ಜೊತೆ ಜೊತೆಯಲಿ' ಮಾನ್ಸಿ ಪಾತ್ರಕ್ಕೆ ನಯನಾ ಎಂಟ್ರಿ!

Suvarna News   | Asianet News
Published : Oct 20, 2021, 01:50 PM IST
ಜೊತೆ ಜೊತೆಯಲಿ' ಮಾನ್ಸಿ ಪಾತ್ರಕ್ಕೆ ನಯನಾ ಎಂಟ್ರಿ!

ಸಾರಾಂಶ

ಕಿರುತೆರೆ ಲೋಕಕ್ಕೆ ರೀ-ಎಂಟ್ರಿ ಕೊಟ್ಟ ನಯನಾ. ಸ್ಟೈಲಿಶ್ ಪಾತ್ರಕ್ಕೆ ನೀವೂ ಸೂಟ್ ಆಗುತ್ತೀರಾ ಎಂದ ನೆಟ್ಟಿಗರು....

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (jothe Jotheyalli) ಧಾರಾವಾಹಿಯಿಂದ ನಟಿ ಶಿಲ್ಪಾ ಐಯ್ಯರ್ (Shilpa Iyer) ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ಇದೀಗ ನಟಿ ನಯನಾ (Nayana) ಎಂಟ್ರಿ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಯನಾ ಕಮ್‌ಬ್ಯಾಕ್‌ ಅನ್ನು ಫಾಲೋವರ್ಸ್‌ ಸಂಭ್ರಮಿಸುತ್ತಿದ್ದಾರೆ. 

ಹೌದು! ಕಲವು ವೈಯಕ್ತಿಕ ಕಾರಣಗಳಿಂದ ನಟಿ ಶಿಲ್ಪಾ ಐಯ್ಯರ್ ಹೊರ ನಡೆದಿರುವ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ (Instagram) ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿರಬಹುದು ಆದರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿರುವ ಹಾಗೂ ಮುಂದಿನ  ಸಿನಿ ಪ್ರಾಜೆಕ್ಟ್‌ಗೆ ಹೀಗೆ ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿಕೊಂಡಿದ್ದರು.  ಇದೀಗ ಮಾನ್ಸಿ (Mansi) ಪಾತ್ರದಲ್ಲಿ ನಯನಾ ಕಾಣಿಸಿಕೊಳ್ಳಲಿದ್ದಾರೆ. 

ಪುಟ್ಟಗೌರಿ ಮದುವೆ (Puttagowri Maduve), ಸತ್ಯಂ ಶಿವಂ ಸುಂದರಂ (Sathyam Shivam Sundaram) ಧಾರಾವಾಹಿಯಲ್ಲಿ ನಟಿಸಿರುವ ನಯನಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೂ ಬಣ್ಣದ ಲೋಕದಲ್ಲಿ ಸಖತ್ ಬ್ಯುಸಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಗರ್ಭಿಣಿ (pregnancy) ಎನ್ನುವ ವಿಚಾರವನ್ನು ಅನೌನ್ಸ್ ಮಾಡಿದ ನಂತರ ಸಣ್ಣದೊಂದು ಬ್ರೇಕ್ ತೆಗೆದುಕೊಂಡರು. ನಟಿಸುತ್ತಿರಲಿಲ್ಲವಾದರೂ ಇನ್‌ಸ್ಟಾಗ್ರಾಂ  IGTVನಲ್ಲಿ ಹೆಣ್ಣುಮಕ್ಕಳಿಗೆ ಸೌಂದರ್ಯ (Beauty Tips) ಮತ್ತು ಆರೋಗ್ಯದ ಬಗ್ಗೆ ಟಿಪ್ಸ್ ನೀಡುತ್ತಿದ್ದರು. 

ವಿಭಿನ್ನ ಶೈಲಿಯಲ್ಲಿ ಪುತ್ರನೊಟ್ಟಿಗೆ ಫೋಟೋ ಶೊಟ್‌ ಮಾಡಿಸಿದ ಕಿರುತೆರೆ ನಟಿ!

2019ರ ಗಣೇಶನ ಹಬ್ಬದಂದು (Ganesha Chaturti) ಕುಟುಂಬಕ್ಕೆ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಂಡಿದ್ದಾರೆ.  ಪುತ್ರನ ಪುಟ್ಟ ಹೆಜ್ಜೆಯಿಂದ ಹಿಡಿದು, ಈಗನವರೆಗೂ ಪ್ರತಿ ಹಬ್ಬ ಮತ್ತು ಸ್ಪೆಷಲ್ ದಿನಗಳ ಫೋಟೋಶೂಟ್ ಮಾಡಿಸುತ್ತಾರೆ. ಪುತ್ರ ಪ್ರಯಾನ್ ಭಾರದ್ವಾಜ್ (Prayan Bharadwaj) ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. 5 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಈ ಪುಟ್ಟ ಬಾಲಕ ಕೆಲವೊಂದು ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡುತ್ತಾನೆ. 

ಸ್ನಾತಕೋತ್ತರ ಪದವಿ ಪಡೆದಿರುವ ನಯನಾ ಎರಡು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ನೃತ್ಯ ಮತ್ತು ಸಂಗೀತದ ಕಡೆ ತೊಡಗಿಸಿಕೊಂಡು ಹಾಗೆ ಬಣ್ಣದ ಜರ್ನಿ ಆರಂಭಿಸಿದ್ದಾರೆ.  53 ಸಾವಿರ ಫಾಲೋವರ್ಸ್ ಹೊಂದಿರುವ ನಯನಾ ಮಮ್ಮಿ ಬ್ಲಾಗರ್ ಆಗಿ ಗುರುತಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?