'ನೀವು ಚೀಪ್' ಎಂದ ನಿಧಿ ಸುಬ್ಬಯ್ಯಗೆ 'ನಿನ್ನ ಚರಿತ್ರೆ ರಿವೀಲ್ ಮಾಡ್ಲಾ?' ವಾರ್ನ್ ಮಾಡಿದ ಪ್ರಶಾಂತ್!

Suvarna News   | Asianet News
Published : Apr 23, 2021, 12:30 PM ISTUpdated : Apr 23, 2021, 12:53 PM IST
'ನೀವು ಚೀಪ್' ಎಂದ ನಿಧಿ ಸುಬ್ಬಯ್ಯಗೆ  'ನಿನ್ನ ಚರಿತ್ರೆ ರಿವೀಲ್ ಮಾಡ್ಲಾ?' ವಾರ್ನ್ ಮಾಡಿದ ಪ್ರಶಾಂತ್!

ಸಾರಾಂಶ

ವಾರದಿಂದ ಸೈಲೆಂಟ್ ಆಗಿದ್ದ ಪ್ರಶಾಂತ್ ಸಂಬರಗಿ ಇದೀಗ ಮನೆ ಮಂದಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೊಟ್ಟೆ ಮಾಡಿದ ಅವಾಂತರ ನೋಡಿ...  

ಬಿಗ್ ಬಾಸ್‌ ಮನೆಯಲ್ಲಿ ಜೀವನ ನಡೆಸಲು ದಿನ ನಿತ್ಯ ಬೇಕಿದ್ದ ಸೌಲಭ್ಯಗಳನ್ನು ಬಿಬಿ ವಶಪಡಿಸಿಕೊಂಡಿದ್ದಾರೆ. ಟಾಸ್ಕ್ ಮಾಡುವ ಮೂಲಕ ಎಲ್ಲಾ ಸೌಲಭ್ಯಗಳ್ನೂ ಪಡೆದುಕೊಳ್ಳ ಬೇಕಿದೆ. ಈಗಾಗಲೇ ನೀಡಿರುವ ಟಾಸ್ಕ್‌ಗಳಲ್ಲಿ ಮೂರು ಟಾಸ್ಕ್‌ಗಳನ್ನು ರಾಜೀವ್, ಅರವಿಂದ್ ಹಾಗೂ ಮಂಜು  ಅಟವಾಡಿರುವುದಕ್ಕೆ ಅಡುಗೆ ಅನಿಲ ಅವರಿಗೆ ಮಾತ್ರ ನೀಡಲಾಗಿದೆ.

ನಟಿ ಶುಭಾ ಪೂಂಜಾ ಹಲ್ಲೆಲ್ಲಾ ಉದುರಿಹೋಗ್ತಿದೆ; ಟೂಥ್‌ಬ್ರಷ್‌ ಇಲ್ಲ, ಪಾತ್ರೆ ತೊಳೆಯೋ ನಾರೇ ಗತಿ! 

ಬಿಗ್ ಬಾಸ್‌ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಮನೆ ಮಂದಿ ಗ್ಯಾಸ್ ಬಳಸದೆ ಓವನ್‌ನಲ್ಲಿ ಮೊಟ್ಟೆ ಬೇಯಿಸಿ ತಿಂದಿದ್ದಾರೆ.  ಪ್ರಶಾಂತ್ ಮೊಟ್ಟೆ ತಿನ್ನುತ್ತಿದ್ದ ವೇಳೆ ನಿಧಿ ಸುಬ್ಬಯ್ಯ ಪ್ರಶಾಂತ್ ಎಷ್ಟು ಮೊಟ್ಟೆ ತಿಂದರು, ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಕೂಡ ಬೆಂಬಲ ನೀಡಿದ್ದಾರೆ. ಪ್ರಶಾಂತ್ ತಾನು ಹೆಚ್ಚು ಮೊಟ್ಟೆ ತಿಂದಿಲ್ಲ, ಎಂದು ವಾದ ಮಾಡಿದರೂ ಜಗಳ ನಿಲ್ಲಿಸದ ನಿಧಿಗೆ 'ಪುಣ್ಯಾತ್‌ಗಿತ್ತಿ, ಸುಮ್ಮನಿರಮ್ಮ' ಅಂತೆಲ್ಲ ಪ್ರಶಾಂತ್ ಹೇಳಿದ್ದಾರೆ. 

ಟಾಸ್ಕ್‌ ವಿಚಾರವಾಗಿ ಹಾಗೂ ಮನೆ ದಿನಸಿ ವಿಚಾರವಾಗಿ ಪ್ರಶಾಂತ್ ಹಾಗೂ ನಿಧಿ ನಡುವೆ ಜಗಳ ಆಗುವುದು ತುಂಬಾನೇ ಕಾಮನ್. ಆದರೆ ಈ ಬಾರಿ ಇಬ್ಬರಿಗೂ ಹಸಿವಾಗಿದ್ದ ಕಾರಣ ಜಗಳ ದೊಡ್ಡದಾಗಿದೆ. ಮೊಟ್ಟೆ ತಿಂದೆ, ಎಂಬ ಆರೋಪ ಮಾಡಿದವರ ವಿರುದ್ಧ ಪ್ರಶಾಂತ್ ಗರಂ ಆಗಿದ್ದಾರೆ. ರಾಜೀವ್, ನಿಧಿ ಸುಬ್ಬಯ್ಯ, ಮಂಜು ಪಾವಗಡ ಹಾಗೂ ರಘು ಜೊತೆ ವಾದ ಮಾಡಿದ್ದಾರೆ. ಪ್ರಶಾಂತ್ ಹೀಗೆಲ್ಲಾ ಮಾತನಾಡುತ್ತಿರುವುದು ಸರಿ ಅಲ್ಲ  'ನೀವು ಚೀಪ್' ಎಂದು ನಿಧಿ ಹೇಳುತ್ತಾರೆ. ತಕ್ಷಣವೇ ಪ್ರಶಾಂತ್ 'ನನ್ನನ್ನು ಮೊಟ್ಟೆ ಕಳ್ಳ ಅಂತ ಮಾಡಬೇಡಿ, ನೀವೆಲ್ಲಾ ಹಾಲಿನಲ್ಲಿ ಸ್ನಾನ ಮಾಡಿಕೊಂಡು ಬಂದವರು ಪರಿಶುದ್ಧರು. ನಿಮ್ಮ ಚರಿತ್ರೆ ಹೇಳ್ಲಾ?' ಎಂದು ಪ್ರಶಾಂತ್ ವೈಯಕ್ತಿಕ ಪ್ರಶ್ನೆ ಕೇಳಿ, ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಇನ್ನೇನು ಆಗುತ್ತೋ ನೋಡಬೇಕು ಅರಮನೆಯಂಥ ಸೆರೆಮನೆಯಲ್ಲಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?
Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...