
ಹೆಣ್ಣು ಮಕ್ಕಳಿಗೆ ಬಟ್ಟೆ, ಬ್ಯಾಗ್ ಹಾಗೂ ಚಪ್ಪಲಿ ಕಂಡ್ರೆ ಸಿಕ್ಕಾಪಟ್ಟೆ ಕ್ರೇಜ್. ಆರು ತಿಂಗಳಿಗೆ ಒಮ್ಮೆಯಾದರೂ ಚೇಂಜ್ ಬಯಸುತ್ತಾರೆ. ಅದರಲ್ಲೂ ಬೇರೆ ಅವರ ಬ್ಯಾಗ್‌ನಲ್ಲಿ ಏನಿವೆ ಅನ್ನೋ ಕ್ಯೂರಿಯಾಸಿಟಿ ಯಾವತ್ತೂ ಕಡಿಮೆ ಆಗೋಲ್ಲ. ಈಗ ಅದೇ ಕ್ಯೂರಿಯಾಸಿಟಿಗೆ ನಿರೂಪಕಿ, ನಟಿ ಶಾಲಿನಿ ಸತ್ಯನಾರಾಯಣ್ ಉತ್ತರಿಸಿದ್ದು, ಅವರ ಬ್ಯಾಗಲ್ಲಿ ಏನಿರುತ್ತೆ ಎಂಬುದನ್ನು ರಿವೀಲ್ ಮಾಡಿದ್ದಾರೆ.
ತಮ್ಮ 'ಶಾಲಿವುಡ್' ಯುಟ್ಯೂಬ್ ಚಾನೆಲ್‌ನಲ್ಲಿ 'Whats is in my purse?' ಎಂಬ ಫನ್ನಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಇಷ್ಟೊಂದು ದೊಡ್ಡ ಬ್ಯಾಗ್ ಆ? ಎಂದು ಪ್ರಶ್ನೆ ಮಾಡುತ್ತಿದ್ದ ವೀಕ್ಷಕರು ಕೊನೆ ಕೊನೆಯಲ್ಲಿ 'ಮೇಡಂ ಇದಕ್ಕೆಲ್ಲ ನೀವು ಬ್ಯಾಗ್ ಬಳಸಬೇಡಿ. ಒಂದು ಗೋಣಿ ಚೀಲ ಅಥವಾ ಸಣ್ಣ ಲಾರಿ ಬುಕ್ ಮಾಡಿಕೊಳ್ಳಿ,' ಎಂದು ಕಾಲೆಳೆದಿದ್ದಾರೆ.
ಆರಂಭದಲ್ಲಿ ಶಾಲಿನಿ ತಮ್ಮ ಬ್ಯಾಗ್‌ನಿಂದ ಪರ್ಸ್, ಗ್ಲಾಸ್, ಬಾಚಣಿಗೆ, ಮನೆ ಬೀಗ, ಪೆನ್ ತೋರಿಸಿ, ಆ ನಂತರ ವ್ಯಾಕ್ಯೂಮ್ ಕ್ಲೀನರ್, ಸ್ಯಾನಿಟೈಸರ್ ಸ್ಪ್ರೇ, ಹಾಟ್ ಬಾಸ್ಕ್‌ನಲ್ಲಿ ಬಿಸಿ ಬೇಳೆ ಬಾತ್, ಕುರುಕು ತಿಂಡಿ ಹೀಗೆ ಒಂದೊಂದೆ ದೊಡ್ಡ ಐಟಂಗಳನ್ನು ತೆಗೆಯುತ್ತಾರೆ... ಕೊನೆಯಲ್ಲಿ ತಮ್ಮ ಗಂಡನನ್ನೇ ಬ್ಯಾಗ್‌ನಿಂದ ಹೊರ ಕರೆಯುತ್ತಾರೆ. ಅಬ್ಬಾ! ಈ ವಿಡಿಯೋ ನೋಡಿ ಎಲ್ಲರೂ ನಕ್ಕು ನಲಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.