'ಬಾ ಗುರು' ಬಿಗ್ ಬಾಸ್ ಮನೆಯಲ್ಲಿ ಆಗಿರುವ ಮೊದಲ ಫೈಟ್ ಬಗ್ಗೆ ಸ್ವಲ್ಪ ಮಾತಾಡೋಣ. ಪ್ರಶಾಂತ್ ತಮಾಷೆ ಮಾಡಿದ್ರೆ ಮಾತ್ರ ತಮಾಷೆ ನಾ ಅಥವಾ ಬ್ರೋ ಗೌಡ ಮಾಡಿದಾಗ ಮಾಡಿದರೂ ತಮಾಷೆನೇ ಅಲ್ವಾ?
ಬಾ ಗುರು ಕನ್ನಡ ಸಿನಿಮಾ ನೋಡೋಣ, ಬಾ ಗುರು ತಿಂಡಿ ತಿನ್ನೋಣ, ಬಾ ಗುರು ಟಿಕ್‌ಟಾಕ್ ಮಾಡೋಣ..ಹೀಗೆ ಬಾ ಗುರು ಎಂಬ ಸಾಲುಗಳನ್ನು ಬಳಸಿ ವೈರಲ್ ವಿಡಿಯೋಗಳನ್ನು ಮಾಡುತ್ತಿದ್ದ ಬ್ರೋ ಗೌಡ ಅಲಿಯಾ ಶಮಂತ್ ಬಿಗ್‌ಬಾಸ್ ಮೊದಲ ವಾರದ ಕ್ಯಾಪ್ಟನ್ ಆಗಿ ಮನೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ ಮಾಸ್ಟರ್ ಮೈಂಡ್ ಪ್ರಶಾಂತ್ ಬೇಕಂತಲೇ ಮನೆಯಲ್ಲಿ ಕೋಲ್ಡ್‌ವಾರ್ ಕ್ರಿಯೇಟ್ ಮಾಡುತ್ತಿದ್ದಾರೆ.
ಬಿಗ್‌ಬಾಸ್‌ಗೆ ದೊಡ್ಡ ಬೇಡಿಕೆ; ಸಂಬರಗಿ ಜೈಲಿಗೆ ಹಾಕಿ, ಕಾಫಿ ಕಳಿಸಿ!
undefined
ಪ್ರಶಾಂತ್ ಮಾತುಗಳು ನೇರ ನುಡಿ. ನನ್ನ ಕೆಲಸ ಮೊದಲು, ತಾನು ಸೇಫ್ ಆಗಬೇಕು, ಇದು ಗೇಮ್ ಅಷ್ಟೇ ಪ್ರಶಾಂತ್ ಗಮನ. ಮನೆಯಲ್ಲಿ ದಿವ್ಯಾ ಉರುಗ ಜೊತೆ ಆತ್ಮೀಯರಾಗಿರುತ್ತಾರೆ. ಮನೆಯಲ್ಲಿ ಮನೋರಂಜನೆ ಬೇಕೆಂದು ಸ್ಪರ್ಧಿಗಳು ನಾಟಕ ಮಾಡುತ್ತಿದ್ದರು, ಈ ವೇಳೆ ಪ್ರಶಾಂತ್ ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ದಿವ್ಯಾ ಮಾಡಬೇಕಿತ್ತು. ಇಬ್ಬರು ಡುಯೇಟ್ ಹಾಡುತ್ತಿದ್ದರು. ಪ್ರಶಾಂತ್ ಭಾವನೆಗಳನ್ನು ವ್ಯಕ್ತ ಪಡಿಸುತ್ತಿದ್ದ ರೀತಿ ನೋಡಿ ಬ್ರೋ ಗೌಡ 'Over acting' ಎಂಬ ಪದ ಬಳಸಿದ್ದಕ್ಕೆ ಸಂಬರಗಿ ಕೆಂಡಾಮಂಡಲವಾದರು.
ಶಂಕರ್ ಹಾಗೂ ಚಂದ್ರಕಲಾ ಅಭಿನಯಿಸುವಾಗ ಯಾರೂ ತಮಾಷೆ ಮಾಡಲಿಲ್ಲ, ಆದರೆ ನಾನು ದಿವ್ಯಾಳ ಜೊತೆ ಡುಯೇಟ್ ಆಗುವಾಗ ಮಾತ್ರ ಎಲ್ಲರೂ ತಮಾಷೆ ಮಾಡಿದ್ದೀರಾ? ಅದರಲ್ಲೂ ಶಮಂತ್ ಮಾಡಿದ್ದು ತಪ್ಪು ಎಂದು ಕ್ಯಾಪ್ಟನ್ ವಿರುದ್ಧ ಪ್ರಶಾಂತ್ ಗರಂ ಆದರು. ಎಲ್ಲರೂ ತಮಾಷೆಗೆಂದು ಮಾಡಿದ ಡ್ರಾಮಾ ಎಂಬ ಕಾರಣ ಎಲ್ಲರೂ ಶಮಂತ್ ಪರವಾಗಿ ಮಾತನಾಡಿದರು. ತಾವು ಮತ್ತೊಮ್ಮೆ ಅಭಿನಯಿಸಬೇಕು, ಎಂದು ಪ್ರಶಾಂತ್ ಹೇಳಿದ್ದಕ್ಕೆ ಇಡೀ ಮನೆ 'ಓಕೆ ಊಟದ ನಂತರ ಮತ್ತೆ ಡ್ರಾಮಾ ಮಾಡೋಣ,' ಎಂದು ಸುಮ್ಮನಾದರು.
ಟಿಕ್‌ಟಾಕ್ ಧನುಶ್ರೀ ಸ್ನಾನಕ್ಕೂ ಮೇಕಪ್ ಮಾಡ್ಕೊಂಡೇ ಹೋಗೋದಾ?
ಪ್ರಶಾಂತ್ ಪದೆ ಪದೇ ಕ್ಯಾಪ್ಟನ್ ವಿರುದ್ಧ ಮಾತನಾಡುತ್ತಿರುವುದಕ್ಕೆ ಶಮಂತ್ ಅಸಮಾಧಾನ ವ್ಯಕ್ತ ಪಡಿಸಿದ್ದರು. ಶಮಂತ್ ಹೇಳುವ ಯಾವ ಮಾತನ್ನೂ ಪ್ರಶಾಂತ್ ಕೇಳುವುದಿಲ್ಲ. ಹಾಗೂ ಪ್ರತಿಯೊಬ್ಬರ ಬಗ್ಗೆಯೂ ಚುಚ್ಚು ಮಾತನಾಡುತ್ತಿರುವ ಬಗ್ಗೆ ಸ್ಪರ್ಧಿಗಳು ಗುಂಪು ಗುಂಪಾಗಿ ಗುಸು ಗುಸು ಮಾತನಾಡಿಕೊಳ್ಳುತ್ತಿದ್ದಾರೆ.