
ಕನ್ನಡತಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕನ್ನಡತಿ'. ವೂಟ್ ಸೆಲೆಕ್ಟ್‌ನಲ್ಲಿ ಒಂದು ದಿನ ಮೊದಲು ಈ ಸೀರಿಯಲ್ ನೋಡಬಹುದು. ಕನ್ನಡತಿಯ ಈಗಿನ ಎಪಿಸೋಡ್‌ಗಳು ಹೆಚ್ಚು ರೋಚಕವಾಗುತ್ತಿದೆ. ಇದರಲ್ಲಿ ಒಂದು ಕಡೆ ಹರ್ಷ ಭುವಿಯ ಪ್ರೀತಿ, ಇನ್ನೊಂದೆಡೆ ಇವರಿಬ್ಬರನ್ನು ಬೇರೆ ಮಾಡಲು ಸಾನಿಯಾ, ವರೂಧಿನಿ ಕುತಂತ್ರ, ಮಗದೊಂದೆಡೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಲು ಸೂತ್ರಧಾರಿಯಂತಿರುವ ರತ್ನಮಾಲಾ. ಈ ಥರ ಐಡಿಯಲ್ ಫಾರ್ಮಾಟ್‌ನಲ್ಲಿ ಕಥೆ ಸಾಗುತ್ತಿದೆ. ಹರ್ಷ ಭುವಿ ಮದುವೆಯ ವೇಳಗೆ ಹೈ ಡ್ರಾಮಾ ನಡೆದಿತ್ತು. ಇವರ ಮದುವೆಯನ್ನು ನಿಲ್ಲಿಸಲು ವರೂಧಿನಿ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಳು. ಕೊನೆಗೆ ಹರ್ಷ ಭುವಿ ಮದುವೆ ಆಸ್ಪತ್ರೆಯಲ್ಲೇ ನಡೆದಿತ್ತು. ಆದರೆ ಈ ಹೊತ್ತಿಗೆ ಅಮ್ಮಮ್ಮನ ಆರೋಗ್ಯ ಕೈಕೊಟ್ಟ ಕಾರಣ ಹರ್ಷ ಭುವಿ ಇಬ್ಬರಿಗೂ ಫಸ್ಟ್‌ನೈಟ್ ಆಚರಿಸಿಕೊಳ್ಳಲು ಇಷ್ಟ ಇರಲಿಲ್ಲ. ಇದೀಗ ಅಮ್ಮಮ್ಮ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ವಾಪಾಸ್ ಬಂದ ಮೇಲೆ ಅವರೇ ನಿಂತು ಮೊದಲ ರಾತ್ರಿಗೆ ಶಾಸ್ತ್ರ ಇಡಿಸಿದ್ದಾರೆ. ಆದರೆ ಇನ್ನೊಂದೆಡೆ ಸಾನಿಯಾ ಅಮ್ಮಮ್ಮನ ಮೊಬೈಲ್‌ನಲ್ಲಿ ತನ್ನ ಬಗ್ಗೆ ಇರುವ ಸಾಕ್ಷಿಯನ್ನು ನಾಶ ಮಾಡಬೇಕು ಇನ್ನಿಲ್ಲದ ಹಾಗೆ ಪ್ರಯತ್ನ ಮಾಡ್ತಾ ಇದ್ದಾಳೆ.
ಈ ನಡುವೆ ಹರ್ಷ ಭುವಿಯ ಮೊದಲ ರಾತ್ರಿಯ ಸಂಭ್ರಮ ಶುರುವಾಗಿದೆ. ಮನೆಯಲ್ಲಿ ಅವರಿಬ್ಬರಿಗೆ ಏಕಾಂತ ಇರಬೇಕು ಅಂತ ಅಮ್ಮಮ್ಮ ಮನೆಯವರನ್ನೆಲ್ಲ ಕರೆದುಕೊಂಡು ತನ್ನ ಸ್ನೇಹಿತೆಯ ಮನೆಗೆ ಬಂದಿದ್ದಾರೆ. ಇತ್ತ ಹರ್ಷ ಮನೆಗೆ ಬರುವಾಗ ಯಾವಾಗಲೂ ಗಲಗಲ ಅನ್ನುತ್ತಿದ್ದ ಮನೆಯಲ್ಲಿ ನೀರವ ಮೌನ. ಯಾರನ್ನು ಕರೆದರೂ ಯಾರೂ ಇಲ್ಲ. ಸಣ್ಣ ಗುಮಾನಿಯಲ್ಲೇ ತನ್ನ ಫಸ್ಟ್ ನೈಟ್ ಇವತ್ತು ಅನ್ನೋದನ್ನು ನೆನೆದು ಚೆಂದದ ಉಡುಪಿನಲ್ಲಿ ಸುಂದರಾಂಗನ ಹಾಗೆ ಹೊರಬಂದರೆ ಭುವಿ ಸಖತ್ ಬ್ಯೂಟಿಫುಲ್ ಆಗಿ ಮಹಡಿ ಮೆಟ್ಟಿಲು ಇಳಿದು ಬರ್ತಿದ್ದಾಳೆ.
ಹರ್ಷ ಕಣ್ಣು ಬಾಯಿ ಬಿಟ್ಟು ಅವಳನ್ನೇ ನೋಡ್ತಿದ್ದಾನೆ. ಭುವಿಯ ಕೈಯಲ್ಲಿ ಮಲ್ಲಿಗೆ ಹೂವಿದೆ. ಅದನ್ನು ಭುವಿಯ ತಲೆಗೆ ಮುಡಿಸುತ್ತಾನೆ. ಭುವಿ ಅವನಿಂದ ಬಿಡಿಸಿಕೊಂಡು ಆಚೆ ಹೋಗ್ತಾಳೆ. ಅವಳ ನಾಚಿಕೆ, ಹರ್ಷನ ಮೋಹ, ಅಲ್ಲಿರುವ ಏಕಾಂತದ ನಡುವೆ ಅವರಿಬ್ಬರ ಫೈಸ್ಟ್ ನೈಟ್ ರಂಗೇರಬೇಕು ಅನ್ನುವಾಗ ಎಲ್ಲರ ಊಹೆಯಂತೇ ಅಲ್ಲೊಂದು ವಿಘ್ನ ಎದುರಾಗುತ್ತೆ.
ಕಾಂಪೌಂಡ್ ಹಾರಿಸಿ ಗರ್ಲ್‌ಫ್ರೆಂಡ್‌ನ ಮನೆಯಿಂದ ಎಸ್ಕೇಪ್ ಮಾಡಿದ ಕಿರುತೆರೆ ನಟ ಅರುಣ್!
ಆ ವಿಘ್ನ ಏನು, ಹರ್ಷ ಭುವಿ ಫಸ್ಟ್‌ನೈಟ್ ಈ ಸಲವೂ ಮುಂದೆ ಹೋಗುತ್ತಾ, ಅವರ ಮನೆಯಲ್ಲಿ ಹೈ ಡ್ರಾಮಾ ಆಗಿದ್ದೂ ಫಸ್ಟ್ ನೈಟಲ್ಲೂ ಮುಂದುವರಿಯುತ್ತಾ? ಎಂಥಾ ಪ್ರಶ್ನೆ ವೀಕ್ಷಕರದು. ಏಕೆಂದರೆ ಕನ್ನಡತಿಯಲ್ಲಿ ಹರ್ಷ ಭುವಿ ನಡುವಿನ ಯಾವುದೇ ಸಂಗತಿ ಖುಷಿಯಲ್ಲಿ ಶುರುವಾಗಿ ಖುಷಿಯಲ್ಲಿ ಕಂಟಿನ್ಯೂ ಆಗಿ ಖುಷಿಯಲ್ಲೇ ಮುಗಿದದ್ದು ಅಂತಿಲ್ಲ. ಅಲ್ಲೊಂದು ವಿಘ್ನ, ಸಮಸ್ಯೆ ಬಂದೇ ಬರುತ್ತೆ. ಈ ಎಪಿಸೋಡ್ ಸಹ ಅದಕ್ಕಿಂತ ಹೊರತಾಗಿಲ್ಲ. ಆದರೆ ಸಾನಿಯಾಳ ಒಂದು ಕುತಂತ್ರ ಮಾತ್ರ ವೀಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡಿದೆ. ಸದ್ಯದ ಸ್ಥಿತಿ ನೋಡಿದರೆ ಆಕೆಯ ಮೇಲೆ ಜೀವ ಬೆದರಿಕೆ ಮಾತ್ರ ಅಲ್ಲ, ಸಾಕ್ಷಿ ನಾಶದ ಕೇಸೂ ಬರುವ ಸಾಧ್ಯತೆ ಇದ್ದ ಹಾಗಿದೆ. ಹಾಗೇ ಒಂದಿಷ್ಟು ಡೌಟ್‌ಗಳೂ ಬರುತ್ತವೆ. ಬಹುಶಃ ಮುಂದಿನ ದಿನಗಳಲ್ಲಿ ಈ ಡೌಟ್ ಕ್ಲಿಯರ್ ಆಗಬಹುದು, ಆಗದೆಯೂ ಹೋಗಬಹುದು. ಆದರೆ ಅಮ್ಮಮ್ಮ ಬಂದಮೇಲೆ ಸೀರಿಯಲ್ ಗೆ ಮತ್ತೆ ಜೀವಕಳೆ ಬಂದಿರೋದು ಸುಳ್ಳಲ್ಲ.
Ramachari ಮನೆಗೇ ಬಂದು ಧಮಕಿ ಹಾಕಿದ ಚಾರು! ಇವಳಿಗೆ ಬ್ರೇಕ್ ಹಾಕೋರೇ ಇಲ್ವಾ?
ಕಿರಣ್‌ರಾಜ್ ಈ ಸೀರಿಯಲ್‌ನಲ್ಲಿ ಹರ್ಷನಾಗಿ ಕಾಣಿಸಿಕೊಂಡರೆ, ಭುವಿಯ ಪಾತ್ರದಲ್ಲಿ ರಂಜನಿ ರಾಘವನ್ ಇದ್ದಾರೆ. ಚಿತ್ಕಳಾ ಬಿರಾದಾರ್ ಅಮ್ಮಮ್ಮನಾಗಿ ಮಿಂಚುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.