ತಂದೆಗೆ ಮರೆವು: ಯಮುನಾ ಶ್ರೀನಿಧಿ ಭಾವುಕ ಪೋಸ್ಟ್!

By Suvarna News  |  First Published Jun 22, 2021, 1:25 PM IST

ತಂದೆಯ ಮೆದುಳು ಮತ್ತು ದೇಹ ಚಟುವಟಿಕೆಯಿಂದ ಇರಲು ನಟಿ ಯಮುನಾ ಮಾಡಿಸುತ್ತಿರುವ ವ್ಯಾಯಾಮವಿದು. 


ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಯಮುನಾ ಶ್ರೀನಿಧಿ ತಂದೆಯ ಮರೆವಿನ ಕಾಯಿಲೆ ಬಗ್ಗೆ ಭಾವುಕರಾಗಿದ್ದಾರೆ. ಅವರ ಮೆದುಳು ಮತ್ತು ದೇಹ ಒಂದೇ ಸಮಯದಲ್ಲಿ ಪ್ರತಿಕ್ರಿಯಿಸಲು ಕೆಲವೊಂದು ವ್ಯಾಯಾಮಗಳನ್ನು ಹೇಳಿ ಕೊಡುತ್ತಿದ್ದಾರೆ. 

'ನಾವು ಜೀವನದಲ್ಲಿ ಎದುರಿಸುವ ಕಷ್ಟಕರವಾದ ಬ್ಯಾಟಲ್ ಅಂದ್ರೆ ಪೋಷಕರು ಅನಾರೋಗ್ಯದಿಂದ ಬಳಲುವುದು. ಶ್ರೀನಿ ಮತ್ತು ನಾನು ಮಾಡಿಸುತ್ತಿರುವ ಈ ಚಟುವಟಿಕೆಯಿಂದ ಮೆದುಳು ಮತ್ತು ದೇಹದ ನಡುವೆ ಬ್ಯಾಲೆನ್ಸ್ ಸೃಷ್ಟಿಯಾಗುತ್ತದೆ. ಮರೆವು ಕಾಯಿಲೆಯಿಂದ ಅವರು ಕಂಟ್ರೋಲ್ ಕಳೆದುಕೊಂಡಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ಈ ವಿಡಿಯೋ ಸೆರೆ ಹಿಡಿಯಲಾಗಿತ್ತು, ಈಗ ಅವರ ಪರಿಸ್ಥಿತಿ ಮತ್ತಷ್ಟೂ ಹದಗೆಟ್ಟಿದೆ. ಅನೇಕರು ನನ್ನ ತಂದೆಯನ್ನು ನೋಡಬೇಕು ಎಂದು ಹೇಳಿದ್ದರು. ಅದಕ್ಕೆ ಈ ವಿಡಿಯೋ ಹಂಚಿಕೊಂಡೆ. ಅಪ್ಪ ನಮಗೆ ನಡೆಯುವುದನ್ನು ಕಲಿಸುತ್ತಾರೆ, ಓಡುವುದನ್ನು ಕಲಿಸುತ್ತಾರೆ, ಆಡುವುದನ್ನು ಕಲಿಸುತ್ತಾರೆ, ಕಾಲಚಕ್ರ,' ಎಂದು ಯಮುನಾ ಬರೆದುಕೊಂಡಿದ್ದಾರೆ.

Latest Videos

undefined

ಅಮೆರಿಕನ್ನರಿಗೆ ಕನ್ನಡ ಕಲಿಸಿದ ನಾಟ್ಯ, ನಟನೆಯ ನಿಧಿ ಯಮುನಾ ಶ್ರೀನಿಧಿ 

'ಜನರನ್ನು ಕಂಡು ಹಿಡಿಯುವುದರಿಂದ ಹಿಡಿದು, ಹೊಸ ವಿಚಾರಗಳನ್ನು ನೆನಪಿಟ್ಟಿಕೊಳ್ಳುವುದೂ ತಂದೆಗೆ ಕಷ್ಟ. ಒಂದು ವರ್ಷದ ಅವಧಿಯಲ್ಲಿ ಸಂಪೂರ್ಣ ಜ್ಞಾಪಕ ಶಕ್ತಿ ಕಳೆದುಕೊಂಡಿದ್ದಾರೆ. ಯಾರನ್ನೂ ಗುರುತಿಸುವುದಿಲ್ಲ. ಅವರನ್ನು ಈ ಸ್ಥಿತಿಯಲ್ಲಿ ನೋಡಲು ದುಃಖವಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದವರು. ಮೈಸೂರು ಓಪನ್ ವಿಶ್ವವಿದ್ಯಾಲಯದ ಪರೀಕ್ಷೆ ಕಂಟ್ರೋಲರ್ ಆಗಿದ್ದವರು,' ಎಂದು ಯಮುನಾ ತಿಳಿಸಿದ್ದಾರೆ.

 

click me!