ನಿವೇದಿತಾ ಡಿವೋರ್ಸ್​ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್​ ಶೆಟ್ಟಿಗೆ ಟಾಂಗ್​ ಕೊಟ್ರಾ ಮಾಜಿ ಅತ್ತೆ?

By Suchethana D  |  First Published Jun 30, 2024, 12:00 PM IST

ನಿವೇದಿತಾ ಗೌಡ ಡಿವೋರ್ಸ್​ ಬೆನ್ನಲ್ಲೇ ತಮ್ಮ ಗಂಡನ ಹೊಗಳಿ ನಿವೇದಿತಾ ಅಮ್ಮ ಹೇಮಾ  ರೀಲ್ಸ್ ಮಾಡಿದ್ದಾರೆ. ಇದು ಚಂದನ್​ ಶೆಟ್ಟಿಯವರಿಗೆ ಪರೋಕ್ಷವಾಗಿ ನೀಡ್ತಿರೋ ಟಾಂಗ್​ ಎನ್ನುತ್ತಿದ್ದಾರೆ ನೆಟ್ಟಿಗರು 
 


ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಮತ್ತು ಗಾಯಕ ಚಂದನ್​ ಶೆಟ್ಟಿ ಡಿವೋರ್ಸ್​ ವಿಷಯ ಸ್ವಲ್ಪ ತಣ್ಣಗಾಗುತ್ತಾ ಬಂದಿದೆ. ಇವರಿಬ್ಬರೂ ಒಂದೇ ದಿನದಲ್ಲಿ ಡಿವೋರ್ಸ್​ ಪಡೆದು ಎಲ್ಲರಿಗೂ  ಶಾಕ್​ ಹುಟ್ಟಿಸಿದವರು. ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಷಯ ಎಲ್ಲೆಡೆ ವೈರಲ್​ ಆಗುತ್ತಲೇ ಅವರು ಡಿವೋರ್ಸ್​ ಪಡೆದು ಆಗಿಹೋಗಿತ್ತು. ಸುಪ್ರೀಂಕೋರ್ಟ್​ ನೀಡಿರುವ ತೀರ್ಪಿನ ಅಡಿಯಂತೆ ಯಾವುದೇ ಗಲಾಟೆ ಇಲ್ಲದೇ, ಪರಸ್ಪರ ಹೊಂದಾಣಿಕೆ ಮೇರೆಗೆ ಯಾವುದೇ ರೀತಿಯ ಕಚ್ಚಾಟಗಳು ಇಲ್ಲದಂತೆ ವಿಚ್ಛೇದನ ಪಡೆದು ಒಂದು ಕಡೆ ಎಲ್ಲರಿಗೂ ಮಾದರಿಯಾದರೂ, ಇವರಿಬ್ಬರ ಡಿವೋರ್ಸ್​ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಂತೂ ನಿಜ. 

ಇದರ ಬೆನ್ನಲ್ಲೇ ಇದೀಗ ನಿವೇದಿತಾ ಅವರ ತಾಯಿ ಹೇಮಾ ರಮೇಶ್​ ಅವರು ತಮ್ಮ ಪತಿಯನ್ನು ಹೊಗಳಿ ರೀಲ್ಸ್​ ಮಾಡಿದ್ದಾರೆ. ಅಷ್ಟಕ್ಕೂ ಸೌಂದರ್ಯದಲ್ಲಿ ಮಗಳಿಗೇ ಸ್ಪರ್ಧೆ ಒಡ್ಡುತ್ತಾ ಇರೋರು ನಿವೇದಿತಾ ಅಮ್ಮ ಹೇಮಾ ರಮೇಶ್​. ಬಿಗ್​ಬಾಸ್​ 5ರ ಸಮಯದಲ್ಲಿ ನಿವೇದಿತಾ ಗೌಡ ಜೊತೆ ಹೇಮಾ ಅವರೂ  ಎಲ್ಲರ ಗಮನ ಸೆಳೆದಿದ್ದರು.  ಇವರು ನೋಡಲು ಕೂಡ ಸುಮಾರಾಗಿ ಒಂದೇ ರೀತಿಯಿದ್ದು  ಅಕ್ಕ ತಂಗಿಯಂತೆ ಕಾಣಿಸುತ್ತಾರೆ.    ನಿವೇದಿತಾರಂತೆ ತಾಯಿ ಹೇಮಾ  ಕೂಡ  ಸಕತ್​ ಡ್ರೆಸ್ಸಿಂಗ್ ಸೆನ್ಸ್​ ಹೊಂದಿದ್ದಾರೆ. ಅವರೂ ಮೇಕಪ್​ ಮಾಡಿಕೊಂಡು ಬಿಟ್ಟರಂತೂ ನಿವೇದಿತಾ ಅಮ್ಮ ಎನ್ನಲು ಸಾಧ್ಯವೇ ಇಲ್ಲ. ಅದೇ ರೀತಿ  ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವುದೂ ಇದೆ.  ನಿವೇದಿತಾ ಅವರ ಮೈ ಕಟ್ಟುನ್ನೇ ತಾಯಿಯೂ ಹೊಂದಿರುವುದರಿಂದ ಮಗಳಿಗೆ ಕಾಂಪಿಟೇಷನ್​ ನೀಡುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. 

Tap to resize

Latest Videos

ಚಂದನ್​ ಶೆಟ್ಟಿ ಮತ್ತೊಂದು ಮದ್ವೆಯಾಗ್ತಿದ್ದಾರಾ? ಕಾರಿನ ವಿಷಯ ಹೇಳುತ್ತಲೇ ಮನದಾಳದ ಮಾತು ಬಿಚ್ಚಿಟ್ಟ ಗಾಯಕ

ಇದೀಗ ಹೇಮಾ ಅವರು ನಿಮ್ಮಂಥ ಪತಿಯನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿರಬೇಕು. ಅದು ನನ್ನ ಅದೃಷ್ಟ. ನಿಮ್ಮ ಹಾಗೆ ಎಲ್ಲವನ್ನೂ ಅರ್ಥ ಮಾಡಿಕೊಂಡು ಇರುವ ಪತಿ ಸಿಗುವುದೇ ಅಪರೂಪ ಎಂದಿದ್ದಾರೆ. ಸಿನಿಮಾ ಒಂದರ ಡೈಲಾಗ್​ ಅನ್ನು ಹೇಳಿರುವ ಮೂಲಕ ಡಬ್​ಮ್ಯಾಷ್​ ಮಾಡಿದ್ದಾರೆ.  ಮಗಳು ನಿವೇದಿತಾ ಡಿವೋರ್ಸ್​ ಬೆನ್ನಲ್ಲೇ ತಮ್ಮ ಪತಿಯನ್ನು ಹೊಗಳಿ ಮಾಡಿರುವ ಈ ವಿಡಿಯೋ ನೋಡಿದ ಹಲವರು ಹೇಮಾ ಅವರು ಚಂದನ್​ ಶೆಟ್ಟಿಗೆ ಟಾಂಗ್​ ಕೊಟ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ತಮಗೆ ಸಿಕ್ಕಿರುವ ಒಳ್ಳೆಯ ಪತಿ ತಮ್ಮ ಮಗಳಿಗೆ ಸಿಗಲಿಲ್ಲ ಎಂದು ಪರೋಕ್ಷವಾಗಿ ಈ ಮಾಜಿ ಅತ್ತೆ ಹೇಳಿರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ಇನ್ನು ಹಲವರು ನಿಮ್ಮ ಮಗಳು ಸರಿಯಿದ್ದರೆ ಹೀಗೆ ಆಗುತ್ತಿರಲಿಲ್ಲ, ಮೊದಲಿಗೆ ಅವಳಿಗೆ ಬುದ್ಧಿ ಹೇಳಿ ಎನ್ನುತ್ತಿದ್ದಾರೆ. ಮಗಳು ಇನ್ನೂ ಹುಡುಗಾಟಿಕೆ ಬುದ್ಧಿ ಬಿಡಲಿಲ್ಲ. ಅವಳಿಗೆ ಸರಿಯಾಗಿ ಬುದ್ಧಿ ಕಲಿಸಿದ್ದರೆ ಚಂದನ್​ ಶೆಟ್ಟಿಯವರಂಥ ಒಳ್ಳೆಯ ಹುಡುಗನ ಜೊತೆ ಚೆನ್ನಾಗಿಯೇ ಬಾಳುತ್ತಿದ್ದಳು ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಹೇಮಾ ಅವರ ಈ ರೀಲ್ಸ್​ ಥಹರೇವಾರಿ ಕಮೆಂಟ್​ಗಳಿಗೆ ವೇದಿಕೆ ಕಲ್ಪಿಸಿದೆ. ಹಲವರು ಹೇಮಾ ಅವರ ಸೌಂದರ್ಯವನ್ನು ಹೊಗಳಿದ್ದಾರೆ. ಇನ್ನು,   ಹೇಮಾ ಅವರ ಪತಿ ಅಂದರೆ ನಿವೇದಿತಾ ಅವರ ತಂದೆ ಉದ್ಯಮಿಯಾಗಿದ್ದು ಇವರ ಹೆಸರು ಲಕ್ಷ್ಮಣ್​. ನಿವೇದಿತಾ ಬಾರ್ಬಿ ಡಾಲ್​ನಂತೆ ಕಂಗೊಳಿಸಿದರೆ ಅವರ ಅಮ್ಮ ಕೂಡ ತುಂಬಾ ಸುಂದರವಾಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಮ್ಮನ ಸೌಂದರ್ಯವೇ ಮಗಳಿಗೂ ಬಂದಿದೆ ಎಂದು ಹಲವರು ಹಾಡಿ ಹೊಗಳುತ್ತಿದ್ದಾರೆ.  ಅಂದಹಾಗೆ ನಿವೇದಿತಾ ಅವರು, ನಿವೇದಿತಾ ಗೌಡ ಹೆಚ್ಚಾಗಿ ತಮ್ಮ ತಾಯಿಯ ಜೊತೆಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ.  ತಾಯಿಯ ಜೊತೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಅವರ ಬಗ್ಗೆ ಹೇಳುವುದಾದರೆ, ಚಂದನ್ ಮತ್ತು ನಿವೇದಿತಾ ಮದುವೆಯಾದದ್ದು  2020ರಲ್ಲಿ 26ರಂದು.  ಮೈಸೂರಿನಲ್ಲಿ ಈ ಜೋಡಿ ವಿವಾಹ ಅದ್ದೂರಿಯಾಗಿ ನೆರವೇರಿದೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆ ಸಾಕ್ಷಿ ಆಗಿದ್ದರು.  

ಯಾರಿಗೂ ತಿಳಿಯದಂತೆ ಸೈಲೆಂಟಾಗಿ ಡಿವೋರ್ಸ್​ ಆಗೋಣ ಅಂದ್ಕೊಂಡಿದ್ವಿ... ಆದ್ರೆ ಆ ದಿನ...

 
 
 
 
 
 
 
 
 
 
 
 
 
 
 

A post shared by Hema Ramesh (@hema__ramesh)

click me!