SARIGAMAPA: ಕುರಿಗಾಹಿಯ ನಾಲಿಗೆ ಮೇಲೆ ಕಲಾಸರಸ್ವತಿ- ಕಂಠ ಮಾಧುರ್ಯಕ್ಕೆ ಕಣ್ಣೀರಾದ ಹಂಸಲೇಖ

By Suvarna News  |  First Published Oct 15, 2023, 4:48 PM IST

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಕುರಿ ಕಾಯುವ ರಮೇಶ್​ ಲಮಾಣಿ ಅವರ ಕಂಠ ಮಾಧುರ್ಯಕ್ಕೆ ಖುದ್ದು ಹಂಸಲೇಖ ಅವರೇ ಕಣ್ಣೀರಾದರು.
 


ಕಲಾ ಸರಸ್ವತಿ ಯಾರ ಕೈ ಹಿಡಿಯುತ್ತಾಳೆಯೋ ಹೇಳುವುದು ಅಸಾಧ್ಯವೇ. ಕೋಟ್ಯಧೀಶ್ವರ ಎಷ್ಟೇ ಪ್ರಯತ್ನ ಪಟ್ಟರೂ ಕಲೆ ಆತನಿಗೆ ಒಲಿಯದೇ ಇರಬಹುದು, ಆದರೆ ಯಾವುದೇ ಹಳ್ಳಿಮೂಲೆಯಲ್ಲಿ ಯಾವುದೋ ಚಿಕ್ಕಪುಟ್ಟ ಕಾಯಕ ಮಾಡಿಕೊಂಡಿರುವವನೊಬ್ಬನಿಗೆ ಇದು ಸಹಜವಾಗಿಯೇ ಒಲಿದು ಬರುತ್ತದೆ. ಲಕ್ಷಗಟ್ಟಲೆ ಫೀಸ್​ ಕೊಟ್ಟು ಕಲಿಯುವ ಆಗರ್ಭ ಶ್ರೀಮಂತನಿಗೆ ಒಲಿಯದ ಕಲೆ, ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿರುವವನಿಗೆ ಒಲಿದು ಬಿಡಬಹುದು. ಅದಕ್ಕೆ ಸಾಕ್ಷಿಯಾಗಿರುವುದು ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆ. ಹಿಂದೊಮ್ಮೆ ಕುರಿಕಾಯುವ ಹನುಮಂತ ರಾತ್ರೋರಾತ್ರಿ ಸಕತ್​ ಫೇಮಸ್​ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈಗ ಅಂಥದ್ದೇ ಇನ್ನೋರ್ವ ಸಂಗೀತ ಕಲಾವಿದನನ್ನು ಪರಿಚಯಿಸುತ್ತಿದೆ ಸರಿಗಮಪ ವೇದಿಕೆ. 

ಇವರ ಹೆಸರು ರಮೇಶ್​ ಲಮಾಣಿ. ಊರು ಗದಗ. ಕೆಲಸ ಕುರಿ ಕಾಯುವುದು. ಕೆಲಸ ಯಾವುದಾದರೇನು, ಇವರಿಗೆ ಆ ಸಂಗೀತ ಕಲೆ ಒಲಿದುಬಿಟ್ಟಿದೆ. ಇವರ ಸುಶ್ರಾವ್ಯ ಕಂಠನಾದಕ್ಕೆ ಸರಿಗಮಪದ ತೀರ್ಪುಗಾರರಾಗಿರುವ ನಾದಬ್ರಹ್ಮ ಹಂಸಲೇಖ ಅವರೇ ಕಣ್ಣೀರಾಗಿಬಿಟ್ಟರು. ಡಾ. ರಾಜ್​ಕುಮಾರ್​ ಅಭಿನಯದ ಆಕಸ್ಮಿಕ ಚಿತ್ರದ ಬಾಳುವಂಥ ಹೂವೇ ಬಾಳುವಾಸೆ ಏಕೆ ಎಂಬ ಹಾಡಿಗೆ ದನಿಯಾದರು ರಮೇಶ್​. ಇವರ ಅದ್ಭುತ ಕಂಠಸಿರಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದೆ. ಅತ್ತ ಇವರು ಹಾಡುವುದನ್ನೇ ಇವರ ಪತ್ನಿ ಮತ್ತು ಚಿಕ್ಕಪಾಪು ನೋಡುತ್ತಿದ್ದ ದೃಶ್ಯ ಎಲ್ಲರ ಮನವನ್ನು ಕದಡಿತು. 

Tap to resize

Latest Videos

ಅಮ್ಮನಿಗೆ ಕೊಟ್ಟ ಮಾತು ನೆರವೇರಿಸಿದ ಪುತ್ರ: ಸರಿಗಮಪ ಆಡಿಷನ್​ನಲ್ಲಿ ಭಾವುಕ ಕ್ಷಣ

ಆ್ಯಂಕರ್​ ಅನುಶ್ರೀ ನೀವೇನು ಮಾಡಿಕೊಂಡಿರುವುದು ಎಂದು ಹೇಳಿದಾಗ ರಮೇಶ್​ ಅವರು ತುಂಬಾ ಸಂಕೋಚದಿಂದ ಹೇಳಲೋ ಬೇಡವೋ ಎಂದುಕೊಂಡು ಕಣ್ಣೀರು ತಂದುಕೊಂಡು ಕುರಿ ಕಾಯುವ ಕೆಲಸ ಎಂದರು. ಅದಕ್ಕೆ ಅನುಶ್ರೀ ಅವರು, ಇದ್ಯಾಕೆ ಹೀಗೆ ಹೇಳ್ತೀರಾ, ಮಾಡುವ ಕೆಲಸ ಯಾವುದಾದರೇನು, ಅದರ ಮೇಲೆ ಹೆಮ್ಮೆ ಇರಬೇಕು, ಈ ರೀತಿ ಸಂಕೋಚ ಪಡಬೇಡಿ ಎಂದರು. ಅದಕ್ಕೆ ಹಂಸಲೇಖ ಅವರೂ ಹೌದು. ನಿನ್ನ ಕಂಠಮಾಧುರ್ಯ ಅದ್ಭುತವಾದದ್ದು. ಮಾಡುವ ಕೆಲಸದ ಬಗ್ಗೆ ಸಂಕೋಚವಿಲ್ಲದೇ ಹೇಳಬೇಕು ಎಂದರು. ಕಾಳಿದಾಸನ ವಿಷಯವೂ ಗೊತ್ತಲವೇ ಎಂದು ಪ್ರಶ್ನಿಸಿದರು. ನಂತರ ಸರಿಗಮಪಕ್ಕೆ ಆಯ್ಕೆಯಾಗಿರುವುದಾಗಿ ಹೇಳುತ್ತಲೇ ರಮೇಶ್​ ಅವರಿಗೆ ಅಳು ತಡೆದುಕೊಳ್ಳಲು ಆಗಲೇ ಇಲ್ಲ. 

ನಿನಗೆ ಯಾರು ಸಂಗೀತ ಹೇಳಿಕೊಟ್ಟರು ಎಂದು ಹಂಸಲೇಖ ಅವರು ಕೇಳಿದಾಗ, ಡಾ.ರಾಜ್​ಕುಮಾರ್​ ಅಪ್ಪಾಜಿ ಅವರಿಂದ ಕಲಿತೆ ಎಂದರು ರಮೇಶ್​. ನೀನು ಏಕಲವ್ಯ ಕಣೋ ಎಂದು ಆನಂದಬಾಷ್ಪ ಹರಿಸಿದರು ಹಂಸಲೇಖ. 

ಬಿಗ್​ಬಾಸ್​ ನಡೆಸಿಕೊಡಲು ಸುದೀಪ್​ ಹಾಗೂ ಬೇರೆ ಭಾಷೆ ನಟರು ಪಡೆಯುವುದೆಷ್ಟು? ಅತಿ ಹೆಚ್ಚು ಯಾರಿಗೆ, ಇಲ್ಲಿದೆ ವಿವರ

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!