ಏಕಕಾಲಕ್ಕೆ ಆರು ಭಾಷೆಗಳಲ್ಲಿ Bigg Boss Show ಲಾಂಚ್‌ ಮಾಡಿದ Jio Star; ಯಾವಾಗ ಆರಂಭವಾಗುತ್ತೆ?

Published : Jul 21, 2026, 04:04 PM IST
Bigg Boss Logo

ಸಾರಾಂಶ

Bigg Boss Show: ಯಾವಾಗ ಬಿಗ್‌ ಬಾಸ್‌ ಶೋ ಶುರು ಆಗಲಿದೆ ಎಂಬ ಪ್ರಶ್ನೆ ಇದ್ದೇ. ಆಡಿಷನ್‌ ಶುರು ಆಗಿದ್ದರೂ ಕೂಡ, ಬಿಗ್‌ ಬಾಸ್‌ ಯಾವಾಗ ಆರಂಭ ಆಗಲಿದೆ ಎಂಬ ಡೌಟ್‌ ಇತ್ತು. ಇದಕ್ಕೀಗ ಜಿಯೋ ಸ್ಟಾರ್‌ ಪ್ರತಿಕ್ರಿಯೆ ನೀಡಿದೆ.

2026ರ ಸೆಪ್ಟೆಂಬರ್‌ನಿಂದ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಬಾಂಗ್ಲಾ ಭಾಷೆಗಳಲ್ಲಿ ಬಿಗ್ ಬಾಸ್‌ ಶೋ ಶುರು ಆಗಲಿದೆಯಂತೆ. ಜಿಯೋ ಸ್ಟಾರ್ ಟೆಲಿವಿಷನ್ ನೆಟ್‌ವರ್ಕ್, JioHotstar ಒಟಿಟಿಯಲ್ಲಿ ಪ್ರಸಾರ ಆಗಲಿವೆ.

ನಿರೂಪಣೆ ಮಾಡುವವರು ಯಾರು?

ಸಲ್ಮಾನ್ ಖಾನ್, ವಿಜಯ್ ಸೇತುಪತಿ, ನಾಗಾರ್ಜುನ, ಕಿಚ್ಚ ಸುದೀಪ್, ಮೋಹನ್‌ಲಾಲ್, ಸೌರವ್‌ ಗಂಗೂಲಿ ಅವರು ಈ ಶೋಗಳನ್ನು ನಿರೂಪಣೆ ಮಾಡಲಿದ್ದಾರೆ. ದಶಕಗಳಿಂದ ಬಂದ್‌ ಆಗಿದ್ದ ಬಾಂಗ್ಲಾ ಶೋ ಈಗ ಮತ್ತೆ ಶುರು ಆಗಲಿದೆ. ಸೌರವ್‌ ಗಂಗೂಲಿ ಅವರು ಈ ಶೋ ನಿರೂಪಣೆ ಮಾಡ್ತಾರಂತೆ.

ಜಿಯೋಸ್ಟಾರ್ 'ಇಂಡಿಯಾಸ್ ಬಿಗ್ ರಿಯಾಲಿಟಿ' (India's Bigg Reality) ಎಂಬ ವಿಶೇಷ ಕಾಫಿ ಟೇಬಲ್ ಪುಸ್ತಕವನ್ನು ರಿಲೀಸ್‌ ಮಾಡಿದೆ. ಬಿಗ್ ಬಾಸ್ ಶೋ ನಡೆದು ಬಂದ ಹಾದಿ, ಪ್ರಚಾರ ಪಡೆಯುವ ಬ್ರ್ಯಾಂಡ್‌ಗಳ ಮೇಲಿನ ಪರಿಣಾಮವನ್ನು ಇದರಲ್ಲಿ ದಾಖಲಿಸಲಾಗಿದೆ.

2025 ರಲ್ಲಿ ಬಿಗ್ ಬಾಸ್ 500 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಕರನ್ನು ರೀಚ್‌ ಆಗಿದೆ. ಒಟ್ಟು 438 ಬಿಲಿಯನ್ viewing minutes ಕೊಟ್ಟಿದೆ. ಒಟ್ಟೂ ಆರೂ ಭಾಷೆಗಳ ಸೀಸನ್‌ಗಳಲ್ಲಿ ವೀಕ್ಷಕರ engagement ವಾರ್ಷಿಕ ಶೇಕಡಾ 47 ರಷ್ಟು ಹೆಚ್ಚಿದೆ.

ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ವೀಕ್ಷಿಸುವ ಪ್ರತಿ 10 ಜನರಲ್ಲಿ 6 ವೀಕ್ಷಕರು 24x7 ಲೈವ್ ನೋಡುತ್ತಾರೆ. ಈ ವೇದಿಕೆಯಲ್ಲಿ 625ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ತಮ್ಮ ಹೊಸ ಉತ್ಪನ್ನಗಳನ್ನು ಪರಿಚಯ ಮಾಡಲಿವೆ.

ಜಿಯೋ ಸ್ಟಾರ್ ಟಿವಿ ಎಂಟರ್‌ಟೈನ್‌ಮೆಂಟ್ ಸೇಲ್ಸ್ ಮುಖ್ಯಸ್ಥ ಮಹೇಶ್‌ ಶೆಟ್ಟಿ ಮಾತನಾಡಿ, "ಕಳೆದ 2 ದಶಕಗಳಲ್ಲಿ ಬಿಗ್ ಬಾಸ್ ತನ್ನ ವ್ಯಾಪ್ತಿ, ಸಾಂಸ್ಕೃತಿಕ ಪ್ರಸ್ತುತತೆಯಲ್ಲಿ ಎತ್ತರಕ್ಕೇರಿದೆ. ಈ ಹಬ್ಬದ ಮಾಸದಲ್ಲಿ ಆರು ಭಾಷೆಗಳ ಸೀಸನ್‌ಗಳು ಒಟ್ಟಿಗೆ ಆರಂಭವಾಗುತ್ತಿದೆ. ಇಂಡಿಯಾಸ್ ಬಿಗ್ ರಿಯಾಲಿಟಿ ಪುಸ್ತಕವು ಈ ಪ್ರಯಾಣವನ್ನು ಡೇಟಾ, ಒಳನೋಟಗಳ ಮೂಲಕ ಕಟ್ಟಿಕೊಡುತ್ತದೆ" ಎಂದು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಈ ರಿಯಾಲಿಟಿ ಶೋ ಹಿಂದಿ 200 ಮಿಲಿಯನ್‌ಗಿಂತಲೂ ಹೆಚ್ಚು ಹಾಗೂ ದಕ್ಷಿಣ ಭಾರತದಲ್ಲಿ 300 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಕರನ್ನು ತಲುಪುತ್ತದೆ. ದಕ್ಷಿಣ ಭಾರತದ ಪ್ರತಿ 10 ಟಿವಿ ವೀಕ್ಷಕರಲ್ಲಿ 8 ಜನರು ಈ ಶೋ ವೀಕ್ಷಿಸುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜೈಲಲ್ಲಿರೋ ದರ್ಶನ್ ದಿಢೀರ್ ಭೇಟಿಯಾದ ರಕ್ಷಿತಾ ಪ್ರೇಮ್, ಸಾಥ್ ಕೊಟ್ಟ ವಿಜಯಲಕ್ಷ್ಮಿ; ಕಾರಣವೇನು?
ತುಳು ಚಿತ್ರರಂಗದಲ್ಲಿ ಇತಿಹಾಸ ಬರೆಯಲು ಸಜ್ಜಾದ 'ಬನ'; ಜಯಪ್ರಕಾಶ್ ಶೆಟ್ಟಿ ಅಭಿನಯದ ಸಿನಿಮಾ ಅ.23ಕ್ಕೆ ರಿಲೀಸ್!