ಕಮಲಿ ಸೀರಿಯಲ್ ಖ್ಯಾತಿಯ ರಿಷಿ ಸರ್ ಮತ್ತು ಕಮಲಿ ಅಂದ್ರೆ ನಿರಂಜನ್ ಹಾಗೂ ಅಮೂಲ್ಯ ಗೌಡ ಸೀರಿಯಲ್ ನಲ್ಲಿ ಇದ್ದಂತೆ ನಿಜವಾಗಿಯೂ ಲವ್ ಮಾಡ್ತಿದ್ದಾರ? ಹೌದು ಎನ್ನುವಂತಿದೆ ವೈರಲ್ ಆಗ್ತಿರೋ ವಿಡೀಯೋ!
ಕೆಲ ವರ್ಷಗಳ ಹಿಂದೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿ ನಿಮಗೆ ನೆನಪಿದೆ ತಾನೇ? ಈ ಧಾರಾವಾಹಿಯ ರಿಷಿ ಸರ್ ಹಾಗೂ ಕಮಲಿಯ ಜೋಡಿ ವೀಕ್ಷಕರ ಫೇವರಿಟ್ ಜೋಡಿಗಳಲ್ಲಿ ಒಂದಾಗಿತ್ತು. ರಿಷಿ ಕಾಲೇಜಿನ ಲೆಕ್ಚರ್ ಆಗಿದ್ದರೆ, ಕಮಲಿ ರಿಷಿಯ ಸ್ಟೂಡೆಂಟ್ ಆಗಿದ್ದಳು, ಇವರಿಬ್ಬರ ನಡುವಿನ ಲವ್ ಸ್ಟೋರಿ, ನಂತರ ಕಮಲಿಯ ನಿಜವಾದ ಪೋಷಕರು ಯಾರು ಎನ್ನುವ ಸತ್ಯ, ರಿಷಿ ಮತ್ತು ಕಮಲಿಯ ಮದುವೆ, ಇಬ್ಬರ ರೊಮ್ಯಾನ್ಸ್ ಎಲ್ಲವನ್ನೂ ವೀಕ್ಷಕರು ತುಂಬಾನೆ ಇಷ್ಟ ಪಟ್ಟಿದ್ದರು.
ಸೀರಿಯಲ್ ಮುಗಿದು ಎಷ್ಟೋ ವರ್ಷಗಳಾದ ಮೇಲೆ ಈವಾಗ ಯಾಕಪ್ಪ ರಿಷಿ ಸರ್ ಹಾಗೂ ಕಮಲಿಯ ಬಗ್ಗೆ ಮಾತು ಅಂತಾ ನೀವು ಕೇಳ್ತಿದ್ದೀರಾ? ಅದಕ್ಕೂ ವಿಷ್ಯ ಇದೆ. ಅದೇನೆಂದರೆ ಕಮಲಿ ಖ್ಯಾತಿಯ ಅಮೂಲ್ಯ ಗೌಡ, ತೆಲುಗು ಸೀರಿಯಲ್ ನಲ್ಲೂ ಜನಪ್ರಿಯತೆ ಗಳಿಸಿದ ನಟಿ. ಅಮೂಲ್ಯ ತೆಲುಗಿನ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಅಮೂಲ್ಯ ಹಾಗೂ ನಿರಂಜನ್ ಕುರಿತಾದ ಒಂದು ಗುಟ್ಟು ರಟ್ಟಾಗಿದೆ. ಇದನ್ನ ನೋಡಿದ್ರೆ ಇವರಿಬ್ಬರು ಒಬ್ಬರನ್ನೊಬ್ಬರು ಲವ್ ಮಾಡ್ತಿದ್ದಾರೆ ಅನ್ನೋದು ತಿಳಿಯುತ್ತೆ.
ನಿರೂಪಕಿ ಅಮೂಲ್ಯ ಬಳಿ ನಿಮ್ಮ ಫೋನ್ ನಲ್ಲಿ ನಿರಂಜನ್ ಹೆಸರು ಏನಂತ ಇದೆ ಎಂದು ಕೇಳಿದಾಗ, ನನ್ನ ಟಾಮ್ ಅಂತ ಅಮೂಲ್ಯ ಸೇವ್ ಮಾಡಿದ್ದಾರೆ. ನಿರಂಜನ್ ಕೂಡ ತೆಲುಗು ಸೀರಿಯಲ್ ಗಳಲ್ಲಿ ನಟಿಸಿದ್ದು, ನಿರಂಜನ್ ಗೆ ಕಾಲ್ ಮಾಡೋದಕ್ಕೆ ನಿರೂಪಕಿ ತಿಳಿಸಿದಾಗ, ಅಮೂಲ್ಯ ಕಾಲ್ ಮಾಡುತ್ತಿದ್ದಂತೆ, ಪ್ರೋಗ್ರಾಮ್ ನಲ್ಲಿದ್ದೇನೆ, ಫೋನ್ ಸ್ಪೀಕರ್ ನಲ್ಲಿದೆ ಎಂದಿದ್ದಾರೆ. ಆವಾಗಲೇ ಎಲ್ಲರಿಗೂ ಡೌಟ್ ಬಂದಿದೆ. ಬಳಿಕ ಇಬ್ಬರು ಹೇಗಿದ್ದೀರಾ? ಚೆನ್ನಾಗಿದ್ದೀರಾ ಎಂದು ಮಾತನಾಡಿದ್ದಾರೆ. ಆವಾಗ ನಿರೂಪಕಿ ಶ್ರೀಮುಖಿ ಬಳಿ ನಿರಂಜನ್ ಹೇಗಿದ್ದೀರಾ ಅಂತ ಕೇಳಿದಾಗ, ಶ್ರೀಮುಖಿ ನಾನು ಚೆನ್ನಾಗಿದ್ದೆ, ಆದರೆ ಈವಾಗ ಚೆನ್ನಾಗಿಲ್ಲ, ಇಷ್ಟು ದೊಡ್ಡ ನ್ಯೂಸ್ ನೀವು ಹೇಗೆ ಹೈಡ್ ಮಾಡಿ ಇಟ್ಟಿದ್ದೀರಿ ಇಷ್ಟು ದಿನ ಎಂದು ಕೇಳಿದ್ದಾರೆ. ಅದಕ್ಕೆ ಅಮೂಲ್ಯ ನಾಚಿಕೆಯಿಂದ ಮುಖ ಮುಚ್ಚಿಕೊಂಡರೆ, ನಿರಂಜನ್ ಜೋರಾಗಿ ನಕ್ಕಿದ್ದಾರೆ.
ನಿರೂಪಕಿ ನಿಮ್ಮ ನಗು ನೋಡಿದ್ರೆ, ನೀವು ಎಷ್ಟೊಂದು ನಾಚಿಕೆ ಪಡ್ತಿದ್ದೀರಿ, ಎಷ್ಟು ಬ್ಲಶ್ ಆಗ್ಲಿದ್ದೀರಿ ಅನ್ನೋದು ಕಾಣಿಸುತ್ತೆ ಅಂದಿದ್ದಾರೆ, ಜೊತೆಗೆ ನೀವು ನಿಮ್ಮ ಮದುವೆಗೆ ಕರೆಯದಿದ್ದರೂ ಪರವಾಗಿಲ್ಲ, ನಿಮ್ಮ ಫಸ್ಟ್ ನೈಟ್ ಎನ್ನುತ್ತಾ ಜೋಕ್ ಮಾಡಿದ್ದಾರೆ. ಇದಕ್ಕೆ ತುಂಬಾನೆ ಮುಗ್ಧವಾಗಿ ಉತ್ತರಿಸಿದ ನಿರಂಜನ್ ನೀವು ಯಾವ ಸೀರಿಯಲ್ ಸ್ಕ್ರಿಪ್ಟ್ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಕೇಳಿದ್ದಾರೆ. ನಿರೂಪಕಿ ನಮಗೆ ಬೇಕಾದ ಕಂಟೆಂಟ್ ನಮಗೆ ಸಿಕ್ಕಿದೆ ಎಂದಿದ್ದಾರೆ. ಇಬ್ಬರ ಮುದ್ದಾದ ನಗು, ಆಟಿಟ್ಯೂಡ್ ನೋಡುತ್ತಿದ್ದರೇನೆ ಇಬ್ಬರು ಲವ್ ಮಾಡುತ್ತಿದ್ದು, ಇಲ್ಲಿವರೆಗೂ ತಮ್ಮ ಲವ್ ಲೈಫನ್ನ ತುಂಬಾನೆ ಪರ್ಸನಲ್ ಆಗಿ ಇಟ್ಟಿದ್ದಾರೆ ಅನ್ನೋದು ತಿಳಿಯುತ್ತೆ.
ಕೆಲವು ಸಮಯದ ಹಿಂದೆ ನಿರಂಜನ್ ಹಾಗೂ ಅಮೂಲ್ಯ ಜೊತೆಯಾಗಿ ಏರ್ ಪೋರ್ಟ್ ನಲ್ಲಿ ಸೋನು ಸೂದ್ ಜೊತೆ ಕಾಣಿಸಿಕೊಂಡಿದ್ದರು. ಇಬ್ಬರನ್ನು ಜೊತೆಯಾಗಿ ನೋಡಿ ಅಭಿಮಾನಿಗಳು ಸಹ ಸಖತ್ ಖುಷಿ ಪಟ್ಟಿದ್ದರು. ಆದರೆ ಇಬ್ಬರು ಲವ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಮಾತ್ರ ತಿಳಿದಿರಲಿಲ್ಲ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಅಷ್ಟೇ ನಿರಂಜನ್ ಕೇವಲ ಅಮೂಲ್ಯ ಗೌಡ ಅವರನ್ನ ಮಾತ್ರ ಫಾಲೋ ಮಾಡ್ತಿದ್ದಾರೆ. ಹಾಗಾಗಿ ಇದೆಲ್ಲವನ್ನೂ ನೋಡಿದ್ರೆ ಇವರಿಬ್ಬರ ಪ್ರೀತಿ ಕನ್ ಫರ್ಮ್ ಆಗುತ್ತಿದೆ. ಅಮೂಲ್ಯ ಗೌಡ ಸದ್ಯ ತೆಲುಗಿನ ಒಂದು ಸೀರಿಯಲ್ ನಲ್ಲಿ ಹಾಗೂ ಕನ್ನಡದಲ್ಲಿ ಶ್ರೀ ಗೌರಿ ಸಿರೀಯಲ್ ನಲ್ಲಿ ನಟಿಸುತ್ತಿದ್ದರೆ, ನಿರಂಜನ್ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತೆಲುಗು ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ.