
ಬೆಂಗಳೂರು(ಜು. 10) ಶನಿವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ದಿವ್ಯ ಯು ಮತ್ತು ಚಕ್ರವರ್ತಿ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಲಾಸ್ ತೆಗೆದುಕೊಳ್ಳುವುದರ ಜತೆಗೆ ಸರಿಯಾಗಿ ಬುದ್ಧಿ ಮಾತುಗಳ ಪ್ರಯೋಗ ಮಾಡಿದ್ದಾರೆ.
ಮೊಟ್ಟೆ ಟಾಸ್ಕ್, ಬಲೂನ್ ಟಾಸ್ಕ್ ಕೊನೆಗೆ ಕ್ಯಾಪ್ಟನ್ಸಿಯ ಕೀ ಟಾಸ್ಕ್ ವಿಚಾರವನ್ನು ಎತ್ತಿದರು. ಕಿಚ್ಚ ಸುದೀಪ್ ಕೇಳಿದ ಪ್ರಶ್ನೆಗಳಿಗೆ ದಿವ್ಯಾ ಯು ಬಳಿ ಉತ್ತರಗಳೇ ಇರಲಿಲ್ಲ. ದಿವ್ಯಾ ಸಮರ್ಥನೆ ಒಪ್ಪಿಕೊಳ್ಳುವಂತೆಯೂ ಇರಲಿಲ್ಲ.
ಕ್ಯಾಪ್ಟನ್ಸಿ ಕೀ ಟಾಸ್ಕ್ ನಲ್ಲಿ ಅರವಿಂದ್ ಒಂದು ಕೀ ತೆರೆದು ಅದನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಅದನ್ನು ವಾಪಸ್ ಬಾಲ್ ಇರುವ ಬುಟ್ಟಿಗೆ ಹಾಕಿರಲಿಲ್ಲ. ಈ ವೇಳೆ ದಿವ್ಯಾ ಅದನ್ನು ತೆಗೆದುಕೊಂಡು ಹೋಗಿ ಹಾಕಿದ್ದರು. ನಾಯಕನ ಸ್ಥಾನದಲ್ಲಿದ್ದ ದಿವ್ಯಾ ಮಾಡಿದ್ದು ಸರಿಯೇ? ನೀವು ಉಳಿದವರಿಗೆ ಕೊಟ್ಟ ಎಚ್ಚರಿಕೆಯನ್ನು ಆ ಟೋನ್ ನಲ್ಲಿ ಅರವಿಂದ್ ಅವರಿಗೆ ಯಾಕೆ ನೀಡಲಿಲ್ಲ ಎಂದು ಪ್ರಶ್ನೆ ಮಾಡಿದರು.
ಬಿಗ್ ಬಾಸ್ ಮನೆಯಲ್ಲಿ ಸುಂದರ-ಸುಂದರಿಯರು
ಹಣ ಸಿದ್ಧ ಮಾಡುವ ಟಾಸ್ಕ್ ಬಗ್ಗೆ ಬಾಗಿಲಿನಲ್ಲಿ ನಿಲ್ಲುವ ರೂಲ್ಸ್ ಬಗ್ಗೆಯೂ ಕಿಚ್ಚ ಸುದೀಪ್ ಮಾತನಾಡಿದ್ದರು. ಎಲ್ಲರಿಗೂ ತಿಳಿಸದೇ ರೂಲ್ಸ್ ಮಾಡಿದ್ದು ಯಾಕೆ? ದಿವ್ಯಾ ಯು ನಾಯಕತ್ವದ ಕರಾಳ ಮುಖವನ್ನು ತೆರೆದಿರಿಸಿದರು.
ಚಕ್ರವರ್ತಿ ಮೇಲೆ ಕೆಂಡ: ಎಲ್ಲವನ್ನು ತಿಳಿದ ನೀವು ಈ ರೀತಿ ಯಾಕೆ ಮಾತನಾಡಿದರಿ? ವೈಷ್ಣವಿ ಬಗ್ಗೆ ಸಲ್ಲದ ವಿಚಾರ ಹೇಳಿ ಪ್ರಶಾಂತ್ ಕಣ್ಣಲ್ಲಿ ಆಕೆ ಕೆಟ್ಟದಾಗಿ ಕಾಣಿಸುವಂತೆ ಮಾಡಿದ್ದು ಯಾಕೆ? ಚಕ್ರವರ್ತಿಯವರೇ ಕಣ್ಣಲ್ಲಿ ಕಣ್ಣಿಟ್ಟು ನನ್ನ ಬಳಿಯೇ ಸುಳ್ಳು ಹೇಳುವ ಕೆಲಸ ಮಾಡಬೇಡಿ.. ಚಕ್ರವರ್ತಿ ಅವರೇ ನೀವೇ ಎಲ್ಲವನ್ನು ತಿಳಿದುಕೊಂಡು ಯಾಕೆ ಅಂಥ ಭಾಷೆ ಬಳಸುತ್ತೀರಿ.. ಕಮಾನ್..ಕಮಾನ್ .. ಎಂದು ಕಿಚ್ಚ ಸುದೀಪ್ ಗದರುತ್ತಲೇ ಹೋದರು.
ಕಳೆದ ಮೂರು ದಿನಗಳಿಂದ ಪ್ರಶಾಂತ್ ವರ್ತನೆ, ಚಕ್ರವರ್ತಿಯ ಕೆಟ್ಟ ಮಾತುಗಳು, ದಿವ್ಯಾ ಯು ನಾಯಕತ್ವದಲ್ಲಿನ ಪಕ್ಷಪಾತ ಎಲ್ಲ ವಿಚಾರಗಳು ಚರ್ಚೆಯಾದವು. ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ವಿಚಾರಗಳಿಗೆ ಸುದೀಪ್ ಪ್ರಶ್ನೆ ಮೂಲಕ ಉತ್ತರ ಪಡೆದುಕೊಳ್ಳುವ ಕೆಲಸ ಮಾಡಿದರು. ಪ್ರಿಂಟಿಂಗ್ ಯಂತ್ರವನ್ನು ಕಸಿದುಕೊಂಡ ಅರವಿಂದ್ ಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂದು ಝಾಡಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.