ಚಿತ್ರರಂಗದಲ್ಲಿ ದಶಕದ ಪಯಣ; ಗಾಡ್‌ ಫಾದರೂ ಇಲ್ಲ, ಬ್ಯಾಕಪ್‌ ಇಲ್ಲ!

By Suvarna News  |  First Published Nov 10, 2020, 10:53 AM IST

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹೆಸರು ಮಾಡಿರುವ ನಟ ಚಂದನ್ ಕುಮಾರ್ ಬಣ್ಣದ ಲೋಕಕ್ಕೆ ಕಾಲಿಟ್ಟು, 10 ವರ್ಷ ಪೂರೈಸಿದ್ದಾರೆ. ಈ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.


ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋ ಮೂಲಕ ಮನ ಮನೆಗಳಲ್ಲಿ ಮಾತಾಗಿರುವ ಚಂದನ್‌ ಬೆಳ್ಳಿ ತೆರೆಯಲ್ಲಿಯೂ ಸಾಕಷ್ಟು ಹೆಸರು ಮಾಡಿದ್ದಾರೆ. 2011ರಲ್ಲಿ ಪ್ಯಾಟೆ ಮಂದಿ ಕಾಡಿಗೆ ಬಂದ್ರು ರಿಯಾಲಿಟಿ ಶೋನ ಸ್ಪರ್ಧಿಯಾಗಿ ಕಾಣಿಸಿಕೊಂಡ ನಂತರ ಸುಮಾರು ಎರಡು ವರ್ಷಗಳ ಕಾಲ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಮಿಂಚಿದ್ದಾರೆ.  10 ವರ್ಷ ಪೂರೈಸಿದ ಪ್ರಯುಕ್ತ ಚಂದನ್ ತಮ್ಮ ಕಷ್ಟದ ದಿನಗಳ ಬಗ್ಗೆ ಬರೆದುಕೊಂಡಿದ್ದಾರೆ.

ಚಿನ್ನು - ಚಂದನ್ ಹಿಂಗ್ಯಾಕೆ ಡ್ರಾಮಾ ಮಾಡ್ತಾರೆ..! ಇವ್ರದ್ದು ಬರೀ ಇದೇ ಆಯ್ತು 

Tap to resize

Latest Videos

ಚಂದು ಪೋಸ್ಟ್‌:
'ಎಲ್ಲೂ ಇಲ್ಲದವನು ಈಗ ಎಲ್ಲೋ ಇದ್ದೀನಿ. ಯಾವ ಗಾಡ್‌ಫಾದರ್ ಸಹಾಯವಿಲ್ಲದೇ, ಯಾವುದೇ ರೀತಿಯ ಬ್ಯಾಗ್ರೌಂಡ್‌, ಬ್ಯಾಕಪ್‌ ಸಹ ಇಲ್ಲದೇ ಇಲ್ಲಿರುವೆ. ಜೀವನದಲ್ಲಿ ಸಾಧನೆ ಮಾಡಲೇ ಬೇಕು ಎಂಬ ದೃಢ ನಿರ್ಧಾರವಿತ್ತು. ನನ್ನ ಪಯಣ ಇನ್ನೂ ಇದೆ, ಡಿಸಿಪ್ಲೀನ್‌ ತಪ್ಪುವುದಿಲ್ಲ, ನನ್ನ ದಾರಿಗೆ ಅಡ್ಡ ಆಗುವ ವಿಚಾರಗಳಿಗೆ ಧೈರ್ಯದಿಂದ 'No' ಎನ್ನುವೆ. ನನ್ನ ಜರ್ನಿಯಲ್ಲಿ ನನ್ನ ಜೊತೆಗಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು,' ಎಂದು ಬರೆದಿದ್ದಾರೆ.

 

ಲಕ್ಷ್ಮಿ ಬಾರಮ್ಮ, ಸರ್ವಮಂಗಳ ಮಾಂಗಲ್ಯ ಹಾಗೂ ಸಾವಿತ್ರಮ್ಮ ಗರಿ ಧಾರಾವಾಹಿಯಲ್ಲಿ ಅಭಿನಯಿಸಿ ಬಿಗ್ ಬಾಸ್ ಸೀಸನ್‌ 3ರಲ್ಲಿ ಸ್ಪರ್ಧಿಯಾಗಿದ್ದರು. ಕಿರುತೆರೆ ಮಾತ್ರವಲ್ಲದೇ ಬೆಳ್ಳೆತೆರೆಯಲ್ಲಿಯೂ ಮಿಂಚಿರುವ ಚಂದನ್ ಸುಮಾರು 8 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹಸಿದ ಕೋತಿಗೆ ಹಣ್ಣು ನೀಡಿ 'ಲಕ್ಷ್ಮೀ ಬಾರಮ್ಮಾ' ಚಂದು ಮಾನವೀಯತೆ!

ಚಂದನ್ ಬಣ್ಣದ ಪಯಣ ಹೀಗೆ ಸುಖವಾಗಿರಲಿ ಹಾಗೂ ಇನ್ನಷ್ಟು ಯಶ ಸಿಗಲಿ ಎಂದು ಆಶಿಸೋಣ.

click me!