಗೆ ಒಳಗಾಗುವ ಚಂದನ್ ಆಚಾರ್ ಹೆಚ್ಚು ವೋಟ್ ಗಳಿಸಿದ್ದು ಹೇಗೆ?

ಈ ಮೂಲಕ ಮನೆಯಲ್ಲಿ 84 ದಿನ ಇದ್ದರೋ ನೀವುಯ ಯಾರದ್ದೋ ಮುಲಾಜಿಗೆ ಬಿದ್ದು ಆಟ ಆಡಿದ್ರಿ. ಹಾಗಾಗಿಯೇ ಈ ಸ್ಥಿತಿಗೆ ಬಂದ್ರಿ ಎಂದು ಸುದೀಪ್ ವಿವರಣೆ ನೀಡಿದರು.

ಮನೆಯಲ್ಲಿ ಸುಂದರವಾಗಿ ಹಾಡುತ್ತಿದ್ದ ಚಂದನಾ ಅನಂತಕೃಷ್ಣ ಮನೆಯಿಂದ ಹೊರಬಂದಿದ್ದಾರೆ. ಹೊರ ಬರುತ್ತ ಚಂದ್ರಿಕಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿ ಬಂದಿದ್ದಾರೆ.

 

click me!