
ಕಳೆದ ಆಗಸ್ಟ್ 3ರಂದು ಕನ್ನಡ ಕೋಗಿಲೆ ರಿಯಾಲಿಟಿ ಶೋ ಸ್ಪರ್ಧಿ, ಗಾಯಕಿ ಸವಿತಕ್ಕ ಅವರ 14 ವರ್ಷದ ಮಗ ಗಾಂಧಾರ 'ಡೆತ್ ನೋಟ್' ಎನ್ನುವ ಸಿರೀಸ್ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ರೂಮ್ ತುಂಬೆಲ್ಲ ಆತ ಈ ಸಿರೀಸ್ ಪೋಸ್ಟರ್ ಅಂಟಿಸಿಕೊಂಡಿದ್ದನು, ಅಷ್ಟೇ ಅಲ್ಲದೆ ಆ ಪಾತ್ರಗಳ ಚಿತ್ರ ಬಿಡಿಸಿದ್ದನಂತೆ. ಹಾಗಾದರೆ ಆ ಸಿರೀಸ್‌ನಲ್ಲಿ ಏನಿದೆ?
'ಡೆತ್ ನೋಟ್' ಒಂದು ಜಪಾನಿನ ಟಿವಿ ಸರಣಿಯಾಗಿದ್ದು, ಇದನ್ನು ತ್ಸುಗುಮಿ ಓಬಾ ಬರೆದಿದ್ದಾರೆ. ಇದು ಶುಯೇಶಾದ ವೀಕ್ಲಿ ಶೋನೆನ್ ಜಂಪ್‌ನಲ್ಲಿ ಡಿಸೆಂಬರ್ 2003 ರಿಂದ ಮೇ 2006 ರವರೆಗೆ ಪ್ರಸಾರ ಆಗಿದೆ. ಒಟ್ಟು 12 ಎಪಿಸೋಡ್‌ಗಳಿವೆ. ಲೈಟ್ ಯಾಗಮಿ ಎಂಬ ಪ್ರತಿಭಾವಂತ ಪ್ರೌಢಶಾಲಾ ವಿದ್ಯಾರ್ಥಿಗೆ, ಶಿನಿಗಾಮಿ ರ್ಯುಕ್‌ನಿಂದ ಬಿಡುಗಡೆಯಾದ "ಡೆತ್ ನೋಟ್" ಎಂಬ ನೋಟ್‌ಬುಕ್ ಸಿಗುವುದು. ಈ ನೋಟ್‌ಬುಕ್‌ನಲ್ಲಿ ಯಾರಾದರೂ ವ್ಯಕ್ತಿಯ ಹೆಸರು ಬರೆದು, ಅವರ ಮುಖವನ್ನು ಊಹಿಸಿದರೆ, ಆ ವ್ಯಕ್ತಿಯನ್ನು ಕೊಲ್ಲಬಹುದು.
ಬರೆಯುವವನಿಗೆ ಆ ವ್ಯಕ್ತಿಯ ಹೆಸರು ಮತ್ತು ಮುಖ ಗೊತ್ತಿರಬೇಕು. ಈ ಡೆತ್ ನೋಟ್‌ನ ಬಳಕೆಯಿಂದ ಲೈಟ್ ಅಪರಾಧಿಗಳನ್ನು ಸಾಯಿಸುತ್ತಾನೆ. "ಕಿರಾ" ಎಂಬ ಅಡಿಬರಹದಡಿ ಅಪರಾಧ-ಮುಕ್ತ "ಹೊಸ ಜಗತ್ತನ್ನು" ಸೃಷ್ಟಿಸಲು ಯತ್ನಿಸುತ್ತಾನೆ. ಇದರಿಂದ ಜಾಗತಿಕ ತನಿಖೆ ಆರಂಭವಾಗುತ್ತದೆ.
ಅನಿಮೆ (2006–2007): ತೆತ್ಸುರೋ ಅರಾಕಿ ನಿರ್ದೇಶಿಸಿದ, ಮ್ಯಾಡ್‌ಹೌಸ್‌ನಿಂದ ಅನಿಮೇಟ್ ಮಾಡಲ್ಪಟ್ಟ 37 ಕಂತುಗಳ ಈ ಸರಣಿಯು ಜಪಾನ್‌ನ ನಿಪ್ಪಾನ್ ಟಿವಿಯಲ್ಲಿ 2006 ರಿಂದ 2007 ರವರೆಗೆ ಪ್ರಸಾರವಾಯಿತು. ಇದು ಮಂಗಾದ ಕಥೆಯನ್ನು ಆಧರಿಸಿದ್ದು, ಲೈಟ್, ಎಲ್‌ನ ನಡುವಿನ ಮಾನಸಿಕ ಯುದ್ಧವನ್ನು ಹೇಳುವುದು. ಇದನ್ನು ವಿಝ್ ಮೀಡಿಯಾ ಉತ್ತರ ಅಮೆರಿಕಾದಲ್ಲಿ ಪರವಾನಗಿ ಪಡೆದಿದ್ದು, ಕಾರ್ಟೂನ್ ನೆಟ್‌ವರ್ಕ್‌ನ ಅಡಲ್ಟ್ ಸ್ವಿಮ್‌ನಲ್ಲಿ ಪ್ರಸಾರವಾಯಿತು.
2006 ರಲ್ಲಿ ಎರಡು ಸಿನಿಮಾಗಳೊಂದಿಗೆ ಆರಂಭವಾದ ಈ ಸರಣಿಯು 2016 ರಲ್ಲಿ 'ಡೆತ್ ನೋಟ್: ನ್ಯೂ ಜನರೇಷನ್', 'ಡೆತ್ ನೋಟ್: ಲೈಟ್ ಅಪ್ ದಿ ನ್ಯೂ ವರ್ಲ್ಡ್' ಎಂಬ ಮಿನಿ ಸರಣಿಯೊಂದಿಗೆ ಪ್ರಸಾರ ಆಯಿತು. ಇವು ಕೆಲವು ಹೊಸ ಪಾತ್ರಗಳನ್ನು ಪರಿಚಯಿಸಿದೆ.
ಟಿವಿ ಡ್ರಾಮಾ (2015): ನಿಪ್ಪಾನ್ ಟಿವಿಯಲ್ಲಿ ಪ್ರಸಾರವಾದ ಈ ಲೈವ್ ಆಕ್ಷನ್ ಇರುವ ಈ ಸರಣಿಯಲ್ಲಿ ಮಸತಕ ಕುಬೋಟಾ ಲೈಟ್ ಯಾಗಮಿಯಾಗಿ, ಕೆಂಟೋ ಯಮಾಝಾಕಿ ಎಲ್‌ನಾಗಿ ನಟಿಸಿದ್ದಾರೆ. ಇದು ಲೈಟ್‌ನನ್ನು ಪ್ರೌಢಶಾಲಾ ವಿದ್ಯಾರ್ಥಿಯ ಬದಲಿಗೆ ಕಾಲೇಜು ವಿದ್ಯಾರ್ಥಿಯಾಗಿ ತೋರಿಸುವುದು.
ಮಾನಸಿಕ ವಿಚಾರದಲ್ಲಿ ಕಥೆಯ ಆಳವಿದೆ , ನೈತಿಕ ಪ್ರಶ್ನೆಗಳು, ಲೈಟ್ ಮತ್ತು ಎಲ್‌ನ ನಡುವಿನ ತಂತ್ರಗಾರಿಕೆಯ ಯುದ್ಧವು ಖ್ಯಾತಿ ಪಡೆದಿದೆ. ವಿಶ್ವಾದ್ಯಂತ 30 ಮಿಲಿಯನ್‌ಗಿಂತಲೂ ಹೆಚ್ಚು ಮಂಗಾ ಪ್ರತಿಗಳು ಮಾರಾಟವಾಗಿವೆ. ರಾಟನ್ ಟೊಮೇಟೊಸ್‌ನಲ್ಲಿ ಅನಿಮೆಗೆ ಒಳ್ಳೆಯ ರೇಟಿಂಗ್ ದೊರೆತಿದೆ. ಕಥೆಯ ಗಂಭೀರ ನಿರೂಪಣೆಗೆ ಈ ಸಿರೀಸ್‌ನ್ನು ಶ್ಲಾಘಿಸಲಾಗಿದೆ.
ಡೆತ್ ನೋಟ್ ಜಪಾನಿನ ಸಾಂಪ್ರದಾಯಿಕ ಕಲ್ಪನೆಯಾದ ಪದಗಳಲ್ಲಿ ಆತ್ಮಗಳು ವಾಸಿಸುವ ಆಲೋಚನೆಯನ್ನು ಪ್ರತಿಬಿಂಬಿಸುತ್ತದೆ ಎಂದು ನಿರ್ದೇಶಕ ಶುಸುಕೆ ಕಾನೆಕೊ ತಿಳಿಸಿದ್ದಾರೆ. ಈ ಸರಣಿಯು ನ್ಯಾಯ, ಕೊಲೆಯ ಬಗ್ಗೆ ಆಳವಾದ ಪ್ರಶ್ನೆಗಳನ್ನು ಎತ್ತುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.