ಅರುಣ್ ಸಾಗರ್ (Arun Sagar) ಅವರದು ಲವ್ ಕಂ ಅರೇಂಜ್ಡ್ ಮ್ಯಾರೇಜ್. ತನ್ನ ಹುಡುಗಿ ಉದ್ದ ಜಡೆ ಕಂಡೇ ಅವ್ರು ಫಿದಾ ಆಗಿದ್ದಂತೆ. ಆದರೆ ಈಗ ಕಥೆನೇ ಚೇಂಜ್ ಆಗಿದೆ.
ಅರುಣ್ ಸಾಗರ್ (Arun Sagar) ಅಂದರೆ ಒಂದು ಕಡೆ ಅವರ ಕಾಮಿಡಿ, ವಿಚಿತ್ರ ಅನಿಸೋ ಕೆಲವು ಪಾತ್ರ ನೆನಪಾಗುತ್ತೆ. ಆಮೇಲೆ ಅವರ ಅದ್ಭುತ ಆರ್ಟ್ ವರ್ಕ್‌ಗಳು, ಸೆಟ್‌ಗಳು ಕಣ್ಮುಂದೆ ಬರುತ್ತವೆ. ಇದಲ್ಲದೇ ಇತ್ತೀಚೆಗೆ ಅವರ ಮಗಳ ಅದಿತಿ ಕನ್ನಡ ಸಿನಿಮಾ ರಂಗದಲ್ಲಿ ಸಖತ್ ಫೇಮಸ್ ಆದ್ರು. ಅವರ ಕಂಠ, ಪ್ರತಿಭೆ ಎಲ್ಲರ ಗಮನ ಸೆಳೆಯಿತು. ಆದರೆ ಅರುಣ್ ಅವರ ಪತ್ನಿ ಮೀರಾ ಅವರ ಬಗ್ಗೆ ತಿಳಿದವರು ಕಡಿಮೆ. ಅರುಣ್ ಸಾಗರ್ ಸೋಷಿಯಲ್ ಲೈಫ್‌ನಲ್ಲಿ ಎಷ್ಟು ಮಿಂಗಲ್ ಆಗ್ತಾರೋ ಮೀರಾ ಕೊಂಚ ಇಂಥದ್ರಲ್ಲೆಲ್ಲ ಹಿಂದೆ. ತಾನಾಯ್ತು, ತನ್ನ ಬಣ್ಣಗಳ ಜಗತ್ತಾಯ್ತು ಅಂತ ಇದ್ದು ಬಿಡ್ತಾರೆ. ಅಂದಹಾಗೆ ಮೀರಾ ಅಂತಾರಾಷ್ಟ್ರೀಯ ಮಟ್ಟದ ಕುಂಚ ಕಲಾವಿದೆ. ಇವರ ಮನೆಯೆ ಒಂಥರ ಕಲಾಶಾಲೆ ಇದ್ದ ಹಾಗಿದೆ. ಇವರ ಮಾಹಿತಿ ಕಲೆ ಹಾಕುತ್ತಾ ಹೋದಾಗ ತಿಳಿಯುವ ಇನ್ನೊಂದು ಅಂಶ ಅಂದರೆ ಮೀರಾ ಅವರ ಫ್ಯಾಮಿಲಿಯೇ ಕಲಾವಿದರ ಫ್ಯಾಮಿಲಿ ಅಂತ. ಬುದ್ಧಿ ಬಂದಾಗಿನಿಂದ ಮೀರಾ ಅವರಿಗೆ ಚಿತ್ರಕಲೆಯಲ್ಲಿ ಆಸಕ್ತಿ. ಐದನೇ ಕ್ಲಾಸ್ನಲ್ಲಿರುವಾಗಲೇ ಕೊಬ್ಬರಿಯಲ್ಲಿ ಆರ್ಟ್ ಮಾಡುತ್ತಿದ್ದರು.ಮುಂದೆ ಚಿತ್ರಕಲಾ ಪರಿಷತ್ನಲ್ಲಿ ಪದವಿ ಪಡೆದರು.
ಅಂದಹಾಗೆ ಅರುಣ್ ಸಾಗರ್ ಫಿದಾ ಆಗಿದ್ದು ಒಂದಾನೊಂದು ಕಾಲದಲ್ಲಿದ್ದ ಇವರ ಉದ್ದ ಜಡೆಗೆ. ಮೀರಾ ಚಿತ್ರಕಲಾ ಪರಿಷತ್‌ನಿಂದ ರಂಗಾಯಣಕ್ಕೆ ಹೋಗಿದ್ದಾಗ ಅರುಣ್ ಇವರನ್ನು ಮೊದಲ ಸಲ ನೋಡಿದ್ದು. ಮೊದಲ ನೋಟದಲ್ಲೇ ಪ್ರೀತಿ ಹಕ್ಕಿ ಗರಿಬಿಚ್ಚಿತ್ತು. ಈ ಉದ್ದ ಜಡೆಯ ಹುಡುಗಿ ಬದುಕಿನುದ್ದ ಜೊತೆಯಾದರೆ ಎಷ್ಟು ಚಂದ ಅಂತ ಅರುಣ್ ಅವರಿಗೆ ಅನಿಸಿ ಬಿಟ್ಟಿತ್ತು. ಇಷ್ಟೆಲ್ಲ ಆದ್ಮೇಲೆ ಪರಿಚಯವಾಗಿದ್ದು. ಇವರಿಬ್ಬರ ನಡುವೆ ಗೆಳೆತನ ಬೆಳೆಯಿತು. ಮೀರಾ ಕರ್ನಾಟಕ ಶಾಸ್ತ್ರೀಯ ಸಂಗೀತವೇ ಗ್ರೇಟ್ ಅಂದುಕೊಳ್ಳುತ್ತಿದ್ದಾಗ ಹಿಂದೂಸ್ತಾನಿ ಸಂಗೀತದ ಪರಿಚಯ ಮಾಡಿಸಿದ್ದು ಅರುಣ್. ಇದೆಲ್ಲ ಪಕ್ಕಕ್ಕಿಟ್ಟು ನೋಡಿದ್ರೆ ಕಾಮನ್ ಅನಿಸುವ ಸಾಕಷ್ಟು ವಿಚಾರಗಳು ಇವರ ಬಳಿ ಇದ್ದವು. ಸಣ್ಣಪುಟ್ಟ ಗೊಂದಲ, ಮಾತುಕತೆ ಎಲ್ಲ ಮುಗಿದು ಒಂದೊಳ್ಳೆ ದಿನ 10*12 ಪುಟಾಣಿ ಮನೆಯಲ್ಲಿ ಇವರಿಬ್ಬರ ದಾಂಪತ್ಯ ಶುರುವಾಯ್ತು.
ಹಾಟ್ ಲುಕ್‌ನಲ್ಲಿ KGF ಬೆಡಗಿ ಮೌನಿ ರಾಯ್: ಅಯ್ಯಯ್ಯೋ ನಿಮ್ಮ ಡ್ರೆಸ್ ಜಾರಿ ಬೀಳುತ್ತೆ ಎಂದ ಫ್ಯಾನ್ಸ್!
ಈಗ ಈ ದಾಂಪತ್ಯ ಬಹುದೂರ ಬಂದಿದೆ. ಮಗ ಅಂತಾರಾಷ್ಟ್ರೀಯ ಮಟ್ಟದ ಮುವಾಯಿ ಥಾಯ್ ಛಾಂಪಿಯನ್. ಮಗಳು ಅದ್ಭುತ ಕಂಠದ ಗಾಯಕಿ, ಕಲಾವಿದೆ.
ಈ ದಂಪತಿ ಜೀ ಕನ್ನಡದಲ್ಲಿ ಮಾಸ್ಟರ್ ಆನಂದ ನಡೆಸಿಕೊಡೋ ಕುಕ್ಕರಿ ಶೋಗೆ ಬಂದಿದ್ದರು. ಅಲ್ಲಿ ಜುಮ್ಮನಕಾಯಿ ಸಾಂಬಾರ್ ಮಾಡಿದ್ದರು. ಇದು ಡೈಜೆಶನ್‌ಗೆ ತುಂಬ ಹೆಲ್ಪ್ ಮಾಡುತ್ತಂತೆ. ಅದನ್ನು ಮಾಡೋದು ಹೇಗೆ ಅಂತ ಆ ಶೋ ನೋಡಿದ್ರೆ ನಿಮಗೆ ಗೊತ್ತಾಗುತ್ತೆ. ಈ ಶೋನಲ್ಲಿ ಅರುಣ್ ಸಾಗರ್ ತಮ್ಮ ಲವ್ ಸ್ಟೋರಿ ತೆರೆದಿಟ್ಟರು. ಆದರೆ ಈಗ ಮೀರಾ ಕೂದಲು ಫುಲ್ ಶಾರ್ಟ್ ಆಗಿದೆ. 'ಈಗ ಆ ಉದ್ದ ಜಡೆ ಹೊರಟು ಹೋಗಿದೆ. ಏನ್ ಮಾಡ್ತಾರೋ ಗೊತ್ತಿಲ್ಲ' ಅಂತ ಮೀರಾ, ಅರುಣ್ ಅವರ ಕಾಲೆಳೆತಿದ್ದ ಹಾಗೆ ಅರುಣ್ ಗಹಗಹಿಸಿ ನಕ್ಕರು. ಆ ಕಡೆ ಮಾಸ್ಟರ್ ಆನಂದ್ (Master Anand) ಅವರೂ ಈ ಲವ್ಲೀ ದಂಪತಿ ಕಾಲೆಳೆಯುತ್ತಾ ಅಡುಗೆ ಟೇಸ್ಟ್ ಮಾಡ್ತಾ ಸಖತ್ ಎಂಟರ್‌ಟೈನ್ ಮಾಡಿದ್ರು. ಅರುಣ್ ಸಾಗರ್ ಪತ್ನಿ ಬಗ್ಗೆ ಹೆಚ್ಚಾಗಿ ತಿಳಿಯದ ಜನ ಇವರ ಈ ಶೋ ನೋಡಿ ಸಖತ್ ಖುಷಿಯಾಗಿದ್ದಾರೆ. ಅಷ್ಟಕ್ಕೂ ಈ ಕುಂಚ ಕಲಾವಿದೆ ಜುಮ್ಮನಕಾಯಿ ಸಾಂಬಾರ್ ಹೇಗ್ ಮಾಡಿದ್ರು, ಜುಮ್ಮನಕಾಯಿ ಅಂದರೆ ಏನು, ಆ ಸಾಂಬಾರ್ ನಾವೂ ಮಾಡಬಹುದಾ ಅನ್ನೋ ಡೌಟ್ ಇದ್ರೆ ಜೀ ಕನ್ನಡದ 'ಕಪಲ್ ಕಿಚನ್' (couple kitchen) ಕಾರ್ಯಕ್ರಮ ನೋಡಿ, ಜುಮ್ಮನ ಕಾಯಿ ಸಾಂಬಾರ್ ಟ್ರೈ ಮಾಡಿ.
ತೊಡೆ ಕಾಣಿಸೋ ಸೀಳು ಬಟ್ಟೆ ಧರಿಸಿಕೊಂಡು, ಕೈಯಿಂದ ತೊಡೆ ಮುಚ್ಕೊಂಡ ಜಾನ್ವಿ ಕಪೂರ್!