ಸೀತಾರಾಮ ಸೀರಿಯಲ್​ ಸೀತಾ ರಾತ್ರಿ ಸ್ಕಿನ್​ ಕೇರ್​ ಹೇಗೆ ಮಾಡ್ತಾರೆ? ತ್ಚಚೆಗೆ ಟಿಪ್ಸ್​ ನೀಡಿದ ನಟಿ

By Suvarna News  |  First Published Oct 14, 2023, 1:33 PM IST

ದಿನವಿಡೀ ಮೇಕಪ್​ ಹಚ್ಚಿಕೊಂಡಾಗ ರಾತ್ರಿ ತ್ವಚೆಯ ರಕ್ಷಣೆ ಹೇಗೆ ಮಾಡಬೇಕು? ಸೀತಾರಾಮ ಸೀರಿಯಲ್​ ಸೀತಾ ಹೇಳಿದ್ದಾರೆ ಕೇಳಿ. 
 


ಹಲವರಿಗೆ ಮೇಕಪ್​ ಇಲ್ಲದೇ ಹೊರಗಡೆ ಹೋಗುವುದು ಅಸಾಧ್ಯ ಎನಿಸುವುದು ಉಂಟು. ಇನ್ನು ಕೆಲವರಿಗೆ ಮೇಕಪ್​ ಅನಿವಾರ್ಯ. ಸೆಲೆಬ್ರಿಟಿಗಳು ಅದರಲ್ಲಿಯೂ ಚಿತ್ರ ತಾರೆಯರಿಗೆ ಮೇಕಪ್​ ಅವರ ಜೀವನದ ಅವಿಭಾಜ್ಯ ಅಂಗ ಎನಿಸಿದೆ. ಮಳೆ, ಬಿಸಿಲು, ಚಳಿ ಏನೇ ಇದ್ದರೂ ಚಿತ್ರಕ್ಕಾಗಿ ಇಲ್ಲವೇ ಸೀರಿಯಲ್​ಗಾಗಿ ಮೇಕಪ್​ ಮಾಡುವ ಅನಿವಾರ್ಯತೆ ಇದ್ದೇ ಇದೆ. ಇನ್ನು ಕೆಲವರು ಸುಂದರವಾಗಿ ಕಾಣಲು ಇನ್ನಿಲ್ಲದಂತೆ ಮೇಕಪ್​ ಮಾಡಿಕೊಳ್ಳುತ್ತಾರೆ. ಮೇಕಪ್​ ಮಾಡುವ ಉದ್ದೇಶ ಏನೇ ಇದ್ದರೂ ರಾತ್ರಿಯ ವೇಳೆ ಸಂಪೂರ್ಣ ಮೇಕಪ್​ ತೆಗೆದು ಮಲಗುವುದು ಒಳ್ಳೆಯದು, ಇಲ್ಲದೇ ಹೋದರೆ ಚರ್ಮಕ್ಕೆ ಇದು ತುಂಬಾ ಹಾನಿ ನೀಡುತ್ತದೆ. ಬಳಸುವ ಮೇಕಪ್​ ಎಷ್ಟೇ ದುಬಾರಿಯಾಗಿದ್ದರೂ, ಕೆಮಿಕಲ್​ ಇಲ್ಲದೇ ಮೇಕಪ್​ ಸಾಮಗ್ರಿ ತಯಾರಿ ಮಾಡುವುದು ಕಷ್ಟವೇ. ಆದ್ದರಿಂದ ಸಂಪೂರ್ಣ ಮೇಕಪ್​ ತೆಗೆದು ಮಲಗಬೇಕು ಎನ್ನುವುದು ವೈದ್ಯರ ಅಭಿಮತ.

ಇದೀಗ ಸೀತಾರಾಮ ಖ್ಯಾತಿಯ ನಟಿ ಸೀತಾ ಅಲಿಯಾಸ್​ ವೈಷ್ಣವಿ ರಾತ್ರಿ ತಾವು ಸ್ಕಿನ್​ ಕೇರ್​ ಹೇಗೆ ಮಾಡುತ್ತೇವೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಪ್ರತಿ ದಿನ ಮೇಕಪ್​ ಹಾಕ್ಕೊದ್ರಿಂದ ತ್ವಚೆ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಆದ್ದರಿಂದ ರಾತ್ರಿಯ ವೇಳೆ ಹೇಗೆ ಮುಖವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವ ಬಗ್ಗೆ ಅವರು ಹೇಳಿದ್ದಾರೆ. ಶೂಟಿಂಗ್​ ಬಂದ ಮೇಲೆ ಮೇಕಪ್​ ಹಚ್ಚಿಕೊಂಡು ಮಲಗಬಾರ್ದು. ಮಸ್ಕಾರ, ಕಾಜಲ್​ ಎಲ್ಲವನ್ನೂ ತೆಗೆಯಿರಿ. ಮೇಕಪ್​ ರಿಮೂವರ್​ ಮಾಡಬೇಕು. ಸೀತಾರಾಮದ ಶೂಟಿಂಗ್​ ಮುಗಿಸಿಕೊಂಡು ಬಂದ ಮೇಲೆ ಈ ವಿಡಿಯೋ ಶೂಟ್​ ಮಾಡ್ತಾ ಇದ್ದೇನೆ. ಫೇಸ್​ ವಾಷ್​ ಮಾಡಬೇಕು. ಪ್ರತಿಸಲ ಮೇಕಪ್​ ತೆಗೆದು ಫ್ರೆಷ್​ ಆಗ್ತದೆ. ಡ್ರೈ ಆಗಲು ಟೈಂ ಕೊಡಬೇಕು. ಮಾಯ್ಚಿರೈಸರ್​ ಬಳಕೆ ಮಾಡಬೇಕು. ಅದನ್ನು ಅಪ್ಲೈ ಮಾಡಿಯಾದ ಮೇಲೆ ರೋಲ್​ ಬಳಸಿ ಮುಖವನ್ನು ರೋಲ್​ ಮಾಡಿಕೊಳ್ಳಬೇಕು. ಇದು ಮುಖಕ್ಕೆ ಚೆನ್ನಾಗಿ ಮಸಾಜ್​ ಮಾಡಲು ಅನುಕೂಲ ಆಗುತ್ತದೆ. ಇದರಿಂದ ತುಂಬಾ ರಿಲ್ಯಾಕ್ಸ್​ ಆಗುತ್ತದೆ. ಸ್ಕಿನ್​ ಚೆನ್ನಾಗಿರುತ್ತದೆ, ಬ್ಲಡ್​ ಸರ್ಕ್ಯೂಲೇಷನ್​ ಚೆನ್ನಾಗಿರುತ್ತದೆ. ನಿದ್ದೆನೂ ಚೆನ್ನಾಗಿ ಬರುತ್ತದೆ ಎಂದಿದ್ದಾರೆ ವೈಷ್ಣವಿ.

Tap to resize

Latest Videos

'ಸೀತಾರಾಮ' ಸೀರಿಯಲ್​ ಸೀತಾ ದಿನವಿಡೀ ಏನ್​ ತಿಂತಾರೆ? ಸೆಟ್​ನಲ್ಲಿ ರಾಮ್​ ತಿನ್ನೋದೇನು? ವಿಡಿಯೋದಲ್ಲಿವೆ ಡಿಟೇಲ್ಸ್​

ಇದಾದ ಬಳಿಕ ನಟಿ  ಎರಡು ಫೇಷಿಯಲ್​ ಯೋಗದ ಬಗ್ಗೆ ಹೇಳಿದ್ದಾರೆ. ಏನೇ ಕೆಲಸ ಮಾಡಬೇಕಾದರೂ ಹುಬ್ಬುಗಳ ನಡುವೆ ಟೆನ್ಷನ್​ ಜಾಸ್ತಿ ಇರುತ್ತದೆ. ಆದ್ದರಿಂದ ಫೇಷಿಯಲ್​ ಮಸಾಜ್​ ಮಾಡಿದರೆ ಟೆನ್ಷನ್​ ರಿಲ್ಯಾಕ್ಸ್​ ಆಗುತ್ತದೆ ಎಂದು ಅದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕೆನ್ನೆಗೂ ಮಸಾಜ್​ ಮಾಡುವುದನ್ನು ಹೇಳಿದ್ದಾರೆ. ಮೇಕಪ್​ ಜಾಸ್ತಿ ಮಾಡುವ ಕಾರಣ ಸ್ಕಿನ್​ ಡ್ರೈ ಆಗುವ ಕಾರಣ ತಾವು ಮಾಯ್ಚಿರೈಸರ್​ ಹಾಕುವುದಾಗಿ ಹೇಳಿದ್ದಾರೆ. ಹೆಚ್ಚು ಉಳಿದರೆ, ಕೈಗೆಲ್ಲಾ ಹಚ್ಚಿದ್ದಾರೆ. ಫೇಸ್​ವಾಷ್​ ಮಾಡಿದಾಗ ತಮಗೆ ಸನ್​ಸ್ಕ್ರೀನ್​ ಹಚ್ಚುವ ಅಭ್ಯಾಸ ಎಂದಿದ್ದಾರೆ. 

 

 

ಇದಾದ ಬಳಿಕ ಲಿಪ್​ ಬಾಮ್​ ಹಚ್ಚಿಕೊಳ್ಳುತ್ತಾರೆ. ನಿಮ್ಮ ಸ್ಕಿನ್​ಗೆ ಯಾವುದು ಸೂಟ್​ ಆಗುತ್ತದೆ ಅದನ್ನು ಬಳಸಿ. ಮಸ್ಕಾರ ಮತ್ತು ಐಬ್ರೋಗಳಿಗೆ ಹಚ್ಚುವ ಕಾಡಿಗೆಯಿಂದ ಎಫೆಕ್ಟ್​ ಆಗಬಾರದು ಎಂದು ಬಾಡಿ ಬಟರ್​ ಅಥವಾ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಕಣ್ಣಿಗೆ ಹಾಕಬೇಕು ಎಂದು ವೈಷ್ಣವಿ ಸಲಹೆ ಕೊಟ್ಟಿದ್ದಾರೆ. ಇದಕ್ಕೆ ಹಲವಾರು ಮಂದಿ ಕಮೆಂಟ್​ ಮಾಡಿದ್ದು, ಕೆಲವರು ರಾತ್ರಿಯ ವೇಳೆ ಸನ್​ಸ್ಕ್ರೀನ್​ ಹಚ್ಚಬೇಡಿ ಎಂದು ನಟಿಗೆ ಸಲಹೆ ಕೊಟ್ಟಿದ್ದಾರೆ. ಹಲವಾರು ಮಂದಿ ಸೀತಾ ರಾಮ ಸೀರಿಯಲ್​ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅದರಲ್ಲಿ ಸೀತಾಳ ಮಗಳಾಗಿರುವ ಸಿಹಿಯ ನಟನೆಗೆ ಭೇಷ್​ ಎನ್ನುತ್ತಿದ್ದಾರೆ. 

ಹೊಟ್ಟೆ ಕರಗಿಸುವ ಮ್ಯಾಜಿಕ್​! ಎರಡು ಗಂಟೆಯ ಸೀಕ್ರೆಟ್​ ಹೇಳಿದ ಜಗ್ಗೇಶ್ ಹೆಂಡತಿ ಪರಿಮಳ

click me!