
ಬಿಗ್ ಬಾಸ್ ಸೀಸನ್ 8ರ ಎರಡನೇ ಇನಿಂಗ್ಸ್‌ನ ಸ್ಪರ್ಧಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ತಮ್ಮ ಬೆನ್ನ ಹಿಂದೆ ಯಾರು ಮಾತನಾಡಿಕೊಳ್ಳುತ್ತಾರೆ? ಯಾರು ಏನು ಪ್ಲಾನ್ ಮಾಡುತ್ತಾರೆ ಎಂದು ತಿಳಿದುಕೊಂಡು ಬಂದಿದ್ದಾರೆ. ಆದರೆ ಇದರಿಂದ ಕೆಲವರ ಮನಸ್ಸಿಗೆ ನೋವಾಗುತ್ತಿದೆ, ಕೆಲವರ ಸ್ನೇಹ ಮುರಿದು ಬೀಳುತ್ತಿದೆ.
ನಾನೇ ಟ್ರೋಲ್ ಆಗಿದ್ದಕ್ಕೆ ಬೇಸರವಾಗಿದೆ: ಮಂಜು ಪಾವಗಡ
ಕೆಲವು ದಿನಗಳ ಹಿಂದೆ ನಡೆದ ಲೋಟದ ಟಾಸ್ಕ್‌ನಲ್ಲಿ ದಿವ್ಯಾ ಸುರೇಶ್ ಶಮಂತ್‌ಗೆ ಸಪೋರ್ಟ್ ಮಾಡಿದ್ದಾರೆ. ಶಮಂತ್ ಎದುರಾಳಿಯಾಗಿ ಮಂಜು ಪಾವಗಡ ಇದ್ದರೂ ಹೀಗೆ ಮಾಡಿದ್ದಾರೆ, ಇದರಿಂದ ಮಂಜುಗೆ ಬೇಸರವಾಗಿದೆ. ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ನಾವಿಬ್ಬರೂ ಜೊತೆಯಾಗಿ ಇದ್ದಿದ್ದಕ್ಕೆ ಅರ್ಥವೇನು? ನೀನು ಇಷ್ಟು ಬದಲಾಗುತ್ತೀಯಾ ಅಂದುಕೊಂಡಿರಲಿಲ್ಲ? ನಿನ್ನ ವರ್ತನೆಯಿಂದ ನನಗೆ ಎಷ್ಟು ಬೇಸರ ಆಗಿರಬಹುದು ಯೋಚಿಸಿದ್ದೀಯಾ? ವೀಕೆಂಡ್ ಎಪಿಸೋಡ್‌ನಲ್ಲಿ ಏನೇ ಆದರೂ ನಾನು ನಿನ್ನ ಜೊತೆಗಿರುವೆ ಆದರೆ ನೀನು ಮಾತ್ರ ಈ ರೀತಿ ಆಡುತ್ತೀದ್ದೀಯಾ ಎಂದು ಮಂಜು ಜಗಳ ತೆಗೆದಿದ್ದಾರೆ.
ಮಂಜು ಮಾತಿಗೆ ಶಾಕ್ ಆದ ದಿವ್ಯಾ ಸಮರ್ಥನೆ ನೀಡುತ್ತಾರೆ. ಯಾರೇ ಆಟ ಆಡಲಿ ಅವರಿಗೆ ಪ್ರೋತ್ಸಾಹ ಕೊಡುತ್ತೇನೆ ಅದರ ತಪ್ಪೇನಿದೆ ಎನ್ನುತ್ತಾರೆ. ಮಂಜು ಉತ್ತರ ಮಾತ್ರ ಬದಲಾಗಲಿಲ್ಲ. 'ನಾಳೆಯಿಂದ ನಿನ್ನ ಜೊತೆ ಮಾತನಾಡುವುದಿಲ್ಲ' ಎಂದು ದಿವ್ಯಾ ಕಣ್ಣೀರು ಹಾಕಿದ್ದಾರೆ. ನಿನ್ನಿಂದ ದೂರವಾದರೆ ನಿನ್ನ ಫ್ಯಾನ್ಸ್ ವೋಟ್ ಹಾಕುವುದಿಲ್ಲ ನಾನು ಮುಂದಿನ ವಾರನೇ ಮನೆಯಿಂದ ದೂರ ಹೋಗುತ್ತೀನಿ ಎಂದಿದ್ದಾರೆ.
ಮಂಜು ಫಾಲೋವರ್ಸ್‌ಯಿಂದ ವೋಟ್ ಪಡೆಯುವುದಕ್ಕೆ ಇಷ್ಟು ದಿನ ದಿವ್ಯಾ ಜೊತೆಗೆ ಇದ್ದದ್ದು ನಿಜವಾದ ಸ್ನೇಹ ಅಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.