17 ಲಕ್ಷದ ಮಹೀಂದ್ರಾ ಥಾರ್ ಖರೀದಿಸಿದ ನಟಿ ಅನುಪಮಾ ಗೌಡ!

Published : Aug 18, 2022, 02:42 PM IST
17 ಲಕ್ಷದ ಮಹೀಂದ್ರಾ ಥಾರ್ ಖರೀದಿಸಿದ ನಟಿ ಅನುಪಮಾ ಗೌಡ!

ಸಾರಾಂಶ

ಹೊಸ ಕಾರು ಖರೀದಿಸಿದ ಅನುಪಮಾ ಗೌಡ. ಯೂಟ್ಯೂಬ್‌ ವ್ಲಾಗ್ ಮಾಡಲು ಕಾರಣವಿದೆ...

ಕನ್ನಡ ಕಿರುತೆರೆ ಜನಪ್ರಿಯ ನಟಿ ಕಮ್ ನಿರೂಪಕಿ ಅನುಪಮಾ ಗೌಡ ಹೊಸ ಕಾರು ಖರೀದಿಸಿದ್ದಾರೆ. ಅದುವೇ ಮಹೀಂದ್ರಾ ಥಾರ್. ಸಧ್ಯಕ್ಕೆ ಮಾರ್ಕೆಟ್‌ನಲ್ಲಿ ಈ ಕಾರಿನ ಬೆಲೆ 17 ಲಕ್ಷ್ಮದಿಂದ 21 ಲಕ್ಷ ರೂಪಾಯಿದೆ. ನಾಲ್ಕು ವರ್ಷಗಳಿಂದ ಬಳಸಿರುವ ಕಾರನ್ನು ಕೊಟ್ಟು ಈ ಕೆಂಪು ಬಣ್ಣದ ಥಾರ್‌ ಖರೀದಿಸಿರುವ ಜರ್ನಿಯನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

'ನಾನು ಕಾರು ಬಳಸುವುದರ ಬಗ್ಗೆ ಅಥವಾ ಕಾರು ಖರೀದಿ ಮಾಡಿರುವುದರ ಬಗ್ಗೆ ಯಾವತ್ತೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿಲ್ಲ ಆದರೆ ಈ ಸಲ ಮಾಡಲು ಕಾರಣವಿದೆ. ನನ್ನ ಜರ್ನಿನ ನಿಮ್ಮ ಜೊತೆ ಶೇರ್ ಮಾಡಬೇಕು ನಿಮಗೂ  ಇದೆಲ್ಲಾ ತಿಳಿಯಬೇಕು ಎಂದು ವಿಡಿಯೋ ಮಾಡುತ್ತಿರುವೆ' ಎಂದು ಅನುಪಮಾ vlog ಅರಂಭಿಸಿದ್ದಾರೆ. 

ವಿದೇಶದಲ್ಲಿ ಅನುಪಮಾ ಗೌಡ: ಆನೆಯೊಟ್ಟಿಗೆ ಒಂದು ದಿನ

'ನಾನು ಮೊದಲ ಗಾಡಿ ಅಂತ ತೆಗೆದುಕೊಂಡಿದ್ದು Dio. ತುಂಬಾನೇ ಇಷ್ಟ ಆಗಿತ್ತು. ನಾನಾ ಕಾರಣಗಳಿಂದ ಅದನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಾನು ಮೊದಲು ಕಾರ್ ಖರೀದಿ ಮಾಡಿದ್ದು 2014 ಆಗಸ್ಟ್ 16. ಹುಂಡೈ i10 ಕಾರದು. ಶೂಟಿಂಗ್‌ ದಿನ ಬೆಳಗ್ಗೆ ಬೇಗ ಪಿಕಪ್ ಮಾಡುತ್ತಿದ್ದರು ಆಮೇಲೆ ರಾತ್ರಿ ತಡವಾಗಿ ಮನೆ ಬರುತ್ತಿದ್ದೆ ಈ ಸಮಯದಲ್ಲಿ ತುಂಬಾ ಟೈಮ್ ವೇಸ್ಟ್‌ ಆಗುತ್ತಿತ್ತು. ಈ ಕಾರಣದಿಂದ ನಾನು ಕಾರು ಖರೀದಿಸಿದೆ. ನಾಲ್ಕು ವರ್ಷ ಆ ಕಾರನ್ನು ಬಳಸಿದೆ. ನೇರವಾಗಿ ಹೋಗುವುದು ವಾಪಸ್ ಬರುವುದಷ್ಟೇ ನನಗೆ ಬರುತ್ತಿತ್ತು. ನನಗೆ ಸರಿಯಾಗಿ ಕಾರು ಓಡಿಸಲು ಬರುತ್ತಿರಲಿಲ್ಲ ಮೊದಲ ಕಾರು ಎಲ್ಲವೂ ಕಲಿಸಿತ್ತು. ಬಿಗ್ ಬಾಸ್ ಮುಗಿಸಿಕೊಂಡು ನಾನು ಹೊರ ಬಂದ ನಂತರ ನಾನು ಕ್ರೇಟಾ ಬುಕ್ ಮಾಡಿದೆ. ಕಾರು ಬರುವುದು ತುಂಬಾ ತಡವಾಯಿತ್ತು. ಸೆಪ್ಟೆಂಬರ್‌ ತಿಂಗಳಿನಲ್ಲಿ ನನ್ನ ತಂದೆ ತೀರಿಕೊಂಡಿದ್ದರು ಅಕ್ಟೋಬರ್‌ನಲ್ಲಿ ಕಾರು ಬಂತು. ಅವರಿಗೆ ಕಾರು ಬೇಡ ಅಂತ ಹೇಳಿದೆ ಆದರೆ ಲೋನ್ ಪ್ರಾಸೆಸ್‌ ಅಗಿ ಒಂದು ಸಲ EMI ಕೂಡ ಕಟ್ ಆಗಿತ್ತು ಈ ಕಾರಣಕ್ಕೆ ಇಷ್ಟವಿಲ್ಲದಿದ್ದರೂ ಕಾರು ಖರೀದಿ ಮಾಡಿದೆ.' ಎಂದು ಅನುಪಮಾ ಮಾತನಾಡಿದ್ದಾರೆ.

'ನನ್ನ i10 ಕಾರ್‌ನ ನನ್ನ ಸ್ನೇಹಿತನಿಗೆ ಕೊಟ್ಟೆ. ಮೊದಲನೇ ಕಾರು ಎಮೋಷನ್ ಇದ್ದ ಕಾರಣ ಸ್ನೇಹಿತನಿಗೆ ಕೊಟ್ಟರೆ ಯಾವಾಗ ಬೇಕಿದ್ದರೂ ನೋಡಬಹುದು ಅಂತ. ಈ ಕಾರಿಗೆ ನಾಲ್ಕು ವರ್ಷ ಆಯ್ತು ನನ್ನ ಬಜೆಟ್‌ಗೆ ಬೇರೆ ಯಾವ ಕಾರು ಸಿಕ್ಕಿರಲಿಲ್ಲ ಮ್ಯಾನುಯಲ್‌ ಸಾಕಾಗಿತ್ತು. ಒಂದು ದಿನ ರೋಡಲ್ಲಿ ಸಖತ್ ಆಗಿರುವ ಕಾರು ನೋಡಿದೆ ಕಂಪನಿಗೆ ಕರೆ ಮಾಡಿ ಟೆಸ್ಟ್‌ ಟ್ರೈವ್ ಮಾಡಿದೆ. ಬುಕ್ ಮಾಡಿರುವೆ.' ಎಂದು ಅನುಪಮಾ ಹೇಳಿದ್ದಾರೆ.

ಅನುಪಮಾ ಗೌಡ ಈಗ ಓಪನ್ ವಾಟರ್ ಡೈವರ್! ಸಾಹಸಕ್ಕೆ ಸಿಗ್ತು ಸರ್ಟಿಫಿಕೇಟ್‌

'ಈ ವಿಡಿಯೋ ಮೂಲಕ ಜನರಿಗೆ ತಿಳಿಸುವುದು ಒಂದೇ. ನನ್ನ ಕೈಯಲ್ಲಿ ಮಾಡಲು ಆಗುತ್ತೆ ಅಂದ್ರೆ ಎಲ್ಲರಿಗೂ ಮಾಡಲು ಆಗುತ್ತೆ. ಝೀರೋಯಿಂದ ನಾನು ಜರ್ನಿ ಆರಂಭಿಸಿದ್ದು. ನನ್ನ ಮೂರನೇ ಕಾರು ಆಗಿರುವ ಕಾರಣ ಮಾತನಾಡುತ್ತಿರುವೆ. ಜೀವನದಲ್ಲಿ ಒಂದಿಷ್ಟು ಡ್ರೀಮ್‌ಗಳನ್ನು ಇಟ್ಟುಕೊಳ್ಳಿ ಸಾಧನೆ ಮಾಡೇ ಮಾಡುತ್ತೀರಾ. ಕಾರು ತೆಗೆದುಕೊಳ್ಳುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು ತೆಗೆದುಕೊಂಡ ನಂತರ ತಿಂಗಳು ತಿಂಗಳು  EMI ಕಟ್ಟುವುದು ತುಂಬಾನೇ ಇಷ್ಟ. ಜೀವನದಲ್ಲಿ ಎಲ್ಲರೂ ಮೊದಲು ಸೇವಿಂಗ್ಸ್ ಮಾಡಿ. ಸಾಯುವುಷ್ಟರಲ್ಲಿ ಜೀವದಲ್ಲಿ ಏನಾದರೂ ಸಾಧನೆ ಮಾಡಬೇಕು' ಎಂದಿದ್ದಾರೆ ಅನು. 

'ಶೋ ರೂಮಿನಿಂದ ಕಾರು ತೆಗೆದುಕೊಂಡು ನಾನು ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟೆ. ತೆಗೆದುಕೊಂಡ ದಿನವೇ ನಾನು ಪೂಜೆ ಮಾಡಿಸಿರುವ ಕಾರಿದು. ಕಾರು ಕೇವಲ ಲಕ್ಷ್ಯೂರಿ ಅಲ್ಲ ಅಥವಾ ಎಲ್ಲರಿಗೂ ಖರೀದಿ ಮಾಡಲು ಆಗಲ್ಲ ಅಂತೇನೂ ಇಲ್ಲ. ಎಲ್ಲರ ಕೈಯಲ್ಲೂ ಕಾರನ್ನು ಖರೀದಿ ಮಾಡಲು ಆಗುತ್ತದೆ. ನನ್ನ ಕಾರು ನನಗೆ ಎರಡನೇ ಮನೆ ರೀತಿ. ನಾನು ಅದನ್ನು ಚೆನ್ನಾಗಿ ನೋಡಿಕೊಂಡರೆ ಕಾರು ಕೂಡ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?