ಪ್ರೀತಿಯ ಬಗ್ಗೆ ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ಹೊಸ ಪಾಠ ಶುರುವಾಗಿದೆ. ಪ್ರೀತಿಸುವವರ ಮೇಲಿನ ಅನುಮಾನಕ್ಕೆ ಕೊಲೆಗಳು, ವಿಚ್ಛೇದನಗಳು ಹೆಚ್ಚಾಗ್ತಿರೋ ಟೈಮಲ್ಲಿ ನಿಜ ಪ್ರೀತಿ ಹೇಗಿರುತ್ತೆ ಅನ್ನೋದನ್ನು ಸಿದ್ಧಾಂತ್ ಹೇಳ್ತಿದ್ದಾನೆ.
'ಒಲವಿನ ನಿಲ್ದಾಣ' ಕಲರ್ಸ್ ಕನ್ನಡ ಚಾನಲ್‌ನಲ್ಲಿ ಪ್ರಸಾರವಾಗ್ತಿರೋ ಸೀರಿಯಲ್. ಶುರು ಶುರುವಿನಲ್ಲಿ ಈ ಸೀರಿಯಲ್ ಕೊಂಚ ಜನಪ್ರಿಯತೆ ಗಳಿಸಿತ್ತು. ಸಿದ್ಧಾಂತ್ ಅನ್ನೋ ಸಿಟಿಯ ಮಿಡಲ್ ಕ್ಲಾಸ್ ಹುಡುಗ, ತಾರಿಣಿ ಅನ್ನೋ ಮಲೆನಾಡ ಹುಡುಗಿ ಒಂದು ಬಸ್ ಸ್ಟೇಶನ್‌ನಲ್ಲಿ ಅಚಾನಕ್ ಆಗಿ ಮೀಟ್ ಆಗಿ ಮುಂದೆ ಲೈಫ್ ಪಾರ್ಟನರ್ಸ್ ಆಗೋ ಕತೆ ಈ ಸೀರಿಯಲ್ ನದು. ಬಹುಶಃ ಸಿದ್ಧಾಂತ್ ಮತ್ತು ತಾರಿಣಿ ನಡುವಿನ ನವಿರು ಪ್ರೇಮವನ್ನು ಬಯಸಿದ್ದ ಪ್ರೇಕ್ಷಕನಿಗೆ ಭಯಾನಕ ಡ್ರಾಮಾ ಯಾಕೋ ರುಚಿಸಲಿಲ್ಲ ಅನಿಸುತ್ತೆ. ಕ್ರಮೇಣ ಈ ಸೀರಿಯಲ್ ನೋಡುಗರ ಸಂಖ್ಯೆ ಇಳಿಯುತ್ತಾ ಬಂತು. ಇದೀಗ ಒಂದು ಇಂಟರೆಸ್ಟಿಂಗ್ ಟ್ವಿಸ್ಟ್ ಬಂದಿದೆ. ಅದರಲ್ಲಿ ತಾರಿಣಿ ಮದುವೆ ಆಗೋ ಹುಡುಗ ಧೀರಜ್‌ಗೆ ತಾರಿಣಿ ಬಗ್ಗೆ ಅನುಮಾನ ಬಂದಿದೆ. ಆತನಿಗೆ ಮೊದಲಿಂದಲೂ ತಾರಿಣಿ ಮತ್ತು ಸಿದ್ಧಾಂತ್ ಬಗ್ಗೆ ಅನುಮಾನ ಇದ್ದೇ ಇದೆ. ಇವರಿಬ್ಬರ ನಡುವೆ ಪ್ರೀತಿ ಇತ್ತು, ಈಗಲೂ ಇದೆ ಅನ್ನೋ ಅನುಮಾನ. ಯಾವಾಗ ದೇವಸ್ಥಾನದಲ್ಲಿ ತಾರಿಣಿ ಮತ್ತು ಸಿದ್ಧಾಂತ್ ಜೊತೆಗೇ ಕಾಣ್ತಾರೋ ಆಗ ಇವರಿಬ್ಬರೂ ಮೊದಲೇ ಮಾತಾಡಿ ಮೀಟ್ ಮಾಡೋಕೆ ಬಂದಿದ್ದಾರೆ ಅಂತ ಧೀರಜ್ ಅನುಮಾನ ಪಡ್ತಾನೆ. ಆದರೆ ನಿಜಕ್ಕೂ ಅವರ ಭೇಟಿ ಆಕಸ್ಮಿಕವೇ ಆಗಿರುತ್ತೆ.
ಆದರೆ ಧೀರಜ್ ಅನುಮಾನವನ್ನು ಸುಳ್ಳು ಮಾಡೋದು ರೋಹಿತ್. ಅವನಲ್ಲಿ ಕರೆಕ್ಟ್ ಟೈಮಿಗೆ ಬಂದಾಗ ಅವರಿಬ್ಬರ ಭೇಟಿ ಆಕಸ್ಮಿಕ ಅನ್ನೋದು ತಿಳಿಯುತ್ತೆ. ಆಗ ಸಿದ್ಧಾಂತ್ ತಾರಿಣಿ ನೆವದಲ್ಲಿ ಧೀರಜ್‌ಗೆ ಸಂಬಂಧಗಳ ಬಗ್ಗೆ, ಪ್ರೇಮದ ಬಗ್ಗೆ ಮಾತಾಡ್ತಾನೆ. 'ಪ್ರೀತಿ ಇರೋ ಕಡೆ ಅನುಮಾನಗಳು ಇರೋದಿಲ್ಲ. ನಂಬಿಕೆಯ ಬುನಾದಿ ಮೇಲೇ ಪ್ರೇಮ ನಿಂತಿರುತ್ತೆ' ಅನ್ನೋ ಸಿದ್ಧಾಂತ್ ಮಾತು ನಿಜ ಪ್ರೇಮ ಯಾವ್ದು, ದೈಹಿಕ ಆಕರ್ಷಣೆ, ಹುಸಿ ಪ್ರೇಮ ಯಾವುದು ಅನ್ನೋದನ್ನು ಕರೆಕ್ಟಾಗಿ ತಿಳಿಸಿ ಹೇಳೋ ಹಾಗಿದೆ. ಧೀರಜ್‌ಗೂ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳ್ತಾನೆ. 'ಮದ್ವೆ ಆಗೋ ಹುಡುಗಿ ಅಂತೀರ, ಇಷ್ಟಾದ್ರೂ ನಂಬಿಕೆ ಇರಬೇಕಲ್ವಾ ಧೀರಜ್.. ಒಬ್ರು ಮೇಲೆ ಮೇಲೆ ತಪ್ಪು ಹೊರಿಸೋ ಮೊದಲು ನಿಜ ಏನು ಅಂತ ತಿಳ್ಕೊಳ್ಳೋ ಮನಸ್ಥಿತಿ ಆದ್ರೂ ಬೇಡ್ವಾ? ತಾರಿಣಿ ಹಣ ಆಸ್ತಿ ಅಂತಸ್ತು ಇವುಗಳನ್ನೆಲ್ಲ ಬಯಸೋಳಲ್ಲ. ತನ್ನ ಜೊತೆ ಇದ್ದೋರಿಂದ ಸ್ವಲ್ಪ ಪ್ರೀತಿ, ಕಾಳಜಿ, ನಂಬಿಕೆ ಅಷ್ಟನ್ನು ಮಾತ್ರ ಬಯಸ್ತಾಳೆ. ಅದನ್ನು ಕೊಡ್ಬೇಕಾದ್ದು ಅವಳ ಗಂಡ ಆಗ್ತಿರೋ ನಿನ್ನ ಕರ್ತವ್ಯ ಅಲ್ವಾ ಧೀರಜ್' ಅನ್ನೋ ಸಿದ್ಧಾಂತ್ ಮಾತು ಆತ ತಾರಿಣಿಯನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾನೆ, ಆಕೆಯ ಮೇಲೆ ಆತನಿಗೆ ಅದೆಷ್ಟು ಪ್ರೀತಿ ಇದೆ ಅನ್ನೋದನ್ನು ತೋರಿಸುತ್ತೆ. ಇದು ಗಂಡು ಹೆಣ್ಣಿನ ಪ್ರೀತಿಯನ್ನೂ ಪ್ರತಿಧ್ವನಿಸುತ್ತೆ.
undefined
ಚಾರು ಮೇಡಂ, ನಿಮ್ಮ ಕೊರಳಿಗೆ ಇನ್ನೊಂದು ತಾಳಿ ಬೀಳೋದಿಕ್ಕೆ ಬಿಡಲ್ಲ: ರಾಮಾಚಾರಿ ಶಪಥ
'ಸಣ್ಣ ಅನುಮಾನ ಬಂತು ಅಂತ ದೇವಿಕಾ ಅವರನ್ನೂ ಕರ್ಕೊಂಡು ಫಾಲೋ ಮಾಡ್ಕೊಂಡು ಬಂದಿರೋದು ಬಹಳ ಚೀಪ್. ತಾರಿಣಿ ಕಂಡ್ರೆ ಪ್ರೀತಿ ಇದೆ ಅಂತೀಯಾ. ಪ್ರೀತಿ ಇರೋ ಕಡೆ ಅನುಮಾನ ಇರಲ್ಲ, ಅನುಮಾನ ಇರೋ ಕಡೆ ಪ್ರೀತಿಗೆ ಜಾಗ ಇರಲ್ಲ' ಅನ್ನೋ ಮೂಲಕ ನಿಜ ಪ್ರೇಮದ ಪಾಠ ಮಾಡ್ತಿದ್ದಾನೆ. ಈ ಮೂಲಕ ಧೀರಜ್‌ದು ಎಂಥಾ ಪೊಳ್ಳು ಪ್ರೀತಿ(Love) ಅನ್ನೋದನ್ನು ಸಿದ್ಧಾಂತ್ ಮಾತುಗಳು ಪ್ರತಿಬಿಂಬಿಸುತ್ತವೆ. 'ಒಂದು ಸಂಬಂಧ(Relation) ಶಾಶ್ವತವಾಗಿ ಉಳಿದುಕೊಳ್ಳೋದು ನಂಬಿಕೆಯಿಂದ' ಅನ್ನೋ ಸಿದ್ಧಾಂತ್ ಮಾತು ಕೇಳಿ ಆತನನ್ನು ಪ್ರೀತಿಯಿಂದ ನೋಡೋ ತಾರಿಣಿ ಅವರಿಬ್ಬರ ನಡುವಿನ ಬಂಧ ಯಾವ ಬಗೆಯದ್ದು ಅನ್ನೋದನ್ನು ಹೇಳದೇ ಹೇಳ್ತಿದ್ದಾಳೆ.
ಪ್ರೀತಿಯ ಹೆಸರಲ್ಲಿ ಕ್ರೌರ್ಯ, ಅನುಮಾನ, ಕೊಲೆ(Murder)ಯಂಥಾ ಹೇಯ ಕೃತ್ಯಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಸಿದ್ಧಾಂತ್ ಮಾತುಗಳು ಸಖತ್ ಟೈಮ್ಲೀ(Timely) ಆಗಿವೆ. ನಿಜ ಪ್ರೀತಿ ಹೇಗೆ ಕಲ್ಮಶರಹಿತ ಅನ್ನೋದನ್ನ ಆತ ಹೇಳ್ತಿದ್ದಾನೆ. ಇದನ್ನ ಕೇಳಿ ಆತನನ್ನು ಪ್ರೀತಿಯಿಂದ ನೋಡೊ ತಾರಿಣಿ ಮುಂದೆ ಆತನ ಲೈಫ್ ಪಾರ್ಟನರ್ ಆಗ್ತಾಳಾ ಅನ್ನೋದನ್ನು ಮುಂದಿನ ಸಂಚಿಕೆಗಳಲ್ಲಿ ನೋಡಬೇಕು.
Lakshana serial: ಭೂಪತಿ ಮನೆ ಏನು ಧರ್ಮಛತ್ರನಾ? ಶ್ವೇತಾ ಯಾಕಿನ್ನೂ ಆ ಮನೇಲಿದ್ದಾಳೆ?