ರಘು ಗೌಡ ಹೊರ ಬರುತ್ತಿದ್ದಂತೆ ಕೈಯಲ್ಲಿ ಸೌಟು, ಲಟ್ಟಣಿಗೆ ಹಿಡಿದು ನಿಂತ ಪತ್ನಿ?

Suvarna News   | Asianet News
Published : May 15, 2021, 10:51 AM IST
ರಘು ಗೌಡ ಹೊರ ಬರುತ್ತಿದ್ದಂತೆ ಕೈಯಲ್ಲಿ ಸೌಟು, ಲಟ್ಟಣಿಗೆ ಹಿಡಿದು ನಿಂತ ಪತ್ನಿ?

ಸಾರಾಂಶ

ವೈನ್ ಸ್ಟೋರ್ ಮಾಲೀಕ ರಘು ಗೌಡಗೆ ಪತ್ನಿ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರಂತೆ. ಯಾಕೆಂದರೆ ವೈರಲ್ ಆಗುತ್ತಿರುವ ಈ ಫೋಟೋ ನೋಡಿದರೆ ಹಾಗೆ ಅನಿಸುತ್ತಿದೆ.  

ಸೋಷಿಯಲ್ ಮೀಡಿಯಾ ಕಾಮಿಡಿ ಕಿಂಗ್ ರಘು ಗೌಡ, ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ತಮ್ಮ ಖಾತೆಯಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಪಕ್ಕದಲ್ಲಿ ಪತ್ನಿ ನಿಂತಿದ್ದಾರೆ, ರಘು ಹಣೆಯ ಮೇಲೆ ಪೆಟ್ಟಾಗಿದೆ. 

ಬಿಗ್‌ಬಾಸ್‌ನಲ್ಲಿ ವೈನ್‌ ಸ್ಟೋರ್ ಮಾಲೀಕ ರಘು; ಹೊಟೇಲ್‌ನಲ್ಲಿದ್ದ ಪೌಡರ್‌ ಮನೆಗೆ ಪಾರ್ಸಲ್! 

ರಘು ಬಿಬಿ ಮನೆಯೊಳಗಿದ್ದಾಗ ಪತ್ನಿ ವಿದ್ಯಾ ಸೋಷಿಯಲ್ ಮೀಡಿಯಾ ಖಾತೆಗಳನ್ನು ಮ್ಯಾನೇಜ್ ಮಾಡುತ್ತಿದ್ದರು. ಒಂದು ವಾರ ರಘು ಕ್ಯಾಪ್ಟನ್ ಆಗಿದ್ದಾಗ ಪತ್ನಿ ವಾಯ್ಸ್ ನೋಟ್ ಕಳುಹಿಸಿದ್ದರು. 'ನಾನು ನೋಡ್ತಿದ್ದಿನಿ ಮಜಾ ಮಾಡು ಪರ್ವಾಗಿಲ್ಲ,' ಎಂದು ತಮಾಷೆಯಿಂದ ಗೇಲಿ ಮಾಡಿದ್ದರು. ಹೆಂಡತಿ ಎನೂ ಹೇಳುವುದಿಲ್ಲ ಎಂದು ರಘು ಬಿಬಿ ಮನೆಯಲ್ಲಿ ಸಿಕ್ಕಾಪಟ್ಟೆ ಮಜಾ ಮಾಡಿಬಿಟ್ಟಿದ್ದರು. ಅಲ್ಲದೇ ತಮ್ಮ ಪತ್ನಿ ಹೆಸರನ್ನೂ ಸಹ ಮರೆತು ಹೋಗಿದ್ದರು! ವಿದ್ಯಾ ಬದಲು ದಿವ್ಯಾ ಎನ್ನುತ್ತಿದ್ದರು. ಈ ಕಾರಣ ಮನೆಯಿಂದ ಹೊರ ಬರುತ್ತಿದ್ದಂತೆ, ಮೊದಲ ಪೋಟೋ ಪತ್ನಿ ಜೊತೆ ಹಂಚಿಕೊಂಡಿದ್ದಾರೆ. 

'ಹಾಯ್.. ಐ ಆ್ಯಮ್ ಬ್ಯಾಕ್. ಸೇಫ್ ಆಗಿದ್ದೀನಿ. ಥ್ಯಾಂಕ್ ಗಾಡ್ಸ,ದಿವ್ಯಾ ಆಟವನ್ನು ಸ್ಫೋರ್ಟಿವ್ ಆಗಿ ತೆಗೆದುಕೊಂಡಿದ್ದಾಳೆ,' ಎಂದು ಬರೆದಿದ್ದಾರೆ. ರಘು ಹಣೆ ಮೇಲೆ ಬ್ಯಾಂಡೇಜ್ ಹಾಕಿಕೊಂಡಿದ್ದಾರೆ. ಪತ್ನಿ ಕೈಯಲ್ಲಿ  ಸೌಟು ಮತ್ತು ಲಟ್ಟಣಿಗೆ ನೋಡಬಹುದು. 'ಮತ್ತೆ ಸ್ವಾಗತ,' ಎಂದು ನಟಿ ಸಂಯುಕ್ತಾ ಕಾಮೆಂಟ್ ಮಾಡಿದರೆ, ನಿಧಿ ಸುಬ್ಬಯ್ಯ 'ವಿದ್ಯಾ ತುಂಬಾನೇ ಸ್ಫೋರ್ಟಿವ್ ಆಗಿ ತೆಗೆದುಕೊಂಡಿದ್ದಾರೆ ಬಿಡಿ,' ಎಂದು ಕಾಲೆಳೆದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚಿನ್ನುಮರಿ ಕೊಟ್ಟ ಒಂದೊಂದು ಏಟಿಗೆ ಜಯಂತ್ ವಿಲವಿಲ; ಮುಂದೇನು ಮಾಡ್ತಾನೆ ಸೈಕೋ ಗಂಡ?
ನಾನ್‌ ನಾಳೆ ಇರ್ತೀನೋ ಇಲ್ವೋ ಅಂತ ಮೆಸೇಜ್‌ ಮಾಡಿದ, ಈಗ ಇಲ್ಲ: ಬಾಯ್‌ಫ್ರೆಂಡ್‌ ಸಾವಿನ ಬಗ್ಗೆ ಸೋನು ಗೌಡ ಮಾತು