
'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಮನೆ ಮಾತಾಗಿರುವ ರಾಜೇಶ್ ಧ್ರುವ ಕೊರೋನಾ ತಂದಿಟ್ಟ ಪರಿಸ್ಥಿತಿಗೆ, ಕಲಾವಿದರು ಹೇಗೆಲ್ಲಾ ಹೊಡೆತ ತಿನ್ನುತ್ತಿದ್ದಾರೆ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶವೊಂದರಲ್ಲಿ ಮನಬಿಟ್ಟಿ ಮಾತನಾಡಿದ್ದಾರೆ. ಭರವಸೆ ಕಳೆದುಕೊಳ್ಳದೇ ಧೈರ್ಯ ಹಾಗೂ ನಂಬಿಕೆಯಿಂದ ಕೆಲಸ ಮಾಡುವಂತೆ ಸ್ಪೂರ್ತಿ ನೀಡಿದ್ದಾರೆ.
ಸರ್ಕಾರ ಲಾಕ್‌ಡೌನ್ ಘೋಷಿಸುತ್ತಿದ್ದಂತೆ ಕೆಲವೊಂದು ಧಾರಾವಾಹಿ ತಂಡಗಳು ಚಿತ್ರೀಕರಣ ಮಾಡಲು ಬೇರೆ ಬೇರೆ ಊರುಗಳಿಗೆ ಅಥವಾ ಕಡಿಮೆ ಜನರ ತಂಡ ಮಾಡಿಕೊಂಡು ರೆಸಾರ್ಟ್ ಕಡೆ ಮುಖ ಮಾಡಿದ್ದರು. ಆದರೆ ಕಠಿಣ ನಿಯಮ ಜಾರಿಗೊಂಡ ಕಾರಣ ಚಿತ್ರೀಕರಣಕ್ಕೆ ಸಂಪೂರ್ಣ ಬ್ರೇಕ್ ಬಿತ್ತು. ಒಳ್ಳೆಯ ಪ್ರಾಜೆಕ್ಟ್ ಸಿಕ್ಕರೆ ಕೆಲವರು ಸುಲಭವಾಗಿ ಹೆಸರು ಗಳಿಸಬಹುದು. ಆದರೆ ಇನ್ನೂ ಕೆಲವರು ಸ್ಕ್ರ್ಯಾಚ್‌ನಿಂದ ಆರಂಭಿಸಬೇಕು. ಒಂದು ದಿನದ ನಷ್ಟವನ್ನೂ ಗಳಿಸುವುದೂ ಕಷ್ಟವಾಗಿದೆ.
3,000 ಸಿನಿ ಕಾರ್ಮಿಕರಿಗೆ ಉಪ್ಪಿ, ಸುದೀಪ್, ಲೀಲಾವತಿ ಊಟ
'ಕಲಾವಿದರು ಮಾತ್ರವಲ್ಲ ತಂತ್ರಜ್ಞರು ತುಂಬಾ ಸಂಕಷ್ಟದಲ್ಲಿದ್ದಾರೆ. ಸುಮಾರು 300 ಮಂದಿ ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ಕಳೆದ ವರ್ಷ ಆದ ನಷ್ಟದಿಂದಾನೇ ಇನ್ನೂ ಸುಧಾರಿಸಿಕೊಂಡಿಲ್ಲ ಆಗಲೇ ಮತ್ತೊಂದು ಹೊಡೆತ ಅಂದ್ರೆ ಕಷ್ಟ ಆಗುತ್ತದೆ. ಚಿತ್ರರಂಗದಲ್ಲೂ ತೊಂದರೆ ಆಗುತ್ತಿರುವ ಕಾರಣ ಎಲ್ಲಾದರೂ ಅವಕಾಶ ಸಿಕ್ಕರೆ ಸಾಕು ಎಂಬ ಪರಿಸ್ಥಿತಿ ಎದುರಾಗಿದೆ. ನಾನು ಕಣ್ಣಾರೆ ಸಿನಿಮಾ ನಟರು ಕಿರುತೆರೆಗೆ ಆಡಿಷನ್ ನೀಡುವುದನ್ನು ನೋಡಿದ್ದೀನಿ,' ಎಂದು ರಾಜೇಶ್ ಮಾತನಾಡಿದ್ದಾರೆ.
'ಈ ಲಾಕ್‌ಡೌನ್ ಮುಂದುವರೆಯುವುದರಲ್ಲಿ ಅನುಮಾವಿಲ್ಲ. ಈಗಿನ ಪರಿಸ್ಥಿತಿ ನೋಡಿ ನಾವು ನಂಬಿಕೆ ಕಳೆದುಕೊಳ್ಳಬಾರದು. ನಮ್ಮ ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು. ಬಂದ ಅವಕಾಶ ಒಪ್ಪಿಕೊಂಡು, ಕೆಲಸ ಮಾಡಬೇಕು. ಅದೇ ಸಂಚಿಕೆಯನ್ನು ಪದೇ ಪದೇ ಪ್ರಸಾರ ಮಾಡುವುದು ಕಷ್ಟ. ತಮ್ಮ ಮನಸ್ಸಿಗೆ ಸಂತೋಷ ನೀಡುವಂಥ ವಿಚಾರಗಳನ್ನು ವೀಕ್ಷಿಸಬೇಕು ಎಂದು ಬಯಸುತ್ತಾರೆ,' ಎಂದಿದ್ದಾರೆ ರಾಜೇಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.