‘ಮಾತನಾಡೋದು ಸುಲಭ, ಮಾಡೋದು ಕಷ್ಟ’: 'ರಾಧಾ ಮಿಸ್‌' ಶ್ವೇತಾ ಮಾತಿಗೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆ

Published : Aug 19, 2026, 04:55 PM IST
Shwetha Prasad

ಸಾರಾಂಶ

ಕಿರುತೆರೆಯ ಮೂಲಕ ಗುರುತಿಸಿಕೊಂಡು, ಮಾಡೆಲಿಂಗ್ ಹಾಗೂ ನಟನೆಯಿಂದಲೂ ಗಮನ ಸೆಳೆದಿರುವ ಶ್ವೇತಾ ಪ್ರಸಾದ್ (Shwetha Prasad) ಇದೀಗ ತಮ್ಮ ಒಂದು ಪೋಸ್ಟ್‌ನಿಂದ ಸದ್ದು ಮಾಡುತ್ತಿದ್ದಾರೆ.

ಕಿರುತೆರೆಯ ಮೂಲಕ ಗುರುತಿಸಿಕೊಂಡು, ಮಾಡೆಲಿಂಗ್ ಹಾಗೂ ನಟನೆಯಿಂದಲೂ ಗಮನ ಸೆಳೆದಿರುವ ಶ್ವೇತಾ ಪ್ರಸಾದ್ (Shwetha Prasad) ಇದೀಗ ತಮ್ಮ ಒಂದು ಪೋಸ್ಟ್‌ನಿಂದ ಸದ್ದು ಮಾಡುತ್ತಿದ್ದಾರೆ. ಗ್ಲಾಮರ್ ಲುಕ್ ಹಾಗೂ ಸಕಾರಾತ್ಮಕ ವಿಚಾರಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ, ಈ ಬಾರಿ ಹಂಚಿಕೊಂಡಿರುವ ಬರಹ ಮಾತ್ರ ಸಾಕಷ್ಟು ಗಂಭೀರ ಚರ್ಚೆಗೆ ಕಾರಣವಾಗಿದೆ.

ಯಾರನ್ನೂ ನೇರವಾಗಿ ಹೆಸರಿಸದೆ, ಸಮಾಜದಲ್ಲಿ ಸತ್ಯ, ನ್ಯಾಯ ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಮಾತನಾಡುವವರ ನಡೆ-ನುಡಿಗಳ ನಡುವಿನ ವ್ಯತ್ಯಾಸವನ್ನು ಶ್ವೇತಾ ಪ್ರಶ್ನಿಸಿದ್ದಾರೆ. ಅವರ ಬರಹದ ಪ್ರತಿಯೊಂದು ಸಾಲಿನಲ್ಲೂ ಅಸಮಾಧಾನ ಹಾಗೂ ಖಡಕ್ ಸಂದೇಶ ಕಾಣಿಸುತ್ತಿದ್ದು, ಈ ಪೋಸ್ಟ್ ಯಾರನ್ನು ಉದ್ದೇಶಿಸಿದೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.

ಸ್ಟೋರಿಗಷ್ಟೇ ಸೀಮಿತವಾಗದ ಶ್ವೇತಾ!

ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯವನ್ನು ಇನ್‌ಸ್ಟಾಗ್ರಾಂ ಸ್ಟೋರಿಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಶ್ವೇತಾ ಪ್ರಸಾದ್ ಈ ಬಾರಿ ತಮ್ಮ ಮಾತನ್ನು ನೇರವಾಗಿ ಇನ್‌ಸ್ಟಾ ಪೋಸ್ಟ್ ಮೂಲಕವೇ ಹಂಚಿಕೊಂಡಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಘಟನೆಯನ್ನು ಉಲ್ಲೇಖಿಸದೇ, ಸತ್ಯ, ನ್ಯಾಯ ಹಾಗೂ ಮಹಿಳೆಯರ ರಕ್ಷಣೆಯ ಬಗ್ಗೆ ಮಾತನಾಡುವವರನ್ನು ತಮ್ಮ ಬರಹದ ಮೂಲಕ ಪ್ರಶ್ನಿಸಿದ್ದಾರೆ. ಹೀಗಾಗಿ, ಈ ಪೋಸ್ಟ್‌ನ ಹಿಂದಿನ ಕಾರಣವೇನು ಎಂಬ ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

‘ಮಾತನಾಡೋದು ಸುಲಭ, ಮಾಡೋದು ಕಷ್ಟ!’

ಶ್ವೇತಾ ತಮ್ಮ ಪೋಸ್ಟ್‌ನಲ್ಲಿ, ಸತ್ಯದ ಪರವಾಗಿ ಮಾತನಾಡುವವರು ನಿಜವಾಗಿಯೂ ಅದರ ಪರ ನಿಂತಿದ್ದರೆ, ನ್ಯಾಯದ ಬಗ್ಗೆ ಧ್ವನಿ ಎತ್ತುವವರು ಅದಕ್ಕಾಗಿ ಹೋರಾಡಿದ್ದರೆ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುವವರು ನಿಜಕ್ಕೂ ಅವರ ಬೆಂಬಲಕ್ಕೆ ನಿಂತಿದ್ದರೆ, ಸಮಾಜ ಇಷ್ಟು ಸಮಸ್ಯೆಗಳಿಂದ ಕೂಡಿರುತ್ತಿರಲಿಲ್ಲ ಎಂಬ ಅರ್ಥದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತನಾಡುವುದು, ಭರವಸೆ ನೀಡುವುದು ಹಾಗೂ ದೊಡ್ಡ ದೊಡ್ಡ ತತ್ವಗಳನ್ನು ಹೇಳುವುದು ಸುಲಭ. ಆದರೆ ಅದೇ ಮಾತುಗಳನ್ನು ತಮ್ಮ ಜೀವನದಲ್ಲೂ ಪಾಲಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಅವರು ಸೂಚಿಸಿದ್ದಾರೆ.

ಕಷ್ಟ ಬಂದಾಗಲೇ ನಿಜವಾದ ವ್ಯಕ್ತಿತ್ವ ಗೊತ್ತಾಗುತ್ತೆ!

ಶ್ವೇತಾ ಅವರ ಬರಹದ ಪ್ರಮುಖ ಸಂದೇಶವೇನೆಂದರೆ, ವ್ಯಕ್ತಿಯ ನಿಜವಾದ ಸ್ವಭಾವ ಆತನ ಮಾತುಗಳಲ್ಲಿ ಅಲ್ಲ, ಕಠಿಣ ಪರಿಸ್ಥಿತಿಯಲ್ಲಿ ಆತ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಕಾಣಿಸುತ್ತದೆ ಎಂಬುದು. ‘ಜನ ಏನು ಹೇಳುತ್ತಾರೆ?’ ಎಂಬುದಕ್ಕಿಂತ ‘ಅವರು ನಿಜವಾಗಿ ಏನು ಮಾಡುತ್ತಾರೆ?’ ಎಂಬುದನ್ನೇ ಗಮನಿಸುವ ಹಂತಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ. ಈ ಸಾಲುಗಳೇ ಇದೀಗ ಅವರ ಪೋಸ್ಟ್‌ನ ಪ್ರಮುಖ ಚರ್ಚೆಯ ವಿಷಯವಾಗಿದೆ. ಯಾರನ್ನೂ ಹೆಸರಿಸದೆ ಇಷ್ಟು ನೇರವಾಗಿ ಬರೆದಿರುವುದರಿಂದ, ಶ್ವೇತಾ ಅವರ ಮನಸ್ಸಿನಲ್ಲಿರುವ ಆ ಘಟನೆ ಅಥವಾ ವಿಚಾರ ಯಾವುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಶ್ವೇತಾ ಮಾತಿಗೆ ಅಮೂಲ್ಯ ಸಾಥ್

ಶ್ವೇತಾ ಪ್ರಸಾದ್ ಅವರ ಈ ಪೋಸ್ಟ್‌ಗೆ ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಕೂಡ ಪ್ರತಿಕ್ರಿಯಿಸಿದ್ದಾರೆ. ಶ್ವೇತಾ ಅವರ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿರುವ ಅಮೂಲ್ಯ, ಕಾಮೆಂಟ್‌ನಲ್ಲಿ ‘True’ ಎಂದು ಬರೆದುಕೊಂಡಿದ್ದಾರೆ. ಇದೀಗ ಇಬ್ಬರು ನಟಿಯರ ಈ ಸಂಭಾಷಣೆ ನೆಟ್ಟಿಗರ ಗಮನ ಸೆಳೆದಿದೆ. ಶ್ವೇತಾ ಅವರ ಮಾತುಗಳನ್ನು ಕೆಲವರು ಕಟು ಸತ್ಯ ಎಂದು ಬಣ್ಣಿಸಿದರೆ, ಇನ್ನೂ ಕೆಲವರು ಇದು ಸಮಾಜದ ವಾಸ್ತವ ಪರಿಸ್ಥಿತಿಗೆ ಹಿಡಿದ ಕನ್ನಡಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶ್ವೇತಾ ಪ್ರಸಾದ್ ಈ ಪೋಸ್ಟ್‌ನಲ್ಲಿ ಯಾರನ್ನೂ ನೇರವಾಗಿ ಉಲ್ಲೇಖಿಸಿಲ್ಲ. ಹೀಗಾಗಿ, ಅವರು ಯಾವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ಬರಹ ಹಂಚಿಕೊಂಡಿದ್ದಾರೆ ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್ 'ಅಗ್ನಿ ಪರೀಕ್ಷೆ'ಯಲ್ಲಿ ಸೆಲೆಕ್ಟ್ ಆಗೋರು ಎಷ್ಟು? ವೇಟಿಂಗ್‌ ಲಿಸ್ಟ್‌ನಲ್ಲಿ ಎಷ್ಟು, ಮನೆ ಒಳಗೆ ಹೋಗೋರು ಎಷ್ಟು ಮಂದಿ?
ಬ್ರೇಕಪ್ ಬಳಿಕ ‘ಓದು-ಜಿಮ್’ ಎಂದ ಶ್ರವಣ್ ಬ್ರೋ; ಈಗ ತಿಂಗಳಿಗೆ ₹2-3 ಸಾವಿರ ಡಾಲರ್ ಯೂಟ್ಯೂಬ್ ಆದಾಯ