
'ಕಿನ್ನರಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಮುದ್ದು ಮುಖದ ಕೃಷ್ಣ ಸುಂದರಿ ಭೂಮಿಶೆಟ್ಟಿ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಸುವ ಮೂಲಕ ಕನ್ನಡಿಗರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ.
ಮೂಲತಃ ಕುಂದಾಪುರದವರಾಗಿರುವ ಭೂಮಿ ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮಾಡುತ್ತಾ ಕೆಲಸ ಮಾಡುತ್ತಿದ್ದರು. ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಕಾಟ ಹೆಚ್ಚಾದ ಕಾರಣ ಭೂಮಿ ತಮ್ಮ ಹುಟ್ಟೂರು ಬೀಜೂರಿಗೆ ಮರಳಿದ್ದಾರೆ. ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿರುವ ಭೂಮಿ ಸುಮ್ಮನೆ ಕಾಲಹರಣ ಮಾಡದೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
BB7:ಕಾಗೆ ಹಾರಿಸೋ ಕಿನ್ನರಿಗ್ಯಾಕೆ 'Royal Shetty'ಪಟ್ಟ, ಬೀಡಿ ತಿನ್ನೋ ಚಟ?
ಭೂಮಿ ಇನ್ ಕೃಷಿ:
ಹೌದು! ನಟಿ ಭೂಮಿ ಶೆಟ್ಟಿ ತಮ್ಮ ಅಜ್ಜನ ಕೃಷಿ ಭೂಮಿಯಲ್ಲಿ ಸದ್ಯಕ್ಕೆ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡು ಹೆಮ್ಮೆಯಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬೆಳಗಿನಿಂದ ಸಂಜೆಯವರೆಗೂ ಪಕ್ಕಾ ಕೃಷಿಕ ಮಹಿಳೆಯಾಗಿ ಗೊಬ್ಬರ ಹೊತ್ತು ನಾಟಿ ಮಾಡುವ ಫೋಟೋ ಇತ್ತೀಚಿಗೆ ಶೇರ್ ಮಾಡಿದ್ದರು.
ಡಿಫರೆಂಟ್ ಹೇರ್ ಸ್ಟೈಲ್:
ಲಾಕ್‌ಡೌನ್ ಟೈಮ್‌ನಲ್ಲಿ ಭೂಮಿ ತಮ್ಮ ಉದ್ದ ಕೂದಲನ್ನು ಬಾಬ್ ಕಟ್ ಮಾಡಿಸಿಕೊಂಡಿದ್ದಾರೆ. ಸದಾ ಏನಾದರೂ ಡಿಫರೆಂಟ್ ಆಗಿ ಟ್ರೈ ಮಾಡುವ ಭೂಮಿಶೆಟ್ಟಿ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಅದರಲ್ಲೂ ಪಕ್ಕಾ ಹಳ್ಳಿ ಹುಡುಗಿಯ ಲುಕ್ ಎಲ್ಲರ ಗಮನ ಸೆಳೆಸಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.