ನಂಬರ್ ಎಂದ್ರೆ ನಾನು, ನಾನೆಂದ್ರೆ ನಂಬರ್ ಎನ್ನುತ್ತಲೇ ಫೇಮಸ್ ಆಗಿರೋ ಬಿಗ್‌ಬಾಸ್ ಆರ್ಯವರ್ಧನ್ ಗುರೂಜಿ ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟುವ ಆಸೆ? ಅವರ ಬಾಯಲ್ಲೇ ಕೇಳಿ...
ಸಂಖ್ಯಾಶಾಸ್ತ್ರದ ಮೂಲಕ ನಂಬರ್‌ನಿಂದಲೇ ಭವಿಷ್ಯ ನುಡಿಯುವಲ್ಲಿ ಫೇಮಸ್ ಆದವರು ಆರ್ಯವರ್ಧನ್ ಗುರೂಜಿ. ಟಿವಿ ವೀಕ್ಷಕರಿಗೆ ಇನ್ನಷ್ಟು ಹತ್ತರ ಆದದ್ದು, ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಹಾಗೂ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಗಳ ಮೂಲಕ. ಅದರಲ್ಲಿಯೂ 9ನೇ ಸೀಸನ್‌ನಲ್ಲಿ ಸಕತ್ ಸದ್ದು ಮಾಡಿದ್ದರು. ‘ನಾನು ಅಂದ್ರೆ ನಂಬರ್.. ನಂಬರ್ ಅಂದ್ರೆ ನಾನು’ ಎನ್ನುತ್ತಲೇ ಆಡಿದ್ದರು. ಅಲ್ಲಿಯೂ ಪ್ರತಿ ಸಲ ನಂಬರ್ ನೋಡುತ್ತಲೇ ಭವಿಷ್ಯ ನುಡಿಯುತ್ತಿದ್ದರು. ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಸಹಜವಾಗಿ ಇವರ ವರ್ಚಸ್ಸು ಹೆಚ್ಚಾಗಿದೆ. ಸಂಖ್ಯಾಶಾಸ್ತ್ರ ಹೇಳಿ ಫೇಮಸ್ ಆಗಿರುವುದಕ್ಕಿಂತಲೂ ಹೆಚ್ಚಾಗಿ, ಬಿಗ್‌ಬಾಸ್ ಇವರಿಗೆ ಹೆಸರು ತಂದುಕೊಟ್ಟಿದೆ. ಬಿಗ್ ಮನೆಯಲ್ಲಿದ್ದಾಗಲೇ ಇವರು ತಮಗೆ ತೋಚಿದ್ದನ್ನೆಲ್ಲಾ ಹೇಳಿ, ಹೇಗೆ ಬೇಕೋ ಹಾಗೆ ಡೈಲಾಗ್ ಹೊಡೆದು ಎಡವಟ್ಟು ಮಾಡಿಕೊಳ್ಳುತ್ತಿರುವುದೂ ಇದೆ.
ನಂಬರ್ ಎಂದ್ರೆ ನಾನು, ನಾನೆಂದ್ರೆ ನಂಬರ್ ಎನ್ನುತ್ತಲೇ ಇರುವ ಆರ್ಯವರ್ಧನ್ ಗುರೂಜಿ ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟುವ ಆಸೆ ಇದೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಕೀರ್ತಿ ನಾರಾಯಣ ಶೋನಲ್ಲಿ ಅವರು ಈ ರಹಸ್ಯವನ್ನು ತೆರೆದಿಟ್ಟಿದ್ದಾರೆ. ಈ ಜನ್ಮದಲ್ಲಿ ಸಂಖ್ಯಾಶಾಸ್ತ್ರದಿಂದ ಫೇಮಸ್ ಆಗಿರುವ ಆರ್ಯವರ್ಧನ್ ಅವರಿಗೆ ಮುಂದಿನ ಜನ್ಮದಲ್ಲಿಯೂ ಸಂಖ್ಯಾಶಾಸ್ತ್ರಜ್ಞನಾಗಿ ಹುಟ್ಟುವ ಹಂಬಲವಂತೆ! ಕಲಾವಿದನಾಗುತ್ತೀರೋ ಇಲ್ಲವೇ ಇದೇ ಜನ್ಮದಲ್ಲಿ ಇರುವಂತೆಯೇ ಮುಂದುವರೆಯಲು ಇಷ್ಟಪಡುತ್ತೀರೋ ಎಂದು ಕೇಳಿದ ಪ್ರಶ್ನೆಗೆ ಅವರು, ಕಲಾವಿದನಿಗಿಂತಲೂ ಹೆಚ್ಚಾಗಿ ಸಂಖ್ಯಾಶಾಸ್ತ್ರಜ್ಞನಾಗಿಯೇ ಮುಂದುವರೆಯುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿ ತಮಗೆ ಕಲೆ ಎಂದರೆ ತುಂಬಾ ಇಷ್ಟ ಎಂದಿದ್ದರು ಇವರು. ಆದರೆ ಅದಕ್ಕಿಂತಲೂ ಈಗ ಜ್ಯೋತಿಷವೇ ಹೆಚ್ಚು ಇಷ್ಟ ಎನ್ನುವುದನ್ನು ತಿಳಿಸಿದ್ದಾರೆ.
ನನಗೆ ಮತ್ತು ಪತ್ನಿಗೆ ನಾವು ಸಾಯುವ ದಿನ ಗೊತ್ತು: ಆರ್ಯವರ್ಧನ್ ಗುರೂಜಿ ಶಾಕಿಂಗ್ ರಹಸ್ಯ!
ಇದಾಗಲೇ ಇವರು ಸಕತ್ ಸದ್ದು ಮಾಡುತ್ತಿದುದು, ತಾವು ಮತ್ತು ಪತ್ನಿ ಸಾಯುವ ದಿನ ಗೊತ್ತು ಎನ್ನುವ ಮೂಲಕ. ತಮಗೆ ಮತ್ತು ಪತ್ನಿಗೆ ಇಬ್ಬರಿಗೂ ಸಾಯುವ ದಿನ ಗೊತ್ತಿದೆಯೆಂದು ಹೇಳಿದ್ದಾರೆ. ಅದಕ್ಕೆ ಕೀರ್ತಿ ಅವರು, ಆ ದಿನವನ್ನು ಹೇಳಿ ಎಂದಾಗ, ಅದೆಲ್ಲಾ ಹೇಳಲು ಆಗುವುದಿಲ್ಲ ಎಂದಿದ್ದರು ಗುರೂಜಿ. ಪತ್ನಿಗೂ ಸಾಯುವ ದಿನವನ್ನು ಹೇಳಿದ್ದೇನೆ ಎಂದೂ ಹೇಳಿದ್ದರು. ಕೊನೇ ಪಕ್ಷ ಇನ್ನು ಎಷ್ಟು ವರ್ಷ ಅಂತಾದ್ರೂ ಹೇಳಿ ಎಂದಾಗ ಇಲ್ಲ, ಅದನ್ನೆಲ್ಲಾ ಹೇಳಲು ಆಗಲ್ಲ ಎಂದಿದ್ದರು.
ಇನ್ನು ಆರ್ಯವರ್ಧನ್ ಗುರೂಜಿ ಕುರಿತು ಹೇಳುವುದಾದರೆ, ಇವರು ಟಿವಿ ವೀಕ್ಷಕರಿಗೆ ಇನ್ನಷ್ಟು ಹತ್ತರ ಆದದ್ದು, ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಹಾಗೂ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಗಳ ಮೂಲಕ. ಅದರಲ್ಲಿಯೂ 9ನೇ ಸೀಸನ್‌ನಲ್ಲಿ ಸಕತ್ ಸದ್ದು ಮಾಡಿದ್ದರು. ‘ನಾನು ಅಂದ್ರೆ ನಂಬರ್.. ನಂಬರ್ ಅಂದ್ರೆ ನಾನು’ ಎನ್ನುತ್ತಲೇ ಆಡಿದ್ದರು. ಅಲ್ಲಿಯೂ ಪ್ರತಿ ಸಲ ನಂಬರ್ ನೋಡುತ್ತಲೇ ಭವಿಷ್ಯ ನುಡಿಯುತ್ತಿದ್ದರು. ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಸಹಜವಾಗಿ ಇವರ ವರ್ಚಸ್ಸು ಹೆಚ್ಚಾಗಿದೆ. ಸಂಖ್ಯಾಶಾಸ್ತ್ರ ಹೇಳಿ ಫೇಮಸ್ ಆಗಿರುವುದಕ್ಕಿಂತಲೂ ಹೆಚ್ಚಾಗಿ, ಬಿಗ್‌ಬಾಸ್ ಇವರಿಗೆ ಹೆಸರು ತಂದುಕೊಟ್ಟಿದೆ. ಬಿಗ್ ಮನೆಯಲ್ಲಿದ್ದಾಗಲೇ ಇವರು ತಮಗೆ ತೋಚಿದ್ದನ್ನೆಲ್ಲಾ ಹೇಳಿ, ಹೇಗೆ ಬೇಕೋ ಹಾಗೆ ಡೈಲಾಗ್ ಹೊಡೆದು ಎಡವಟ್ಟು ಮಾಡಿಕೊಳ್ಳುತ್ತಿರುವುದೂ ಇದೆ. ಇಂತಿಪ್ಪ ಗುರೂಜಿ, ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ, ಡಿಸ್ಕೋ ಡಾನ್ಸ್ ಸೇರಿದಂತೆ ಭರ್ಜರಿ ಸ್ಟೆಪ್ ಹಾಕಿ ಎಲ್ಲರನ್ನೂ ರಂಜಿಸಿದ್ದರು.
ಹೆಂಡತಿ- ಅಸ್ಟ್ರಾಲಾಜಿ ಇಬ್ರಲ್ಲಿ ಹೆಚ್ಚು ಪ್ರೀತಿಸೋದು ಯಾರನ್ನು ಅಂತ ಕೇಳಿದ್ರೆ ಹೀಗೆ ಹೇಳೋದಾ ಗುರೂಜಿ?