
ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ (Anchor Anushree) ಮದುವೆ ಸದ್ಯ ಸುದ್ದಿಯಲ್ಲಿರುವ ವಿಷ್ಯ. ಕಳೆದ ಎರಡು ದಿನಗಳಿಂದ ಅನುಶ್ರೀ ಮದುವೆ (Anushree wedding) ಆಗ್ತಿದ್ದಾರೆ, ಹುಡುಗ ಯಾರು? ಹುಡುಗ ಏನು ಮಾಡ್ತಾನೆ? ಮದುವೆ ಯಾವಾಗ ? ಎನ್ನುವ ಪ್ರಶ್ನೆಗಳು ಎದ್ದಿವೆ. ಅದಕ್ಕೆ ಮಾಧ್ಯಮಗಳು ಸಾಕಷ್ಟು ಉತ್ತರ ನೀಡುವ ಪ್ರಯತ್ನವನ್ನೂ ಮಾಡಿವೆ. ಆದ್ರೆ ಅನುಶ್ರೀಯಾಗ್ಲಿ, ಅವರ ಮನೆಯವರಾಗಲಿ ಈ ಬಗ್ಗೆ ಮೌನ ಮುರಿದಿಲ್ಲ. ಈಗ್ಲೂ ಅನುಶ್ರೀ ಮದುವೆ ಆಗೋದು ಹೌದಾ, ಇಲ್ವಾ ಎನ್ನುವುದಕ್ಕೆ ಸರಿಯಾದ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಒಂದಿಷ್ಟು ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಚೆಂದದ ಲೆಹಂಗಾ ಧರಿಸಿ ಅನುಶ್ರೀ ಇನ್ಸ್ಟಾಗ್ರಾಮ್ ನಲ್ಲಿ ನಾಲ್ಕೈದು ಫೋಟೋ ಹಾಕಿದ್ದಾರೆ. ಸುಂದರ ಕ್ಷಣಗಳನ್ನು ನೋಡಲು ಸುಂದರ ಮನಸ್ಸು ಬೇಕು ಅಂತ ಅನುಶ್ರೀ ಫೋಟೋಕ್ಕೆ ಶೀರ್ಷಿಕೆ ಹಾಕಿದ್ದಾರೆ. ಪರ್ಪಲ್ ಕಲರ್ ಹಾರ್ಟ್ ಎಮೋಜಿಯನ್ನು ಅವರು ಪೋಸ್ಟ್ ಮಾಡಿದ್ದಾರೆ.
ಅನುಶ್ರೀ ಈ ಫೋಟೋ ನೋಡಿದ ಫ್ಯಾನ್ಸ್ ಮದುವೆ ಬಗ್ಗೆಯೇ ಪ್ರಶ್ನೆ ಕೇಳ್ತಿದ್ದಾರೆ. ನೀವು ಮದುವೆ ಆಗ್ತಿರೋದು ಹೌದಾ? ಯಾವಾಗ ಮದುವೆ? ನಮ್ಮನ್ನು ಮದುವೆಗೆ ಕರಿತೀರಾ ಎಂಬ ಪ್ರಶ್ನೆಗಳೇ ಕಮೆಂಟ್ ಸೆಕ್ಷನ್ ನಲ್ಲಿ ತುಂಬಿ ಹೋಗಿವೆ. ಅನುಶ್ರೀ ಲುಕ್ ಇಷ್ಟಪಟ್ಟಿರುವ ಫ್ಯಾನ್ಸ್, ಈಗ ಮದುವೆ ಕಳೆ ಬಂತು, ಸದಾ ಖುಷಿಯಾಗಿರಿ, ಆದಷ್ಟು ಬೇಗ ಮದುವೆ ಆಗಿ ಎನ್ನುವ ಕಮೆಂಟ್ ಕೂಡ ಮಾಡಿದ್ದಾರೆ.
ಅನುಶ್ರೀ ಕನ್ನಡಿಗರ ಅಚ್ಚುಮೆಚ್ಚಿನ ನಿರೂಪಕಿ. ಅವರಿಗೆ ಈಗ 38 ವರ್ಷ ವಯಸ್ಸು. ಇನ್ನೂ ಅನುಶ್ರೀ ಮದುವೆ ಆಗಿಲ್ಲ ಅನ್ನೋದೇ ಫ್ಯಾನ್ಸ್ ಚಿಂತೆ. ಅನುಶ್ರೀ ಯಾವಾಗ ಮೀಡಿಯಾ ಮುಂದೆ ಬಂದ್ರೂ ಜನರು ಮದುವೆ ಬಗ್ಗೆಯೇ ಕೇಳ್ತಾರೆ. ಈ ವರ್ಷ ನಡೆದ ಕಾರ್ಯಕ್ರಮವೊಂದರಲ್ಲಿ ಅನುಶ್ರೀ, ಈ ವರ್ಷ ನಾನು ಮದುವೆ ಆಗೇ ಆಗ್ತೇನೆ ಅಂತ ಹೇಳಿಕೆ ನೀಡಿದ್ರು. ಅನುಶ್ರೀ ಹೀಗೆ ಹೇಳ್ತಿದ್ದಂತೆ ಹುಡುಗ ಯಾರು ಎನ್ನುವ ಪ್ರಶ್ನೆ ಶುರುವಾಗಿತ್ತು.
ಈಗ ಅನುಶ್ರೀಗೆ ಹುಡುಗ ಫಿಕ್ಸ್ ಆಗಿದ್ದಾನೆ ಎಂಬ ಸುದ್ದಿ ಜೋರು ಪಡೆದಿದೆ. ಆಗಸ್ಟ್ 28 ರಂದು ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ. ಅನುಶ್ರೀ, ರೋಶನ್ ಜೊತೆ ಮದುವೆ ಆಗ್ತಾರೆ ಎಂಬ ಸುದ್ದಿ ಇದೆ. ಅನುಶ್ರೀ ಹಾಗೂ ರೋಶನ್ ಒಟ್ಟಿಗೆ ಇರುವ ವಿಡಿಯೋ ಒಂದು ವೈರಲ್ ಆಗಿದೆ. ಕೊಡಗು ಮೂಲದ ರೋಶನ್ ಹಾಗೂ ಅನುಶ್ರೀ ಅಪ್ಪು ಅಭಿಮಾನಿಗಳು. ಅಪ್ಪುಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿಯೇ ಇವರಿಬ್ಬರ ಮೊದಲ ಭೇಟಿಯಾಗಿತ್ತು. ಎರಡು ಕುಟುಂಬದವರು ಒಪ್ಪಿ ಈಗ ಮದುವೆ ಮಾಡ್ತಿದ್ದಾರೆ. ಮದುವೆ ಬೆಂಗಳೂರಿನಲ್ಲೇ ನಡೆಯಲಿದೆ ಎನ್ನುವ ಸುದ್ದಿ ಕೂಡ ಇದೆ. ರೋಶನ್ ರಿಯಲ್ ಎಸ್ಟೇಟ್ ಉದ್ಯಮಿ. ರೋಶನ್, 300 ಕೋಟಿ ಒಡೆಯ ಎಂಬ ಸುದ್ದಿ ಕೂಡ ಇದೆ.
ಇಷ್ಟೆಲ್ಲದರ ಮಧ್ಯೆ ಅನುಶ್ರೀ ಮದುವೆ ಬಗ್ಗೆ ತುಟಿ ಬಿಚ್ಚಿಲ್ಲ. ಆದ್ರೆ ನಿನ್ನೆ ಡಾ. ರಾಜ್ ಕುಮಾರ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೆ ಅಂತ ಅದಕ್ಕೆ ಶೀರ್ಷಿಕೆ ಹಾಕಿದ್ದಾರೆ. ಆ ವಿಡಿಯೋದಲ್ಲಿ ರಾಜ್ ಕುಮಾರ್ ಸಿನಿಮಾ ಡೈಲಾಗ್ ನೀವು ಕೇಳ್ಬಹುದು. ಆಡ್ಕೊಳ್ಳೋರ ಬಾಯಿಗೆ ಬೀಗ ಹಾಕಲು ನಮ್ಮಿಂದ ಸಾಧ್ಯ ಇಲ್ಲ. ಕೆಟ್ಟವರಾದ್ರೂ ಆಡಿಕೊಳ್ತಾರೆ, ಒಳ್ಳೆಯವರಾದ್ರೂ ಆಡಿಕೊಳ್ತಾರೆ ಅಂತ ವಿಡಿಯೋದಲ್ಲಿ ಹೇಳಲಾಗಿದೆ. ಅನುಶ್ರೀ ಈ ವಿಡಿಯೋ ಯಾಕೆ ಪೋಸ್ಟ್ ಮಾಡಿದ್ರು? ಮದುವೆ ಸುದ್ದಿ ಸುಳ್ಳ? ಉತ್ತರ ಇನ್ನೂ ಸಿಗ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.