ನಿಧಿ ಸುಬ್ಬಯ್ಯ ಬದಲು ಮನೆಯಿಂದ ಹೊರ ಬರುತ್ತಿದ್ದಾರೆ ಶುಭಾ ಪೂಂಜಾ; ಇದು ಪಕ್ಕಾ ಗೇಮ್!

Suvarna News   | Asianet News
Published : Mar 04, 2021, 02:31 PM ISTUpdated : Mar 04, 2021, 02:40 PM IST
ನಿಧಿ ಸುಬ್ಬಯ್ಯ ಬದಲು ಮನೆಯಿಂದ ಹೊರ ಬರುತ್ತಿದ್ದಾರೆ ಶುಭಾ ಪೂಂಜಾ; ಇದು ಪಕ್ಕಾ ಗೇಮ್!

ಸಾರಾಂಶ

'ನಾಮಿನೇಶನ್ ವಾರ್ಗಾವಣೆ' ಸ್ನೇಹಿತೆಯ ಬೆಂಬಲವಾಗಿ ನಿಂತ ಶುಭ ಪೂಂಜಾನೇ ಮೊದಲ ವಾರ ಮನೆಯಿಂದ ಹೊರ ಬರುತ್ತಿದ್ದಾರೆ? ಅರ್ಥ ಆಗಿಲ್ವಾ, ಕೆಳಗೆ ಓದಿ....

ಬಿಗ್‌ಬಾಸ್‌ ಮನೆ ಹೇಗಿದೆ ಅಂತ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮೊದಲ ವಾರದ ನಾಮಿನೇಶನ್ ನಡೆದಿದೆ. ಈ ವಾರ ಮನೆಯಿಂದ ಹೊರ ಬರಲು ನಾಮಿನೇಟ್‌ ಆಗಿರುವ ಪ್ರತಿಯೊಬ್ಬ ಸ್ಪರ್ಧಿಯೂ ಪ್ರತಿಸ್ಪರ್ಧಿ ಜೊತೆ ಹೆಚ್ಚಿನ ಸಮಯ ಕಳೆದಿಲ್ಲ ಅಥವಾ ಅರ್ಥ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಹೊರತು ಇನ್ಯಾವ ಕಾರಣನೂ ಇಲ್ಲ.

ಕ್ಯಾಪ್ಟನ್ ಬ್ರೋ ಗೌಡ ಮತ್ತು ಸಂಬರಗಿ ನಡುವೆ ಬಿಗ್ ಫೈಟ್; ಓವರ್ ಆ್ಯಕ್ಟಿಂಗ್ ಯಾರ್ ಗುರು? 

ನಾಮಿನೇಶನ್ ಪ್ರಕ್ರಿಯೆ ಪ್ರಕಾರ ಧನುಶ್ರೀ, ನಿರ್ಮಲಾ, ನಿಧಿ ಸುಬ್ಬಯ್ಯ, ಪ್ರಶಾಂತ್ ಹಾಗೂ ಮಂಜು ಹೊರ ಬರುವ ಸ್ಪರ್ಧಿಗಳಾಗಿದ್ದರು. ಆದರೆ ಬಿಗ್‌ಬಾಸ್‌ ನಾಮಿನೇಶನ್ ವರ್ಗಾವಣೆ ಟಾಸ್ಕ್ ನೀಡಿ ಸೇಫ್‌ ಆಗಿದ್ದ ಸ್ಪರ್ಧಿಗಳಿಗೆ ಸವಾಲು ಹಾಕಿದರು. ಈ ಟಾಸ್ಕ್‌ನಲ್ಲಿ ನಿಧಿ ಸುಬ್ಬಯ್ಯ ಮೊದಲು ದಿವ್ಯಾ ಉರುಗ ಜೊತೆ ಸ್ಪರ್ಧಿಸಿದ್ದರು. ಬುಟ್ಟಿಯಲ್ಲಿದ್ದ ಟೀ-ಶರ್ಟ್‌ ಧರಿಸಿ ಈಜು ಕೊಂಡು ಮತ್ತೊಂದು ದಡದಲ್ಲಿರುವ ಗಂಟೆಯನ್ನು ಹೊಡೆಯಬೇಕೆಂಬೆ ಟಾಸ್ಕ್ ಇತ್ತು. ನಿಧಿ ಹಾಗೂ ದಿವ್ಯಾ ಇಬ್ಬರೂ 20 ಶರ್ಟ್‌ಗಳನ್ನು ಧರಿಸಿದ್ದರು. ಟೈ  ಆದ ಕಾರಣ ಮತ್ತೊಮ್ಮೆ 9 ಶರ್ಟ್‌ ನೀಡಿ ಗೇಮ್ ಶುರು ಮಾಡಿದ್ದರು. ಆಗಾ ದಿವ್ಯಾ 5 ಟೀ ಶರ್ಟ್ ಧರಿಸಿ ಸೇಫ್ ಆದರೆ, ನಿಧಿ ಮತ್ತೊಮ್ಮೆ ನಾಮಿನೇಟ್ ಆದರು.

ಅಲ್ಲಿಗೆ ಗೇಮ್ ನಿಂತಿಲ್ಲ. ಮತ್ತೆ ಬಿಗ್‌ ಬಾಸ್ ಮತ್ತೊಂದು ಅವಾಕಾಶವೊಂದನ್ನು ನೀಡಿದರು, ನಾಮಿನೇಟ್ ಆಗಿರುವ ಜನರಲ್ಲಿ ಒಬ್ಬರು ಮಾತ್ರ ಈ ಟಾಸ್ಕ್ ಮಾಡಬಹುದಾಗಿತ್ತು. ನಿಧಿ ಸುಬ್ಬಯ್ಯ ಎದುರಾಳಿಯಾಗಿ ಶುಭ ಪೂಂಜಾರನ್ನೇ ಆಯ್ಕೆ ಮಾಡಿಕೊಂಡರು. 'ಡಾಟ್ಸ್' ಆಟದಲ್ಲಿ ಅತಿ ಹೆಚ್ಚಿನ ಗುರಿ ಇಟ್ಟು ಹೊಡೆದ ನಿಧಿ ಸೇಫ್. ಅದರೆ, ಶುಭಾ ಸೋತು ನಾಮಿನೇಟ್ ಆದರು. ಹೀಗಾಗಿ ಈ ವಾರ ಮನೆಯಿಂದ ಹೊರ ಬರುವ ಇನ್ನಿತರೆ ಸ್ಪರ್ಧಿಗಳ ಜೊತೆ ಶುಭಾನೂ ಇದ್ದಾರೆ. 

ಬಿಗ್‌ಬಾಸ್‌ಗೆ ದೊಡ್ಡ ಬೇಡಿಕೆ; ಸಂಬರಗಿ ಜೈಲಿಗೆ ಹಾಕಿ, ಕಾಫಿ ಕಳಿಸಿ! 

ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಶುಭಾ ಪೂಂಜಾ ಅಭಿಮಾನಿಗಳು ಇದು ಅನ್ಯಾಯ ಎಂದು ಹೇಳುತ್ತಿದ್ದಾರೆ. ಆದರೆ ಇದು ಪಕ್ಕಾ ಗೇಮ್ ಆಗಿದ್ದು, ವೀಕ್ಷಕರು ಇಲ್ಲಿ ಯಾವ ಮೋಸ ಇಲ್ಲ ಎಂದು ಮರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ