ಕುಟುಂಬದವರನ್ನ ಕಳ್ಕೊಂಡ 'ಗಟ್ಟಿಮೇಳ' ನಟ ಪವನ್; ಸರ್ಕಾರದಿಂದ ಸಾಮೂಹಿಕ ಕೊಲೆ?

Suvarna News   | Asianet News
Published : Apr 24, 2021, 09:10 AM ISTUpdated : Apr 24, 2021, 01:24 PM IST
ಕುಟುಂಬದವರನ್ನ ಕಳ್ಕೊಂಡ 'ಗಟ್ಟಿಮೇಳ' ನಟ ಪವನ್; ಸರ್ಕಾರದಿಂದ ಸಾಮೂಹಿಕ ಕೊಲೆ?

ಸಾರಾಂಶ

ಕಿರುತೆರೆ ನಟ ಪವನ್ ಕುಮಾರ್ ಕೊರೋನಾದಿಂದ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ಸರ್ಕಾರ ಮಾಡುತ್ತಿರುವ ತಪ್ಪುಗಳನ್ನು ಬಿಚ್ಚಿಟ್ಟಿದ್ದಾರೆ.

ಕನ್ನಡ ಕಿರುತೆರೆ ಲೋಕದ ಜನಪ್ರಿಯಾ ನಟಿ ಪವನ್ ಕುಮಾರ್ ಕೊರೋನಾ ವೈರಸ್‌ನಿಂದಾಗಿ ತಮ್ಮ ಭಾವ ಹಾಗೂ ಅವರ ತಂದೆಯನ್ನು ಎರಡು ದಿನದ ಅಂತರದಲ್ಲಿಯೇ ಕಳೆದುಕೊಂಡಿದ್ದಾರೆ. ರೋಗಿಗಳಿಗೆ ಸರಿಯಾದ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಡದಿರುವುದೇ ಇದಕ್ಕೆ ಕಾರಣ, ಎಂದು ಪವನ್ ವಿಡಿಯೋ ಮಾಡಿದ್ದಾರೆ.

"

'ಕೋವಿಡ್‌19 ಗ್ರೌಂಡ್ ರಿಯಾಲಿಟಿ ಹೇಳುವೆ. ಈಗಿನ ಪರಿಸ್ಥಿತಿ ನೋಡಿದರೆ ಯಾವ ವೈದ್ಯಕೀಯ ಕ್ಷೇತ್ರವೂ  ಮ್ಯಾನೇಜ್ ಮಾಡಲು ಆಗದಷ್ಟು ಪರಿಸ್ಥಿತಿ ಹದಗೆಟ್ಟಿದೆ. ಎಲ್ಲವೂ ನಮ್ಮ ಕೈ ಮೀರಿ ಹೋಗುತ್ತಿದೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಇದು ಪ್ಯಾಂಡಮಿಕ್ ಅಲ್ಲ ಸರ್ಕಾರ ಸಮೂಹಿಕವಾಗಿ ಮಾಡುತ್ತಿರುವ ಕೊಲೆ,' ಎಂದು ಪವನ್ ಬರೆದುಕೊಂಡಿದ್ದಾರೆ. 

ಮಕ್ಕಳಿಗೆ ಕೊರೋನಾ ಬಂದ್ರೇನು ಮಾಡಬೇಕು?; ನಟಿ ಸಮೀರಾ ರೆಡ್ಡಿ ಶೇರ್ ಮಾಡಿದ ವಿಡಿಯೋ! 

'ರಾಮ ಮಂದಿರ, ಹೊಸ ಪಾರ್ಲಿಮೆಂಟ್ ಎತ್ತರದ ಪ್ರತಿಮೆಗಳು ಇವುಗಳನ್ನು ನಮ್ಮಂಥವರ ಹೆಣಗಳು ಮೇಲ ಕಟ್ಟಲಾಗಿದೆ. ಇದನ್ನೆಲ್ಲಾ ನೆನಪಿಸಿಕೊಂಡರೆ ಮೈಯಲ್ಲಾ ಕುದಿಯುತ್ತಿದೆ. ಸೂಕ್ತ ವ್ಯವಸ್ಥೆ ಇಲ್ಲದೇ, ಈ ಮಹಾಮಾರಿಯನ್ನು ಸೋಲಿಸಲು ಸಾಧ್ಯವಿಲ್ಲ. ವೈದ್ಯಕೀಯ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ವ್ಯವಸ್ಥೆಯೇ ಸರಿಯಾಗಿಲ್ಲ,' ಎಂದಿದ್ದಾರೆ ಪವನ್.

'ನಾನು ಕಣ್ಣಾರೆ ನೋಡಿದ್ದೇನೆ. ಆಸ್ಪತ್ರೆಯಲ್ಲಿ ಬೆಡ್‌ ಇಲ್ಲ, ಆಮ್ಲಜನಕವಿಲ್ಲ. ಆ್ಯಂಬುಲೆನ್ಸ್‌ಗಳಲ್ಲಿ ರೋಗಿಗಳನ್ನು ಇಟ್ಟುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗುತ್ತಿದ್ದಾರೆ. ಸ್ವತಃ ನಾನೇ ಭಾವನಿಗೆ ಆಮ್ಲಜನಕ ಅರೇಂಜ್ ಮಾಡಲು ರಾತ್ರಿ ಎಲ್ಲಾ ಬೀದಿಗಳಲ್ಲಿ ಅಲೆದಿದ್ದೇನೆ. ಇದಲ್ಲಿಯೂ ದುಡ್ಡು ಮಾಡಿಕೊಳ್ಳುವ ಬ್ರೋಕರ್‌ಗಳು ಇದ್ದಾರೆ. ಬೆಡ್‌ ಕೊಡಿಸಲು ಬ್ರೋಕರ್ ಇದ್ದಾರೆ,' ಎಂದು ಪವನ್ ಮಾತನಾಡುತ ಭಾವುಕರಾಗಿದ್ದಾರೆ.

 

 

ಕೋವಿಡ್ ವಿರುದ್ಧ ಹೋರಾಡೋಣ; ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸೋಣ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್‌ ಆಯ್ತು: ಅಭಿಷೇಕ್‌ ಶ್ರೀಕಾಂತ್
Bigg Boss Kannada: ಎಲ್ಲಿ ನೋಡಿದ್ರೂ ಗಿಲ್ಲಿ ಗಿಲ್ಲಿ, ಪಿಆರ್‌ ಒಗಳಿಗೆ ವಿನಯ್ ಗೌಡ ಹೇಳಿದ್ದೇನು?