ಮಗನ ಹೆಸರು ರಿವೀಲ್ ಮಾಡಿದ ನಟಿ ನಯನಾ ಪುಟ್ಟಸ್ವಾಮಿ!

Suvarna News   | Asianet News
Published : Jul 11, 2021, 12:44 PM ISTUpdated : Jul 11, 2021, 01:05 PM IST
ಮಗನ ಹೆಸರು ರಿವೀಲ್ ಮಾಡಿದ ನಟಿ ನಯನಾ ಪುಟ್ಟಸ್ವಾಮಿ!

ಸಾರಾಂಶ

ಪುತ್ರನ ಹೆಸರು ರಿವೀಲ್ ಮಾಡಿದ ನಟಿ ನಯನಾ. ಹೆಸರು ವಿಭಿನ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ ನೆಟ್ಟಿಗರು. 

ಕಿರುತೆರೆ ನಟಿ ನಯನಾ ಪುಟ್ಟಸ್ವಾಮಿ ಜೂನ್‌ 11ರಂದು ಕುಟುಂಬಕ್ಕೆ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. 'Its a Boy, ಹೆಲೋ ವರ್ಲ್ಡ್‌' ಎಂದು ಹೇಳುವ ಮೂಲಕ ಪುತ್ರನನ್ನು ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟರು.  ಇದೀಗ ಪುತ್ರನಿಗೆ ಡಿಫರೆಂಟ್ ಆಗಿ ನಾಮಕರಣ ಮಾಡಿದ್ದಾರೆ. 

'ನಾವು ನಮ್ಮ ಪುತ್ರನಿಗೆ ತಾರುಶ್ ಕೃಷ್ಣ (Taarush Krishna) ಎಂದು ನಾಮಕರಣ ಮಾಡಿದ್ದೇವೆ. ಹೆಸರಿನ ಅರ್ಥ Conqueror/ವಿಜಯಶಾಲಿ ಎಂದು' ಎಂದು ನಯನಾ ಬರೆದುಕೊಂಡಿದ್ದಾರೆ. ನಯನಾ ಮತ್ತು ಪತಿ ಚರಣ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ. 

ಪುತ್ರನ ಆಗಮನದ ನಂತರ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ  ನಯನಾ, ತಮ್ಮ ದಿನಚರಿ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಪುತ್ರನ ಕೈ ಬೆರಳು ಪೋಟೋಗಳು ಹೊರತು ಪಡಿಸಿ, ಯಾವ ಪೋಟೋವನ್ನೂ ಇದುವರೆಗೆ ರಿವೀಲ್ ಮಾಡಿಲ್ಲ. ಸ್ಪೆಷಲ್ ದಿನದಂದು ರಿವೀಲ್ ಮಾಡಬಹುದು, ಎನ್ನಲಾಗಿದೆ. 

ಗಂಡು ಮಗುವಿಗೆ ಜನ್ಮ ನೀಡಿದ ನಟಿ ನಯನಾ ಪುಟ್ಟಸ್ವಾಮಿ! 

ಸದ್ಯ ವಿದೇಶದಲ್ಲಿ ಪತಿ ಜೊತೆ ಮದರ್‌ವುಡ್‌ ಎಂಜಾಯ್ ಮಾಡುತ್ತಿರುವ ನಯನಾ, ಭಾರತಕ್ಕೆ ಹಿಂದಿರುಗಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್
BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?