
ಕಷ್ಟಗಳನ್ನು ಹೇಳಿಕೊಂಡು ಯಾಕೆ ಅಳಬೇಕು? ನಾವು ಎಲ್ಲವನ್ನು ಎದುರಿಸಬೇಕು ಎಂದು ಕಳೆದ ಹದಿನೈದು ದಿನಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದ ಜಾನಪದ ಗಾಯಕಿ ಸವಿತಾಗೆ ( Janapada Singer Savitha ) ಈಗ ಪಿತೃ ವಿಯೋಗ. ಹೌದು, ಸವಿತಕ್ಕನವರ 13 ವರ್ಷದ ಮಗ ಗಾಂಧಾರ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.
ಡೆತ್ ನೋಟ್ ಬರೆದಿಟ್ಟು 7ನೇ ಕ್ಲಾಸ್ ಹುಡುಗ ಮನೆಯಲ್ಲಿ ರಾತ್ರಿ ನೇಣು ಹಾಕಿಕೊಂಡಿದ್ದಾನೆ. ಬೆಳಗ್ಗೆ ಎದ್ದ ತಂದೆ ಮೊದಲ ಮಗನಿಗೆ, ತಮ್ಮನನ್ನು ಎಬ್ಬಿಸು, ನಾಯಿಯನ್ನು ಕರೆದುಕೊಂಡು ಹೊರಗಡೆ ಹೋಗಿ ಬರಲಿ ಎಂದು ಹೇಳಿದ್ದಾರೆ. ರೂಮ್‌ನಲ್ಲಿ ಬೆಡ್ ಮೇಲೆ ಪಿಯಾನೋ ಇಟ್ಟು, ಅದರ ಮೇಲೆ ಬೆಡ್‌ಶೀಟ್ ಹೊದಿಸಿ, ಆಮೇಲೆ ನೇಣು ಹಾಕಿಕೊಂಡಿರೋದು ಗೊತ್ತಾಗಿದೆ.
ನಟಿ, ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸವಿತಕ್ಕ ಅವರು ತಾವು ಪಟ್ಟ ಕಷ್ಟವನ್ನು ಎಲ್ಲಿಯೂ ಹೇಳಿಕೊಳ್ಳೋದಿಲ್ಲ ಎಂದು ಹೇಳಿದ್ದರು. ರಿಯಾಲಿಟಿ ಶೋಗಳಲ್ಲಿ ಕಷ್ಟಗಳನ್ನು ಹೇಳಿಕೊಂಡು ಸಿಂಪಥಿ ಗಿಟ್ಟಿಸಿಕೊಳ್ಳೋದಿಲ್ಲ ಎಂದಿದ್ದರು. “ನಾನು ಹತ್ತನೇ ಕ್ಲಾಸ್‌ನಲ್ಲಿದ್ದಾಗ ತಂದೆ ಮನೆ ಬಿಟ್ಟು ಹೋದರು. ನಾನು ಸೆಕೆಂಡ್ ಪಿಯುಸಿಯಲ್ಲಿದ್ದಾಗ, ನನ್ನ ಅಣ್ಣ ಸನ್ಯಾಸತ್ವ ಸ್ವೀಕಾರ ಮಾಡಿದ. ಇದನ್ನು ನಾನು ವೇದಿಕೆ ಮೇಲೆ ಹೇಳಿಕೊಳ್ಳಬೇಕಿತ್ತು ಎಂದು ಹೇಳಿದರು. ಇದನ್ನೆಲ್ಲ ನಾನು ಯಾಕೆ ಹೇಳಿಕೊಂಡು ಅಳಬೇಕು, ನಾನು ಚಾಲೆಂಜ್ ಆಗಿ ಸ್ವೀಕಾರ ಮಾಡಿ ಜೀವನ ಕಟ್ಟುಕೊಂಡಿದ್ದೀನಿ. ಎಲ್ಲರ ಜೀವನದಲ್ಲಿಯೂ ಒಂದಲ್ಲ ಒಂದು ಕಷ್ಟ ಇರುತ್ತದೆ. ಪ್ರತಿಯೊಬ್ಬರು ಒಂದಲ್ಲ ಒಂದು ಕಷ್ಟ ಅನುಭವಿಸಿ ಬಂದಿರುತ್ತಾರೆ, ಆ ಕಷ್ಟಗಳನ್ನೆಲ್ಲ ಮೆಟ್ಟಿಲಾಗಿ ಹತ್ತಿಕೊಂಡು ಹೋಗಬೇಕು. ಅದನ್ನೆಲ್ಲ ವೇದಿಕೆ ಮೇಲೆ ಹೇಳಿಕೊಳ್ಳೋದು ಇಷ್ಟ ಆಗಲ್ಲ” ಎಂದಿದ್ದರು.
“ನಾನು ನನ್ನ ಇಬ್ಬರು ಮಕ್ಕಳು ಹುಟ್ಟುವ ಹಿಂದಿನ ದಿನ ಮೂರು ಗಂಟೆ ಹಾಡಿ, ಆಸ್ಪತ್ರೆಗೆ ಅಡ್ಮಿಟ್ ಆಗುತ್ತಿದ್ದೆ. ಮೊದಲ ಮಗನಿಗೆ ಈಗ ಇಪ್ಪತ್ತೊಂದು ವರ್ಷ. ಒಂದೂವರೆ ತಿಂಗಳು ಬಾಣಂತಿಯಿದ್ದಾಗಲೇ ಅವರು ಮತ್ತೆ ಹಾಡಲು ಆರಂಭಿಸಿದ್ದರಂತೆ. ಆಗ ಒಂದು ರೂಪಾಯಿಗೂ ಕಷ್ಟಪಡುತ್ತಿದ್ದೆ. ಇಂದು ನಾನು ವಿದೇಶಗಳಲ್ಲಿ ಹಾಡುತ್ತೇನೆ ಎಂದರೆ ಅದು ನನ್ನ ಸಾಮರ್ಥ್ಯದಿಂದ ಮಾತ್ರ” ಎಂದು ಅವರು ಹೇಳಿದ್ದರು.
ಸದ್ಯ ಆಸ್ಟ್ರೇಲಿಯಾ ಕಾರ್ಯಕ್ರಮದಲ್ಲಿರೋ ಸವಿತಾ ಅವರು ಬೆಂಗಳೂರಿಗೆ ಬರಬೇಕಿದೆ. ಪುಟ್ಟ ಮಗ ಈ ರೀತಿ ಮಾಡಿಕೊಂಡಿರೋದನ್ನು ಅವರು ಹೇಗೆ ಸಹಿಸಿಕೊಳ್ತಾರೆ, ಹೇಗೆ ತಾಳ್ಮೆಯಿಂದ ಇರುತ್ತಾರೆ ಎಂದು ಅವರ ಸ್ನೇಹಿತರು, ಕುಟುಂಬಸ್ಥರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ವಿಶೇಷ ಮನವಿ:
ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ... ಬದಲಾಗಿ ಯಾವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ್ರೋ ಅದೇ ನಿಮ್ಮ ಐಡೆಂಟಿಟಿಯಾಗಿ ಬಿಡುತ್ತೆ. ಮುಂದೆ, ಆತ್ಮ8ತ್ಯೆ ಮಾಡಿಕೊಂಡವರನ್ನು ಆ 'ಕಾರಣ'ಕ್ಕಾಗಿಯೇ ನೆನಪಿಟ್ಟುಕೊಳ್ಳಲಾಗುತ್ತೆ.
ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:
Sahai Helpline - 080 2549 7777
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.