Sonu Gowda Rajanandini ಜೊತೆ ಜೊತೆಯಲಿ ಧಾರಾವಾಹಿಗೆ ಎಂಟ್ರಿ ಕೊಟ್ಟ ಸೋನು ಗೌಡ!

Suvarna News   | Asianet News
Published : Feb 21, 2022, 06:02 PM IST
Sonu Gowda Rajanandini ಜೊತೆ ಜೊತೆಯಲಿ ಧಾರಾವಾಹಿಗೆ ಎಂಟ್ರಿ ಕೊಟ್ಟ ಸೋನು ಗೌಡ!

ಸಾರಾಂಶ

ಜೊತೆ ಜೊತೆಯಲಿ ಧಾರಾವಾಹಿಗೆ ಹೊಸ ಟ್ವಿಸ್ಟ್‌. ಸೋನು ಗೌಡ ನೋಡಿ ವೀಕ್ಷಕರು ಶಾಕ್.... 

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jothe Jotheyalli) ಧಾರಾವಾಹಿಯಲ್ಲಿ ಹೊಸ ಹೊಸ ಟ್ವಿಸ್ಟ್‌ಗಳು ಎದುರಾಗಿವೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬ ಗೊಂದಲದಲ್ಲಿ ಇರುವ ಅನು ಸಿರಿಮನೆಗೆ ಜೋಗ್ತವ್ವ ಉತ್ತರ ಕೊಡ್ತಾರಾ ಅಥವಾ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಉತ್ತರ ಕೊಡುತ್ತಾ?

ಧಾರಾವಾಹಿ ಆರಂಭದಿಂದಲೂ 'ನಂಬಿಕೆ' ಅನ್ನೋ ಪದದ ಅರ್ಥವನ್ನು ತುಂಬಾನೇ ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದಾರೆ ಆರ್ಯವರ್ಧನ್ (Aryavardhan). ಅದರಂತೆ ಅನು ಕೂಡ ಭೂಮಿ ಮೇಲೆ ತಂದೆ-ತಾಯಿಯನ್ನು ಬಿಟ್ಟರೆ, ನಂಬುವುದು ಅರ್ಯವರ್ಧನ್‌ ಎಂಬ ವ್ಯಕ್ತಿಯನ್ನು ಮಾತ್ರ. ಆರ್ಯ ಸರ್ ಏನ್ ಮಾಡಿದರೂ ಸರಿ. ಅರ್ಯ ಸರ್, ಹೇಳಿದ್ದೇ ವೇದ ವಾಕ್ಯ ಎನ್ನುವ ಅನು ಸಿರಿಮನೆಗೆ ಒಂದಾದ ಮೇಲೊಂದು ಸತ್ಯ ತಿಳಿಯುತ್ತಿದ್ದಂತೆ, ದೊಡ್ಡ ಶಾಕ್ ಎದುರಾಗಿದೆ. ಸುಳ್ಳಿನ ಕೋಟೆಯಲ್ಲಿ ನನ್ನನ್ನು ರಾಣಿ ಮಾಡಿದ್ದಾರೆ ಎಂದು ಬೇಸರ ಮಾಡಿಕೊಂಡಿದ್ದಾರೆ.

600 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ; ಫ್ಯಾನ್ಸ್ ಜೊತೆ ಆರ್ಯ-ಅನು ಮಾತು!

ಅರ್ಯವರ್ಧನ್ ರಿಯಲ್ ಮುಖ ಗೊತ್ತಾಗಿದ್ದು, ಮನೆ ಆಸ್ತಿ ಡಿವೈಡ್ ಆಗುವ ಸಮಯದಲ್ಲಿಯೇ. ಸಂಜಯ್ ಪಾಟೇಲ್ (Sanjay Patel) ಹೆಸರಿನಲ್ಲಿ ರಾಜನಂದಿನಿ (Rajanandini) ಸಂಸ್ಥೆಯಿಂದ ಕೋಟಿ ಕೋಟಿ ಹಣವನ್ನು ಖಾತೆಯೊಂದಕ್ಕೆ ವರ್ಗಾವಣೆ ಆಗುತ್ತಿತ್ತು. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೇ ಹೀಗೆ ಮಾಡುತ್ತಿರುವುದು ಎಂದು ಅನು ಪತ್ತೆ ಮಾಡುತ್ತಾಳೆ .ಎಲ್ಲಿ ಸಂಪೂರ್ಣ ಸತ್ಯ ಗೊತ್ತಾಗುತ್ತದೋ ಎಂದು ಆರ್ಯ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಣ ಕೊಟ್ಟು ಊರಿಂದ ಹೊರ ಕಳುಹಿಸುತ್ತಾನೆ. ಆತನ ಮುಖವನ್ನು ಅನು ಆಗಲೇ ನೋಡಿರುತ್ತಾಳೆ. ಒಂದು ದಿನ ಪೇಪರ್‌ನಲ್ಲಿ ಆ ವ್ಯಕ್ತಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಫೋಟೋ ನೋಡಿ ಶಾಕ್ ಆಗುತ್ತಾಳೆ. 

ಆರ್ಯ ಹೆಸರಿನಲ್ಲಿ ವೋಟರ್ ಐಡಿ (Voter ID), ಸಿಗುತ್ತಿಲ್ಲ ಎಂದು ಆಫೀಸ್‌ಗೆ ಹೋಗಿ ವಿಚಾರಿಸಿದಾಗ ಆರ್ಯನ ಹೆಸರು ಸಂಜಯ್ ಪಾಟೀಲ್‌ ಎಂದು ಇರುತ್ತದೆ. ಕೋಟಿ ಕೋಟಿ ಹಣ ವರ್ಗಾವಣೆ ಆಗುತ್ತಿರುವ ಆರ್ಯನ ಖಾತೆಯಿಂದ ಎಂಬ ಸತ್ಯ ಅನುಗೆ (Anu Sirimane) ತಿಳಿಯುತ್ತದೆ. ರಾಜನಂದಿನಿ ಸಂಪೂರ್ಣ ಆಸ್ತಿ ಅನುಗೆ ಸೇರಬೇಕು, ಎಂದು ಪದೇ ಪದೇ ಅನು ಮಾಡುವ ಕೆಲಸಕ್ಕೆ ಆರ್ಯ ರಾಜನಂದಿನಿಗೆ ಸಂಬಂಧಿಸಿದ ವಸ್ತು ಅಥವಾ ಘಟನೆ ಲಿಂಕ್ ಮಾಡುತ್ತಾನೆ. ಅನುನೇ ರಾಜನಂದಿನಿ ಎಂದು ತಿಳಿದುಕೊಂಡು, ಅತ್ತೆ ಸಂಪೂರ್ಣ ಆಸ್ತಿ ವರ್ಗಾವಣೆ ಮಾಡುವ ವ್ಯವಸ್ಥೆ ಮಾಡುತ್ತಾರೆ. ಇವೆಲ್ಲಾ ಗೊಂದಲದಿಂದ ಬ್ರೇಕ್ ಬೇಕು ಎಂದು ಅನು ತವರು ಮನೆಗೆ ಹೋಗುತ್ತಾಳೆ. ಆಗ ಜೋಗ್ತವ್ವ ಸಿಕ್ಕ ದೇವರ ಗುಡಿಯಲ್ಲಿ ಸಂಪೂರ್ಣ ಘಟನೆ, ಆಕೆ ಯಾರು ಏನು ಎಂದು ತಿಳಿಸುತ್ತಾಳೆ. 

ಜೊತೆ ಜೊತೆಯಲಿ ಧಾರಾವಾಹಿ ಬದುಕು ಬದಲಿಸಿತು: Megha Shetty

ಅದೇ ಶಾಕ್‌ನಲ್ಲಿ ಗಂಡನ ಮನೆಗೆ ಹೋದ ಅನು ಕನ್ನಡಿ ಮುಂದೆ ನಿಂತು ನೋಡಿದಾಗಲೆಲ್ಲಾ ಹಿಂದಿ ಯಾರೋ ನಿಂತಿರುವಂತೆ ಭಾವಿಸುತ್ತಾಳೆ. ಅದೇ ರಾಜನಂದಿನಿ. ಧಾರಾವಾಹಿ ಆರಂಭದಿಂದಲೂ ರಾಜನಂದಿನಿ ಪಾತ್ರ ಸರ್ಪ್ರೈಸ್ ಆಗಿ ಇಡಲಾಗಿತ್ತು, ರಾಜನಂದಿನಿ ಸುತ್ತ ಕಥೆ ನಡೆಯುತ್ತಿತ್ತು. ಆಕೆ ಯಾರೆಂದು ರಿವೀಲ್ ಮಾಡಿ ಎಂದು ಪದೇ ಪದೇ ವೀಕ್ಷಕರು ಡಿಮ್ಯಾಂಡ್ ಮಾಡುತ್ತಿದ್ದ ಕಾರಣ ನಿರ್ದೇಶಕರು ಈಗ ಆಕೆಯನ್ನು ರಿವೀಲ್ ಮಾಡಿದ್ದಾರೆ. ಅವರೇ ಸ್ಯಾಂಡಲ್‌ವುಡ್‌ ನಟಿ ಸೋನು ಗೌಡ (Sonu Gowda). 'ಸೀರಿಯಲ್ ಆರಂಭದಿಂದಲೂ ರಾಜನಂದಿನಿ ಪಾತ್ರದ ಬಗ್ಗೆ ಜನರಿಗೆ ಕ್ಯೂರಿಯೋಸಿಟಿ ಇದೆ. ಆಕೆಯ ಹೆಸರು ಹೇಳುತ್ತಿದ್ದರು. ಆದರೆ ಮುಖ ರಿವೀಲ್ ಮಾಡಿರಲಿಲ್ಲ. ಧಾರಾವಾಹಿಗೆ ಇದು ಮುಖ್ಯವಾದ ಪಾತ್ರ. ಹಾಗೆಯೇ ದೊಡ್ಡ ಟ್ವಿಸ್ಟ್‌ ನೀಡುವ ಪಾತ್ರ. ಹೀಗಾಗಿ ನಾನು ರಾಜನಂದಿನಿ ಆಗಲು ಒಪ್ಪಿಕೊಂಡೆ,' ಎಂದು ಸೋನು ಗೌಡ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!