ಕಲಾಗಂಗೋತ್ರಿಯ ಸುವರ್ಣ ರಂಗಹಬ್ಬದಲ್ಲಿ ಮತ್ತೆ ಮುಖ್ಯಮಂತ್ರಿ ನಾಟಕ!

By Kannadaprabha NewsFirst Published Apr 2, 2021, 10:14 AM IST
Highlights

ಕಲಾಗಂಗೋತ್ರಿ ತಂಡಕ್ಕೆ 50 ವರ್ಷ ತುಂಬಿದ ಸವಿನೆನಪಿಗೆ ಸುವರ್ಣ ರಂಗಹಬ್ಬ ನಡೆಯಲಿದೆ. ಈ ಪ್ರಯುಕ್ತ ಏ.2ರಿಂದ ಏ.4ರವರೆಗೆ ಮೂರು ನಾಟಕಗಳ ಪ್ರದರ್ಶನವಿದೆ.

ಇಂದು (ಏ.2) ಮುಖ್ಯಮಂತ್ರಿ ಚಂದ್ರು ಅಭಿನಯದ ಮುಖ್ಯಮಂತ್ರಿ, ಏ.3ರಂದು ಜನಪ್ರಿಯ ಸಂಸಾರಿಕ ನಾಟಕ ಮೈಸೂರು ಮಲ್ಲಿಗೆ, ಏ.4ಕ್ಕೆ ಮುಖ್ಯಮಂತ್ರಿ ಚಂದ್ರು ಪ್ರಧಾನ ಪಾತ್ರದಲ್ಲಿ ಅಭಿನಯಿಸುವ ‘ಮತ್ತೆ ಮುಖ್ಯಮಂತ್ರಿ’ ನಾಟಕ ಪ್ರದರ್ಶನ ಕಾಣಲಿದೆ.

ಸೇತೂರಾಂಗೆ ಜೀವಮಾನ ರಂಗ ಗೌರವ ಪ್ರಶಸ್ತಿ 

ಈ ನಾಟಕೋತ್ಸವದ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಮುಖ್ಯಮಂತ್ರಿ ಚಂದ್ರು, ‘ಮುಖ್ಯಮಂತ್ರಿ ನಾಟಕ ಪ್ರದರ್ಶನ ಆರಂಭವಾದದ್ದು 1980ರಲ್ಲಿ. ಈವರೆಗೆ ಸುಮಾರು 14 ಜನ ಕರ್ನಾಟಕದ ಮುಖ್ಯಮಂತ್ರಿಗಳು ಈ ನಾಟಕ ವೀಕ್ಷಿಸಿದ್ದಾರೆ. ಎಲ್ಲಾ ಸಂದರ್ಭಕ್ಕೂ ಈ ನಾಟಕ ಕನೆಕ್ಟ್ ಆಗುತ್ತೆ. ಹೊಸ ನಾಟಕ ‘ಮತ್ತೆ ಮುಖ್ಯಮಂತ್ರಿ’ ನಾಟಕದಲ್ಲಿ ನಾವು ಕಾಣಬಯಸುವ ಉದಾತ್ತ ನಾಯಕ ಮುಖ್ಯಮಂತ್ರಿಯಾಗುವುದರ ಕಲ್ಪನೆಗೆ ನೀರೆರೆಯಲಾಗಿದೆ. ಹಿರಿಯ ನಾಟಕಕಾರ ಕೆವೈ ನಾರಾಯಣ ಸ್ವಾಮಿ ಈ ನಾಟಕದ ರಚನಕಾರರು’ ಎಂದರು.

ರಂಗಭೂಮಿಯೇ ವರವಾಯ್ತು ಅಂತಾರೆ `ವರಲಕ್ಷ್ಮೀ' ಮಾಲಿನಿ ಪಿ. ರಾವ್ 

‘ಭ್ರಷ್ಟಾಚಾರ, ಹಗೆತನ, ಸ್ವಾರ್ಥಗಳಿಂದ ತುಂಬಿದ ಇಂದಿನ ರಾಜಕಾರಣದಲ್ಲಿಸ್ವಲ್ಪ ಮಟ್ಟಿನ ಪಾಪಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ನಾಟಕ ರೂಪಿಸಲಾಗಿದೆ. ಪ್ರೇಕ್ಷಕರನ್ನು ಮನರಂಜಿಸುತ್ತಲೇ ಮನೋಚಿಂತನೆಗೆ ಹಚ್ಚುವ ಪ್ರಯತ್ನ ಇದಾಗಿದೆ’ ಎಂದೂ ಮುಖ್ಯಮಂತ್ರಿ ಚಂದ್ರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ರಂಗ ನಿರ್ದೇಶಕ ಡಾ. ಬಿ ವಿ ರಾಜಾರಾಂ ಉಪಸ್ಥಿತರಿದ್ದರು.

click me!