ಬಿಗ್ ಬಾಸ್ ಸ್ಪರ್ಧಿಗಳಿಗೆ ಪ್ರತಿ ದಿನ ಕೊಡ್ತಾರಾ ಸ್ಕ್ರಿಪ್ಟ್? ಕಂಟೆಸ್ಟೆಂಟ್ ವೈರಲ್ ಫೋಟೋ ಬಿಚ್ಚಿಟ್ಟ ಸತ್ಯ!

By Chethan Kumar  |  First Published Dec 4, 2024, 3:34 PM IST

ಬಿಗ್ ಬಾಸ್ ರಿಯಾಲಾಟಿ ಶೋ ಮನೆಯೊಳಗೆ ಸ್ಕ್ರಿಪ್ಟ್ ನೀಡಲಾಗುತ್ತೆ, ಈ ಸ್ಕ್ರಿಪ್ಟ್ ಪ್ರಕಾರವೇ ಮಾತನಾಡುತ್ತಾರೆ, ಜಗಳ ಮಾಡುತ್ತಾರೆ ಅನ್ನೋ ಆರೋಪವಿದೆ. ಇದೀಗ ಸ್ಪರ್ಧಿಗಳು ಸ್ಕ್ರಿಪ್ಟ್ ಹಿಡಿದಿರುವ ಫೋಟೋ ಒಂದು ವೈರಲ್ ಆಗಿದೆ. ಇದು ಭಾರಿಗೆ ಚರ್ಚೆಗೆ ಗ್ರಾಸವಾಗಿದೆ. ಇದರ ಅಸಲಿ ಸತ್ಯವೇನು? ಬಿಗ್ ಬಾಸ್ ಸ್ಪರ್ಧಿಗಳು ನಿಜಕ್ಕೂ ಸ್ಕ್ರಿಪ್ಟ್ ಪ್ರಕಾರವೇ ನಡೆದುಕೊಳ್ಳುತ್ತಾರಾ?
 


ಮುಂಬೈ(ಡಿ.04) ಬಿಗ್ ಬಾಸ್ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಇತರ ರಿಯಾಲಾಟಿ ಶೋಗಳಿಗೆ ಹೋಲಿಸಿದರೆ ಅಷ್ಟೇ ವಿವಾದಾತ್ಮಕ ಅನ್ನೋದು ಕೂಡ ಸತ್ಯ. ಕನ್ನಡ, ಹಿಂದಿ ಸೇರಿದಂತೆ ಯಾವುದೇ ಭಾಷೆಯ ಬಿಗ್ ಬಾಸ್ ಶೋ ವಿವಾದವಿಲ್ಲದೆ ಮುಗಿದಿಲ್ಲ. ಬಿಗ್ ಬಾಸ್ ಆರಂಭದಿಂದ ಇಲ್ಲೀವರೆಗೂ ಇದು ಸ್ಕ್ರಿಪ್ಟ್ ಶೋ ಅನ್ನೋ ಆರೋಪ ಪದೆ ಪದೇ ಕೇಳಿಬರುತ್ತದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಏನು ಮಾತನಾಡಬೇಕು? ಹೇಗಿರಬೇಕು ಎಲ್ಲವೂ ಮೊದಲೇ ನಿರ್ಧಾರವಾಗಿರುತ್ತದೆ ಅನ್ನೋ ಆರೋಪವಿದೆ. ಇದರ ಬೆನ್ನಲ್ಲೇ ಹಿಂದಿ ಬಿಗ್ ಬಾಸ್ 18ರ ಸ್ಪರ್ಧಿ ಈಶಾ ಸಿಂಗ್ ಕೈಯಲ್ಲಿ ಸ್ಕ್ರಿಪ್ಟ್ ಹಿಡಿದು ಓದುತ್ತಿರುವ ಫೋಟೋ ಒಂದು ವೈರಲ್ ಆಗಿದೆ. 

ಹಿಂದಿ ಬಿಗ್ ಬಾಸ್ ಶೋನಲ್ಲಿ ಭಾರಿ ಡ್ರಾಮ ನಡೆಯುತ್ತಿದೆ. ಗಾಸಿಪ್, ಸ್ಪರ್ಧಿಗಳ ನಡುವಿನ ಒಡಕು, ವೈಮನಸ್ಸು, ಕಿತ್ತಾಟ, ಕಿರುಚಾಟದ ಮೂಲಕ 18ನೇ ಆವೃತ್ತಿ ಬಿಗ್ ಬಾಸ್ ಅತೀ ಹೆಚ್ಚು ನಾಟಕೀಯ ವೇದಿಕೆಯಾಗಿ ಮಾರ್ಪಟ್ಟಿದೆ. ಇದರ ಬೆನ್ನಲ್ಲೇ ಈ ಫೋಟೋ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ಫೋಟೋ ಬೆನ್ನಲ್ಲೇ ಬಿಗ್ ಬಾಸ್ ಸ್ಕಿಪ್ಟೆಡ್ ಶೋ ಎಂದು ಮತ್ತಷ್ಟು ಮಂದಿ ವಾದ ಮಾಡಿದ್ದಾರೆ. ಅಸಲಿಗೆ ಈ ಫೋಟೋ ಹಿಂದಿನ ಕತೆ ಏನು? ಸ್ಪರ್ಧಿಗಳಿಗೆ ನಿಜಕ್ಕೂ ಸ್ಕ್ರಿಪ್ಟ್ ನೀಡ್ತಾರಾ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.

Latest Videos

ಕೋಪದ ಬಗ್ಗೆ ಕಿಚ್ಚ ಸುದೀಪ್ ಮಾತು ಕೇಳಿ, ಮತ್ತೆ ನೀವು ಕೋಪ ಮಾಡ್ಕೊಂಡ್ರೆ ಹೇಳಿ!

ಈ ಫೋಟೋದಲ್ಲಿ ಈಶಾ ಸಿಂಗ್ ಹಾಗೂ ಇತರ ಕೆಲ ಸ್ಪರ್ಧಿಗಳು ಸ್ಕ್ರಿಪ್ಟ್ ಹಿಡಿದಿದ್ದಾರೆ ನಿಜ. ಆದರೆ ಇದು ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡುವ ಸ್ಕ್ರಿಪ್ಟ್ ಅಲ್ಲ. ಹಿಂದಿ ಬಿಗ್ ಬಾಸ್ ಮನೆಯೊಳಗೆ ರ್ಯಾಪ್ ಸಿಂಗರ್ ಇಕ್ಕಾ ಸಿಂಗ್ ಹಾಗೂ ರಾಫ್ತಾರ್ ಎಂಟ್ರಿಕೊಟ್ಟಿದ್ದಾರೆ. ಹೀಗಾಗಿ ಬಿಗ್ ಬಾಸ್ ವಿಶೇ ಸೆಗ್ಮೆಂಟ್ ಆಯೋಜಿಸಿದೆ. ಇದು ರ್ಯಾಪ್ ಸಾಂಗ್ ಸೆಗ್ಮೆಂಟ್. ಇಲ್ಲಿ ಸ್ಪರ್ಧಿಗಳು ಪರಿಸ್ಥಿತಿ, ಮನೆಯೊಳಗಿನ ಸಂದರ್ಭ ಸೇರಿದಂತೆ ರ್ಯಾಪ್ ಹಾಡು ರಚಿಸಿ ಹಾಡುತ್ತಾರೆ. ಮುಖ್ಯವಾಗಿ ರ್ಯಾಪರ್ ಜೊತೆಗೆ ಸ್ಪರ್ಧಿಗಳು ಹಾಡಬೇಕು. 

undefined

ರ್ಯಾಪ್ ಚಾಲೆಂಜ್ ರೌಂಡ್‌ನಲ್ಲಿ ಪಾಲ್ಗೊಳ್ಳಲು ಈಶಾ ಸಿಂಗ್ ತಯಾರಿ ನಡೆಸಿದ್ದರೆ. ಈ ವೇಳೆ ರ್ಯಾಪ್ ಸಿಂಗರ್ ಜೊತೆ ಹಾಡಲು ತಯಾರಿ ಮಾಡಿಕೊಳ್ಳುತ್ತಿರುವ ರ್ಯಾಪ್ ಹಾಡಿನ ಲಿರಿಕ್ಸ್ ಇದು. ರ್ಯಾಪ್ ಹಾಡಿನ ಪದಗಳನ್ನು ನೆನೆಪಿನಲ್ಲಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಹೀಗಾಗಿ ಬರೆದು ಅಭ್ಯಾಸ ಮಾಡುತ್ತಿರುವ ಫೋಟೋ ಇದಾಗಿದೆ ಎಂದು ಖುದ್ದು ಈಶಾ ಸಿಂಗ್ ಹಾಗೂ ಬಿಗ್ ಬಾಸ್ ಸ್ಪಷ್ಟನೆ ನೀಡಿದೆ.

 

This one's for all the naysayers, Who are claiming that she was given the script! But to your dismay, NO! She sat down and prepared her part, Just like everyone else did. Just because hers turned out to be the best, you cannot take away her creativity!

But we get it! 🤣

And to… pic.twitter.com/ibl0rI9wx6

— Eisha Singh (@EishaSingh24)

 

ಈಶಾ ಸಿಂಗ್ ಮಾತ್ರವಲ್ಲ, ಬಿಗ್ ಬಾಸ್ ಇತರ ಸ್ಪರ್ಧಿಗಳಾದ ದಿಗ್ವಿಜಯ್ ಸಿಂಗ್ ರಾಥಿ, ರಜತ್ ದಲಾಲ್ ಸೇರಿದಂತೆ ಇತರ ಕೆಲ ಸ್ಪರ್ಧಿಗಳು ಕೂಡ ಸ್ಕ್ರಿಪ್ಟ್ ಕೈಯಲ್ಲಿ ಹಿಡಿದು ಅಭ್ಯಾಸ ಮಾಡುತ್ತಿರುವ ಫೋಟಗಳಿದೆ. ಈ ಫೋಟೋಗಳನ್ನು ಈಶಾ ಸಿಂಗ್ ಸೋಶಿಯ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಸ್ಪಷ್ಟನೆ ನೀಡಲಾಗಿದೆ. ಇದೇ ವೇಳೆ ಬಿಗ್ ಬಾಸ್ ಪ್ರತಿ ದಿನ ಆಟಕ್ಕಾಗಲಿ, ಯಾವುದೇ ಟಾಸ್ಕ್, ಅಥವಾ ಮನೆಯೊಳಗೆ ಸೃಷ್ಟಿಯಾಗುವ ಪರಿಸ್ಥಿತಿ, ಸಂದರ್ಭಕ್ಕೆ ಸ್ಕ್ರಿಪ್ಟ್ ಇರುವುದಿಲ್ಲ ಎಂದು ಈಶಾ ಸಿಂಗ್ ಸ್ಪಷ್ಟಪಡಿಸಿದ್ದಾರೆ. 

ಹಿಂದಿ ಬಿಗ್ ಬಾಸ್ ಶೋನಲ್ಲಿ ಸ್ಪರ್ಧೆ ತೀವ್ರಗೊಂಡಿದೆ. ಕಣದಲ್ಲಿರುವ ಹೇಮಲತಾ ಶರ್ಮಾ, ನ್ಯಾರ ಬ್ಯಾನರ್ಜಿ, ಮುಸ್ಕಾನ್ ಬಾಮ್ನೆ, ತಜಿಂದರ್ ಪಾಲ್ ಸಿಂಗ್ ಬಗ್ಗಾ, ರಜತ್ ದಲಾಲ್, ಚುಮ್ ದರಾಂಗ್, ಕರನ್ ವೀರ್ ಮೆಹ್ರ, ಶೆಹಜಾದ್ ಧಾಮಿ, ವಿವಿಯನ್ ಸೆನಾ, ಈಶಾ ಸಿಂಗ್, ಶ್ರುತಿಕಾ ರಾಜ್ ಅರ್ಜುನ್, ಚಹತ್ ಪಾಂಡೆ, ಶೀಲ್ಪ ಶಿರೋಡ್ಕರ್, ಗುಣರತ್ನ ಸದಾವೃತೆ, ಅವಿನಾಶ್ ಮಿಶ್ರ, ಆ್ಯಲೈಸ್ ಕೌಶಿಕ್, ಸರಾ ಅರ್ಫೀನ್ ಖಾನ್,  ಅರ್ಫೀನ್ ಖಾನ್ ಮನೆಯೊಳಗಿದ್ದಾರೆ. ಇನ್ನು ವೈಲ್ಡ್ ಕಾರ್ಡ್ ಮೂಲಕ ಕಾಶಿಶ್ ಕಪೂರ್, ದಿಗ್ವಿವಿಜಯ್ ರಾಥೆ, ಯಾಮಿನಿ ಮಲ್ಹೋತ್ರ, ಎಡಿನ್ ರೋಸ್, ಅದಿತಿ ಮಿಸ್ತ್ರಿ ಎಂಟ್ರಿಕೊಟ್ಟಿದ್ದಾರೆ.  
 

click me!