
ಬೆಂಗಳೂರು (ಸೆ.29): ಬಿಗ್ ಬಾಸ್ ಕನ್ನಡ ಸೀಸನ್ 11ರ ನಾಲ್ಕನೇ ಕಂಟೆಸ್ಟೆಂಟ್ ಆಗಿ ಕಾಲಿಟ್ಟ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್‌ಗೆ ಕೆಲವೇ ನಿಮಿಷಗಳಲ್ಲಿ ಬರೋಬ್ಬರಿ ಲಕ್ಷಗಟ್ಟಲೇ ಮತಗಳನ್ನು ನೀಡಿದ್ದಾರೆ. ಈ ಮೂಲಕ ನಟಿ ಗೌತಮಿ ಜಾಧವ್ ಸೀದಾ ಬಿಗ್ ಬಾಸ್ ಮನೆಯ ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ.
ಬಿಗ್ ಬಾಸ್ ಮನೆಗೆ ಮೊದಲ ಕಂಟೆಸ್ಟೆಂಟ್ ಭವ್ಯಾ ಗೌಡ, 2ನೇಯದಾಗಿ ಯಮುನಾ, 3ನೇಯದಾಗಿ ಧನರಾಜ್ ಆಚಾರ್ ಕಾಲಿಟ್ಟಿದ್ದಾರೆ. ಆದರೆ, ಮೊದಲೆರೆಡು ಕಂಟೆಸ್ಟೆಂಟ್‌ಗಳನ್ನು ಸೀಕ್ರೆಟ್ ಕೋಣೆಯಲ್ಲಿ ಕೂರಿಸಲಾಗಿದ್ದು, ವಿಶೇಷ ಅಧಿಕಾರವನ್ನು ನೀಡಲಾಗಿದೆ. ಆಗ ಸತ್ಯಾ ಧಾರವಾಹಿ ನಟಿ ಗೌತಮಿ ಅವರನ್ನು ಯಾವ ಮನೆಗೆ ಕಳಿಸಬೇಕು ಎಂದು ಕೇಳಿದ್ದಕ್ಕೆ ನಟಿ ಯಮುನಾ ಅವರು ನರಕಕ್ಕೆ ಕಳಿಸಬೇಕು ಎಂದು ಹೇಳಿದ್ದಾರೆ. ಆದರೆ, ಮತದಾರರು ನೀಡಿದ ಮತಗಳ ಅನುಸಾರ ಗೌತಮಿ ಜಾಧವ್ ಅವರು ಸೀದಾ ಸ್ವರ್ಗದ ಮನೆಗೆ ಹೋಗಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಗೀತಾ ನಟಿ ಭವ್ಯಾ ಗೌಡ; ಮೊದಲು ಕಾಲಿಟ್ಟಿದ್ದೇ ನರಕಕ್ಕೆ!
ನಿಮ್ಮ ಹೆಸರೇನು ಎಂದು ಕೇಳಿದ ಧನರಾಜ್ ಆಚಾರ್: ಸಾಮಾನ್ಯವಾಗಿ ಕಿರುತೆರೆಯಲ್ಲಿ ಗುರುತಿಸಿಕೊಂಡ ನಟ, ನಟಿಯರು ಪರಸ್ಪರ ಪರಿಚಯವನ್ನು ಹೊಂದಿರುತ್ತಾರೆ. ಅದರಲ್ಲಿ ಟಿಆರ್‌ಪಿ ತಂದುಕೊಟ್ಟ ಧಾರಾವಾಹಿ ನಟ ನಟಿಯರಂತೂ ಎಲ್ಲರಿಗೂ ಪರಿಚಿತ ಆಗಿರುತ್ತಾರೆ. ಸತ್ಯ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಟಿ ಗೌತಮಿ ಜಾಧವ್ ಅವರು ಸ್ವರ್ಗದ ಮನೆಗೆ ಕಾಲಿಡುತ್ತಿದ್ದಂತೆಯೇ ಅವರಿಗೆ ನಿಮ್ಮ ಹೆಸರೇನು ಎಂದು ಕೇಳಿದ್ದಾನೆ. ನಂತರ ಬಿಗ್ ಬಾಸ್ ಮನೆಯಲ್ಲಿ ಓಡಾಡುತ್ತಾ ಪುನಃ ಅದೆಂತಹ ಜಾಧವ್ ಎಂದಿರಲ್ಲಾ ಎಂದು ಪುನಃ ಕೇಳಿದ್ದಾನೆ. ಇದಕ್ಕೆ ಗೌತಮಿಗೆ ಸಂಕೋಚವಾದರೂ ಅದನ್ನು ತೋರಿಸಿಕೊಳ್ಳದೇ ತನ್ನ ಗೌತಮಿ, ಗೌತಮಿ ಜಾಧವ್ ಎಂದು ಹೇಳಿದ್ದಾರೆ.
BBK 11: ಮಗುವಿನಿಂದ ಬಂದ ಅದೃಷ್ಟ: ಬಿಗ್ ಬಾಸ್ ಮನೆಗೆ ಟಿಕ್‌ಟಾಕ್ ಸ್ಟಾರ್ ಧನರಾಜ್ ಆಚಾರ್ ಎಂಟ್ರಿ..!
ಸಿನಿಮಾದಿಂದ ಕಿರುತೆರೆಗೆ ಬಂದ ನಾಯಕಿ: ಗೌತಮಿ ಜಾಧವ್ ಅವರಿ ಕನ್ನಡದ ಸೀರಿಯಲ್‌ಗೂ ಬರುವ ಮೊದಲೇ ಕನ್ನಡ ಚಿತ್ರರಂಗದ 2018ರಲ್ಲಿ ಬಿಡುಗಡೆಯಾದ 'ಕಿನಾರೆ' ಸಿನಿಮಾದ ನಾಯಕಿಯಾಗಿ ತೆರೆ ಮೇಲೆ ಬಂದಿದ್ದರು. ಆದರೆ, ವರ್ಷಕ್ಕೆ ಬಿಡುಗಡೆ ಆಗುವ ನೂರಾರು ಸಿನಿಮಾಗಲ್ಲಿ ಈ ಸಿನಿಮಾವೂ ಒಂದೆಂಬಂತೆ ಹೆಚ್ಚು ಪ್ರಸಿದ್ಧಿಯಾಗದೇ ಮೂಲೆ ಗುಂಪಾಯಿತು. ಇನ್ನು ಗೌತಮಿ ಅವರ ಗಂಡ ಅಭಿಷೇಕ್ ಕಾಸರಗೋಡು ಅವರು ಕನ್ನಡ ಚಿತ್ರರಂಗದ ಪ್ರಖ್ಯಾತ ಛಾಯಾಗ್ರಾಹಕರಾಗಿದ್ದು, ಹೆಂಡತಿಯ ಬೆಳವಣಿಗೆ ಸದಾ ಶ್ರಮಿಸುತ್ತಿದ್ದಾರೆ. ನಂತರ ಗೌತಮಿ ಅವರು ಆದ್ಯ ಸಿನಿಮಾ ಹಾಗೂ ಮತ್ತೊಂದು ತೆಲುಗು ಚಿತ್ರದಲ್ಲಿಯೂ ನಟಿಸಿದ್ದಾರೆ. ಇದಾದ ನಂತರ 2020ರಲ್ಲಿ ಸತ್ಯ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಗಳಾಗಿ ಮಿಂಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.