
ಕೊರೋನಾ, ಡಬ್ಬಿಂಗ್ ಮುಂತಾದ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿ ಸಾವಿರ ಕಂತುಗಳನ್ನು ಮೀರಿ ಮುನ್ನಡೆಯುತ್ತಿರುವುದರ ಸಂಭ್ರಮದಲ್ಲಿದೆ ಚಿತ್ರತಂಡ.
‘ಬ್ರಹ್ಮಗಂಟು’ ನಿರ್ದೇಶಕಿ ಶ್ರುತಿ ನಾಯ್ಡು ಸಂತೋಷದಲ್ಲಿದ್ದಾರೆ. ‘ಕೊರೋನಾ, ಡಬ್ಬಿಂಗ್ ಬಂದ ಆತಂಕದಲ್ಲಿ ಜನ ಮತ್ತೆ ನಮ್ಮ ಧಾರಾವಾಹಿಗೆ ಕನೆಕ್ಟ್ ಆಗುತ್ತಾರೋ ಇಲ್ಲವೋ ಎನ್ನುವ ಆತಂಕವಿತ್ತು. ಆದರೆ ಜನ ಗೀತಾಳನ್ನು ಪ್ರೀತಿಸಿದರು. ನಮ್ಮ ಪ್ರೇಕ್ಷಕರಿಂದ ನಾವು ಸಾವಿರ ಕಂತು ದಾಟಿ ಮುಂದೆ ಹೋಗುತ್ತಿದ್ದೇನೆ. ಜೀ ವಾಹಿನಿಯವರು ಸಪೋರ್ಟ್ ಮಾಡಿ ನಮ್ಮನ್ನು ಇಷ್ಟುದೂರ ಕರೆದುಕೊಂಡು ಬಂದಿದ್ದಾರೆ. ಎಲ್ಲರಿಗೂ ಆಭಾರಿ’ ಎನ್ನುತ್ತಾರೆ.
‘ಬ್ರಹ್ಮಗಂಟು’ ಶುರು ಮಾಡಿದ ಕ್ಷಣವನ್ನು ನೆನಪು ಮಾಡಿಕೊಂಡು, ‘ದೇಹ ಹೇಗಾದರೂ ಇರಲಿ ಮನಸ್ಸು ಮುಖ್ಯ ಅಂತ ಹೇಳುವ ಶಕ್ತಿ ಇತ್ತು ಈ ಧಾರಾವಾಹಿಯಲ್ಲಿ. ಆ ಮೆಸೇಜ್ ಕೊಡುವುದಕ್ಕೆ ಈ ಧಾರಾವಾಹಿ ಶುರು ಮಾಡಿದೆ. ಎಷ್ಟೋ ಹೆಣ್ಣು ಮಕ್ಕಳು ಒಬೆಸಿಟಿ, ಹಾರ್ಮೋನಲ್ ಸಮಸ್ಯೆಯಿಂದ ಖಿನ್ನತೆ ಅನುಭವಿಸುತ್ತಿರುತ್ತಾರೆ. ಅವರಿಗೆ ಈ ಧಾರಾವಾಹಿ ಸ್ಫೂರ್ತಿಯಾಗಿದೆ, ನಮ್ಮ ಪ್ರಯತ್ನ ಸಾರ್ಥಕವಾಗಿದೆ. ನಮಗೆ ನಾಗಾಭರಣ, ಭಾರತಿ, ಭರತ್ ಬೋಪಣ್ಣ, ಗಾಯತ್ರಿ ಪ್ರಭಾಕರ್ ಮುಂತಾದ ಒಳ್ಳೆಯ ಕಲಾವಿದರು ಸಿಕ್ಕಿದ್ದೇ ಈ ಧಾರಾವಾಹಿಯ ಗೆಲುವು’ ಎನ್ನುತ್ತಾರೆ ಶ್ರುತಿ ನಾಯ್ಡು.
'ಬ್ರಹ್ಮಗಂಟು' ಲಕ್ಕಿ 'ಬಿಗ್ ಬಾಸ್' ಸಂಜನಾ ಗುಡ್ ನ್ಯೂಸ್; ಈ ಫೋಟೋ ವೈರಲ್?
‘ಬ್ರಹ್ಮಗಂಟು’ ಧಾರಾವಾಹಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.