ಹರ್ಷನ ಎದೆ ಮೇಲೆ ಭುವಿ! ಈ ಜೋಡಿಯನ್ನು ಯಾರೂ ಬೇರೆ ಮಾಡೋಕಾಗಲ್ಲ

By Suvarna News  |  First Published Mar 4, 2021, 4:59 PM IST

ಕನ್ನಡತಿ ಸೀರಿಯಲ್‌ನಲ್ಲಿ ಹರ್ಷ ಮತ್ತು ಭುವಿಯ ಪ್ರೀತಿಯ ಮಧ್ಯೆ ಅನೇಕ ಅಡೆತಡೆಗಳು ಪ್ರೇಮವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾ ಹೋಗುತ್ತಿದೆ. ಸದ್ಯಕ್ಕೀಗ ಸೀರಿಯಲ್ ಇಂಟೆರೆಸ್ಟಿಂಗ್ ಘಟ್ಟಕ್ಕೆ ಬಂದು ನಿಂತಿದೆ.


ಕನ್ನಡತಿ ಧಾರಾವಾಹಿ ಒಂದಿಲ್ಲೊಂದು ಇಂಟೆರೆಸ್ಟಿಂಗ್ ಟ್ವಿಸ್ಟ್ ಗಳ ಮೂಲಕ ಗಮನ ಸೆಳೆಯುತ್ತಲೇ ಇದೆ. ಹರ್ಷ ಭುವಿಯ ಪರಿಶುದ್ಧ ಪ್ರೀತಿ ಒಳಗಿರಲಾರದೇ, ಹೊರಗೂ ತೋರಿಸಿಕೊಳ್ಳಲಾಗದೇ ಎರಡೂ ಹೃದಯಗಳನ್ನು ವಿಲ ವಿಲ ಒದ್ದಾಡೋ ಹಾಗೆ ಮಾಡ್ತಿದೆ. ಇವರ ಪ್ರೀತಿಯ ಮಧ್ಯೆ ಅನೇಕ ಅಡೆತಡೆಗಳು ಪ್ರೇಮವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾ ಹೋಗುತ್ತಿದೆ. ಸದ್ಯಕ್ಕೀಗ ಸೀರಿಯಲ್ ಇಂಟೆರೆಸ್ಟಿಂಗ್ ಘಟ್ಟಕ್ಕೆ ಬಂದು ನಿಂತಿದೆ.

ಒಂದು ಕಡೆ ಹರ್ಷ ಕೆಲವು ದಿನಗಳಿಂದ ಊರಲ್ಲಿಲ್ಲ ಹರ್ಷ ವಾಪಾಸ್ ಬೆಂಗಳೂರಿಗೆ ಬರುತ್ತಾ ಒಂದು ಹಳ್ಳಿ ಹೊಟೇಲ್ ಮುಂದೆ ಕಾಫಿಗೆ ಅಂತ ಕಾರು ನಿಲ್ಲಿಸುತ್ತಾನೆ. ಆದರೆ ಇಲ್ಲಿ ಕಾಫಿಗಿಂತ ಹೆಚ್ಚು ಆತನ ಗಮನ ಸೆಳೆಯೋದು ಕಾಫಿ ನೀಡಿದ ಕೈಗಳು. ವಯಸ್ಸಾದ ಹೆಂಗಸು ನೀಡಿದ ಕಾಫಿಗಿಂತಲೂ, ಆಕೆಯ ನೆರಿಗೆಗಟ್ಟಿದ ಕೈಯಲ್ಲಿ ಭೈರ ಅನ್ನೋ ಹೆಸರೇ ಹರ್ಷನನ್ನು ಆಕರ್ಷಿಸುತ್ತೆ.

Tap to resize

Latest Videos

undefined

ಟಿಕ್‌ಟಾಕ್‌ ಧನುಶ್ರೀ ಸ್ನಾನಕ್ಕೂ ಮೇಕಪ್ ಮಾಡ್ಕೊಂಡೇ ಹೋಗೋದಾ? ...

ಮದುವೆಯಾಗುವಾಗ ಆ ಹೆಂಗಸಿಗೆ ಹದಿನೈದು ವರ್ಷ. ಆಗ ಗಂಡನ ಹೆಸರೂ ಹೇಳದೇ ಇದ್ದ ಕಾಲ. ಬಾಯಲ್ಲಿ ಗಂಡನ ಹೆಸರು ಹೇಳದಿದ್ದರೂ ಆತನ ಮೇಲಿನ ಪ್ರೀತಿಗೆ ಕೈ ಮೇಲೆ ಆತನ ಹೆಸರನ್ನು ಹಚ್ಚೆ ಹಾಕೋದು ಆ ಕಾಲದ ಪದ್ಧತಿಯಾಗಿತ್ತು. ಅದರಂತೆ ಹದಿನೈದು ವರ್ಷದವಳಿದ್ದಾಗ ಆ ಅಜ್ಜಿ ಕೈ ಮೇಲೆ ಬಿದ್ದ ಹಚ್ಚೆ ಈಗಲೂ ಹಾಗೇ ಇತ್ತು.

ಹರ್ಷ ಅಷ್ಟೊಂದು ಆಸಕ್ತಿಯಿಂದ ವಿಚಾರಿಸೋದು ನೋಡಿ ಅಜ್ಜಿಗೆ ಡೌಟ್ ಬಂದಿದೆ. 'ನಿನಗೂ ಹಚ್ಚೆ ಹಾಕಿಸಬೇಕೇನಪ್ಪಾ?' ಅಂತ ಅವ್ರು ಕೇಳಿದ್ದಾರೆ. ಹರ್ಷ ಖುಷಿಯಿಂದ ಒಪ್ಪಿದ್ದಾನೆ. ಆತನ ಎದೆಯ ಮೇಲೆ ಹಚ್ಚೆ ಹಾಕುತ್ತಾ ಸೂಜಿಯಿಂದ ಚುಚ್ಚುತ್ತಿರುವಾಗ ಅಜ್ಜಿ ಹರ್ಷ ನಡುವೆ ನಡೆಯೋ ಮಾತುಕತೆ ಸಖತ್ ಇಂಟೆರೆಸ್ಟಿಂಗ್. ಒಂಥರಾ ಲವ್‌ ಫಿಲಾಸಫಿ ಅಂತಲೂ ಹೇಳಬಹುದು. ಪ್ರೇಮಿಗಳ ಅನುಭವವೂ ಹರ್ಷ ಮಾತಲ್ಲಿದೆ. ಹರ್ಷನ ಮಾತು ಕೇಳ್ತಿದ್ರೆ ನಿಜಕ್ಕೂ ಹೊಸ ಪ್ರೇಮಿಗಳ ಹೊಟ್ಟೆಯಲ್ಲಿ ಚಿಟ್ಟೆ ಓಡಾಡ್ತಂದಗಾಗದಿದ್ರೆ ಕೇಳಿ.

ಅವರಿಬ್ಬರ ಮಾತುಗಳು ಹೀಗಿವೆ: ' ನೋವಾಗ್ತಿದೆಯೇನಪ್ಪಾ?' ಅಂತ ಆ ಹಿರಿಯ ವಯಸ್ಸಿನ ಹೆಣ್ಣುಮಗಳು ಕೇಳಿದ್ರೆ, 'ನೋವಾಗ್ಬೇಕಮ್ಮಾ, ಪ್ರತೀ ಸಲ ಚುಚ್ದಾದ ನಾವು ನೋವು ಕೊಟ್ಟಿದ್ದು ನೆನಪಾಗ್ಬೇಕು' ಅಂತ ಫಿಲಾಸಫಿ ಮಾತಾಡ್ತಾನೆ ಹರ್ಷ. 
'ಇಷ್ಟೊಂದು ಪ್ರೀತಿಸ್ತಿದ್ದೀಯ ಅಂದ್ರೆ ನೋವ್ಯಾಕೆ ಕೊಟ್ಟೆ?' ಅನ್ನೋ ಆ ಹೆಂಗಸಿನದೂ ತಕ್ಕ ಪ್ರಶ್ನೆ. 
'ಕೆಲವೊಂದು ಗೊತ್ತಾಗ್ಬೇಕು ಅಂದ್ರೆ ಕೆಲವೊಂದು ಸಂಗತಿ ನಡೀಲೇ ಬೇಕು. ನೋವು ಕೊಟ್ಟಾದ್ಮೇಲಲ್ವಾ ಅರ್ಥ ಆಗೋದು ನೋವು ಕೊಡಬಾರ್ದು ಅಂತ' ಅಂತ ಅವರ ಮಾತಿಗೆ ಮಾತು ಬೆಸೆಯುತ್ತಾನೆ ಹರ್ಷ.
'ಕೆಲವು ಸಲ ಅರ್ಥ ಆದ ಮೇಲೂ ನೋವು ಕೊಡ್ತೀವಿ, ನಾವೂ ಅನುಭವಿಸ್ತೀವಿ' ಅಂತ ತಮ್ಮ ಅನುಭವದ ನುಡಿ ನುಡಿಯುತ್ತಾರೆ ಆಕೆ. 
'ಪ್ರೀತಿ ಇರೋ ಕಡೆ ನೋವಿದ್ದೇ ಇರತ್ತಲ್ವಾ ಅಮ್ಮ, ಕೆಲವು ಸಲ ನಾವು ನೋವು ಕೊಡ್ತಿವಿ, ಕೆಲವು ಸಲ ಗೊತ್ತಿಲ್ದೇ ನೋವು ಮಾಡ್ತೀವಿ. ಕೆಲವೊಂದು ಹಿಂದೆ ಕೊಟ್ಟಿದ್ದು, ಕೆಲವೊಂದು ಮುಂದೆ ಕೊಡೋದು' ಅಂತ ಮಾತಾಡೋ ಹರ್ಷ, ತನ್ನ ಅನುಭವಗಳನ್ನುಆಗಷ್ಟೇ ಪರಿಚಯವಾದ ಅಜ್ಜಿಗೆ ಹೇಳ್ತಾನೆ.

ಬಾಯ್‌ಫ್ರೆಂಡ್ ಹೆಸರು ರಿವೀಲ್ ಮಾಡಿದ ಇಲಿಯಾನಾ ...

'ಪ್ರೀತಿ ಅಂದ್ಮೇಲೆ ನೋವು ಇದ್ದೇ ಇರುತ್ತೆ. ಜನರ ಜೊತೆಗಿದ್ರೆ ಒಬ್ಬನೇ ಇರೋಣ ಅನಿಸುತ್ತೆ. ಒಬ್ಬನೇ ಇದ್ದಾಗ ಜನರ ಮಧ್ಯೆ ಹೋಗೋಣ, ಎಲ್ಲ ಸರಿಹೋಗುತ್ತೆ ಅನಿಸುತ್ತೆ. ಕಾಲ್ ಬಂದಾಗ ಅವ್ರೇ ಕಾಲ್ ಮಾಡಿರಬೇಕು ಅನಿಸುತ್ತೆ. ಪ್ರೀತಿ ಮಾಡೋರನ್ನ ಹುಚ್ಚರು ಅಂತ ಯಾಕೆ ಕರೀತಾರೆ ಅಂತ ಇಷ್ಟು ದಿನದ ಮೇಲೆ ಅರ್ಥ ಆಯ್ತು..' ಅನ್ನುವ ಹರ್ಷ ಒಂದು ರೀತಿಯಲ್ಲಿ ಎಲ್ಲ ಪ್ರೇಮಿಗಳ ರಾಯಭಾರಿ ಥರ ಕಾಣ್ತಾ ಹೋಗ್ತಾನೆ.
'ಇಷ್ಟು ನೋವಾಗ್ತಿದೆ, ಆದ್ರೂ ನಗ್ತಿದ್ದೀಯಲ್ಲಪ್ಪಾ..' ಅಂತ ಆ ಅಜ್ಜಿ ಕೇಳ್ತಾರೆ. 
'ನಾನು ಇದನ್ನೆಲ್ಲ ಒಬ್ಬ ಟೀಚರ್ ಹತ್ರ ಕಲ್ತಿದ್ದು. ಅವ್ರು ಹಾಗೇ.. ಏನ್ ನೋವಾದ್ರೂ ಅಳಲ್ಲ. ಯಾವಾಗ್ಲೂ ಸ್ಟ್ರಾಂಗ್' ಅಂತ ಹೇಳುವಾಗ, ಅಜ್ಜಿ ಕುತೂಹಲದಿಂದ 'ಹೌದಾ, ಏನು ಅವ್ರ ಹೆಸ್ರು' ಅಂತ ಕೇಳ್ತಾಳೆ. 
'ನನ್ನ ಎದೆ ಮೇಲೆ ಬರೆದಿರುವ ಹಚ್ಚೆಯಲ್ಲಿ ಎರಡನೇ ಅಕ್ಷರ' ಅನ್ನುತ್ತಾ ಮುಖ ಕೆಂಪು ಮಾಡಿಕೊಳ್ತಾನೆ ಹರ್ಷ.
ಎದೆಯ ಮೇಲೆ ಪ್ರೇಯಸಿಯ ಹೆಸರು ಬರೆಸಿ, ಸದಾ ಅವರು ಜೊತೆಯಲ್ಲೇ ಇದ್ದಾರೆ ಅಂತ ಭಾವಿಸೋದು ಎಂಥಾ ಮಧುರ ಕಲ್ಪನೆ ಅಲ್ವಾ! ಹರ್ಷನಿಗೀಗ ಆಗ್ತಿರೋದು ಅದೇ.

click me!