
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್6ರ ಸ್ಪರ್ಧಿ ಧನ್‌ರಾಜ್ ತಮ್ಮ ಪುಟ್ಟ ಕಂದಮ್ಮನಿಗೆ ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಧನ್‌ರಾಜ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
'ನಮ್ಮ ಲಿಟಲ್ ಮ್ಯಾನ್‌ಗೆ ಇಂದು ಹೆಸರಿಡಲಾಗಿದೆ. ನಮ್ಮ ಕುಡಿಯನ್ನು ನೀವು ಅಗಸ್ತ್ಯ ಧನ್‌ರಾಜ್ ಎಂದು ಕರೆಯಬಹುದು' ಎಂದು ಬರೆದುಕೊಂಡಿದ್ದಾರೆ. ಧನ್‌ರಾಜ್ ಪತ್ನಿಯೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇದ್ದು ಪುತ್ರನ ಪಾದದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆದರೆ ಮುಖವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ.
ಜೂನ್ ತಿಂಗಳಲ್ಲಿ ಪತ್ನಿಗೆ ಅದ್ಧೂರಿ ಸೀಮಂತ ಕಾರ್ಯಕ್ರಮ ಮಾಡಿದ್ದರು.ಆ ಸೀಸನ್ ನ ಇನ್ನಿತ್ತರ ಸ್ಪರ್ಧಿಗಳಾದ ಶಶಿ ಹಾಗೂ ಕವಿತಾ ಗೌಡ ಭಾಗಿಯಾಗಿದ್ದರು.ಕೊರೋನ ಕಾಟದಿಂದ ಆಪ್ತರ ಸಮ್ಮುಖದಲ್ಲಿ ಆಚರಣೆ ಮಾಡಲಾಗಿತ್ತು. ಮಿಮಿಕ್ರಿ ಮಾಡುತ್ತಾ ವೀಕ್ಷಕರನ್ನು ಮನೋರಂಜಿಸುತ್ತಿದ್ದ ಧನ್‌ರಾಜ್ ರಿಯಾಲಿಟಿ ಶೋ ನಂತರ ಸಿನಿಮಾಗಳಲ್ಲಿ ಬ್ಯುಸಿಯಾದರು. ನಟನೆ ಮಾತ್ರವಲ್ಲದೆ ಡಬ್ಬಿಂಗ್ ಕೂಡ ಮಾಡುತ್ತಾರೆ.
ಪುತ್ರನ ಹೆಸರು ರಿವೀಲ್ ಮಾಡಿರುವುದರ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಮಗು ಮುಖವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.