18ನೇ ಮದುವೆಗೆ ರೆಡಿಯಾದ ಖ್ಯಾತ ನಟ ನಕುಲ್! ಏನಿದು ಸುದ್ದಿ?

By Suvarna News  |  First Published Jul 7, 2023, 6:10 PM IST

ಹಲವು ಹಿಂದಿ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿರುವ ನಟ ನಕುಲ್​ ಮೆಹ್ತಾ 18ನೇ ಬಾರಿಗೆ  ಮದುಮಗನಾಗಲು ರೆಡಿಯಾಗಿದ್ದಾರೆ. ಅವರು ಹೇಳಿದ್ದೇನು?
 


 ಸಿನಿಮಾ ನಟ ನಟಿಯರು ಮದ್ವೆಯಾಗೋದು, ವಿಚ್ಛೇದನ ನೀಡೋದು, ಲಿವ್​ ಇನ್​ನಲ್ಲಿ ಇರೋದು, 2ನೇ 3ನೇ ಪತ್ನಿಯಾಗಿ ಹೋಗೋದು, ಡಿವೋರ್ಸ್​ ಕೊಡದೇ ಮತ್ತೊಂದು ಸಂಬಂಧ ಹೊಂದುವುದು, ಮದ್ವೆಯಾಗಿರುವಾಗ್ಲೇ ಅಕ್ರಮ ಸಂಬಂಧದಲ್ಲಿ ಇರುವುದು... ಇವೆಲ್ಲಾ ಮಾಮೂಲೇ ಬಿಡಿ. ಹಿಂದೊಮ್ಮೆ ವಿದೇಶದ ಪರಿಕಲ್ಪನೆ ಭಾರತಕ್ಕೆ ಕಾಲಿಟ್ಟು ದಶಕಗಳೇ ಕಳೆದುಹೋಗಿವೆ. ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವ ಮಟ್ಟಿಗೆ ದಾಂಪತ್ಯ ಜೀವನ ಬಂದು ನಿಂತಿದ್ದು, ಇದಕ್ಕೆ ಚಿತ್ರತಾರೆಯರ ಬದುಕು ತಾಜಾ  ಉದಾಹರಣೆಯಂತಿದೆ. ಚಿತ್ರ ನಟ ನಟಿಯರನ್ನೇ ದೇವರು ಎಂದು ನಂಬಿ, ಅವರು ಹೇಳಿದ್ದನ್ನೇ ಪ್ರಸಾದ ಎಂದು ಸ್ವೀಕರಿಸುವ ಒಂದು ವರ್ಗವೇ ಇರುವ ಕಾರಣ, ಇಂಥ ವಿಷಯಗಳಲ್ಲಿಯೂ ಸಿನಿಮಾ ತಾರೆಯರನ್ನು ಫಾಲೋ ಮಾಡುವುದೂ ಇದ್ದೇ ಇದೆ. ಅದೇನೆ ಇರಲಿ. ಇಲ್ಲಿ ಹೇಳುತ್ತಿರುವುದು ಕಿರುತೆರೆಯ ಖ್ಯಾತ ನಟ ನಕುಲ್ ಮೆಹ್ತಾ ಕುರಿತು!

ಹೌದು. ನಟ ನಕುಲ್​ ಮೆಹ್ತಾ ಹಿಂದಿ ಧಾರಾವಾಹಿ ಪ್ರಿಯರಿಗೆ ಬಹು ಚಿರಪರಿಚಿತ ಮುಖ. ಬಡೇ ಅಚ್ಛೇ ಲಗ್ತೇ ಹೈ, ಇಷ್ಕ್​ಬಾಜ್​, ಪ್ಯಾರ್​ ಕಾ ದರ್ದ್​ ಹೈ ಮೀಠಾ, ದಿಲ್ ಬೋಲೆ ಓಬಿರಾಯ್​ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಸಕತ್​ ಫೇಮಸ್​ ಆಗಿರೋ ನಟ ಈಗ ಮದುವೆಯ ವಿವಾದದಲ್ಲಿ ಸಿಲುಕಿದ್ದಾರೆ. ಏಕೆಂದರೆ ಅವರಿಗೆ ಇದಾಗಲೇ 17 ಮದುವೆಯಾಗಿದ್ದು 18ನೇ ಮದುವೆಗೆ ಸಿದ್ಧರಾಗಿದ್ದಾರೆ. ಕುತೂಹಲದ ಸಂಗತಿ ಎಂದರೆ ಈ ಕುರಿತು ಅವರೇ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ತಾವು 18ನೇ ಮದುವೆಯಾಗುತ್ತಿರುವುದಕ್ಕೆ ಕಾರಣವನ್ನೂ ನೀಡಿದ್ದಾರೆ, ಜೊತೆಗೆ 17 ಮದುವೆಯಾಗಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ!

Viral Video ನೋಡಿ, ಕನ್ನಡ ಅಂದ್ರೆ ಬಾರ್ಬಿ ಡಾಲ್ ನಿವೇದಿತಾಗೆ ಆಗಿ ಬರಲ್ವಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್​!

Tap to resize

Latest Videos

ಅಷ್ಟಕ್ಕೂ ಬಡೇ ಅಚ್ಚೆ ಲಗ್ತೆ ಹೈ ಖ್ಯಾತಿಯ ನಕುಲ್ ಮೆಹ್ತಾ  ನಿಜ ಜೀವನದಲ್ಲಿ ಮದುವೆಯಾಗಿರುವುದು ಒಂದು ಬಾರಿ ಮಾತ್ರ. 18 ಬಾರಿ ಮದ್ವೆಯಾಗಿರುವುದು ಧಾರಾವಾಹಿಗಳಲ್ಲಿ! ಸಿನಿಮಾ ಕಲಾವಿದರು ಎಂದರೆ ಪಾತ್ರಗಳಿಗೆ ತಕ್ಕಂತೆ ಬಣ್ಣ ಹಚ್ಚಿ ನಟನೆ ಮಾಡಬೇಕು.  ಪರದೆ ಮೇಲೆ ಕಣ್ಣೀರು, ನಗು, ಸಂಸಾರ, ಅಪ್ಪ, ಅಮ್ಮ, ಮದುವೆ ಎಂದು ನಟನೆ ಮಾಡುತ್ತಾರೆ. ಈಗ ನಕುಲ್​ ತಮ್ಮ ಧಾರಾವಾಹಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ವಾಸ್ತವವಾಗಿ, ಟಿವಿ ನಟ ನಕುಲ್ ಮೆಹ್ತಾ ಅವರು ತಮ್ಮ ಜೀವನದಲ್ಲಿ 17 ಬಾರಿ ವರ ಆಗಿದ್ದಾರೆ. ಅವರ 18ನೇ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ. ಇಲ್ಲಿಯವರೆಗೆ ತೆರೆಮೇಲೆ 17 ಬಾರಿ ಮದುವೆಯಾಗಿದ್ದೇನೆ. ನಿಜ ಜೀವನದಲ್ಲಿ 1 ಬಾರಿ ಮದುವೆಯಾಗಿದ್ದೇನೆ. ನಾನು ಎಷ್ಟು ಬಾರಿ ಅಂತ ಮದುವೆಯಾಗಲಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. 

 ಅಂದಹಾಗೆ, ನಿಜ ಜೀವನದಲ್ಲಿ, ನಕುಲ್ ಮೆಹ್ತಾ 2012ರಲ್ಲಿ ಜಾನಕಿ ಪರೇಖ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಮುದ್ದಾದ ಮಗನಿದ್ದಾನೆ. ಅವರು ತೆಲುಗು ಚಲನಚಿತ್ರಗಳು ಮತ್ತು ಹಲವಾರು ವೆಬ್‌ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ನಿರ್ಮಾಪಕರೂ ಹೌದು. ಈಗ ಧಾರಾವಾಹಿ ‘ಬಡೆ ಅಚ್ಚೆ ಲಗ್ತೆ ಹೇ ಸೀಸನ್ 3’ ನಲ್ಲಿ 18ನೇ ಬಾರಿ ಮದುಮಗನಾಗಿ ಕಾಣಿಸಿಕೊಂಡಿದ್ದಾರೆ.

ಸತ್ತರೂ ಬದುಕೋದು, ಸ್ಕೂಟರನ್ನು ವಿಮಾನದಂತೆ ಹಾರಿಸೋದು ಸಾಧ್ಯವಾಗಿಸೋ ಟಿವಿ ಸೀರಿಯಲ್ಸ್!

ಈ ಧಾರಾವಾಹಿಯಲ್ಲಿ ತಮ್ಮ ಮತ್ತು ನಟಿ ದಿಶಾ ಪರ್ಮಾರ್ (Disha Parmar) ಅವರ ಮದುವೆಯ ದೃಶ್ಯ ಅಂದರೆ ರಾಮ್ ಮತ್ತು ಪ್ರಿಯಾ ಅವರ ವಿವಾಹದ ದೃಶ್ಯ ಚಿತ್ರೀಕರಣ ನಡೆಯುತ್ತಿದೆ. ಮತ್ತೆ ಮತ್ತೆ ಮದುಮಗ ಎಂದು ಬೇಸರದಿಂದ ಹೇಳಿದ್ದಾರೆ.  ನಟ-ನಟಿಯರು ನಿರ್ದೇಶಕರ ಕೈಗೊಂಬೆಗಳು. ಪಾತ್ರಗಳಿಗೆ ತಕ್ಕಂತೆ ಬಣ್ಣ ಹಚ್ಚಿ ನಟನೆ ಮಾಡಬೇಕು ಎಂದಿರುವ ನಟ, ನಾನು ಫ್ರೀ ಇದ್ದರೆ ಸಾಕು ನಿರ್ದೇಶಕರು ಮದುಮಗನಾಗ್ತಿಯಾ ಅಂತ ಕೇಳಿ, ಒಂದು ಸ್ಕ್ರಿಪ್ಟ್​ ರೆಡಿ ಮಾಡಿ ಬಿಡುತ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಇವರ ಈ ವಿಡಿಯೋಗೆ ಸಕತ್​ ಕಮೆಂಟ್​ಗಳು ಬರುತ್ತಿವೆ.  

 
 
 
 
 
 
 
 
 
 
 
 
 
 
 

A post shared by Nakuul Mehta (@nakuulmehta)

click me!