ಒಂಥರಾ ಹಿಡಿಸಿದೆ ಹಾಡಿಗೆ 'ಗಟ್ಟಿಮೇಳ'ದ ಅಮೂಲ್ಯಾ- ಆದ್ಯಾ ಸೂಪರ್ ಸ್ಟೆಪ್​: ಷರ್ಟ್​ ಯಾರದ್ದು ಕೇಳಿದ ಫ್ಯಾನ್ಸ್​

Published : Oct 07, 2023, 02:07 PM IST
ಒಂಥರಾ ಹಿಡಿಸಿದೆ ಹಾಡಿಗೆ 'ಗಟ್ಟಿಮೇಳ'ದ ಅಮೂಲ್ಯಾ- ಆದ್ಯಾ ಸೂಪರ್ ಸ್ಟೆಪ್​:  ಷರ್ಟ್​ ಯಾರದ್ದು  ಕೇಳಿದ ಫ್ಯಾನ್ಸ್​

ಸಾರಾಂಶ

ಗಟ್ಟಿಮೇಳ ಸೀರಿಯಲ್​ ಮೂಲಕ ಖ್ಯಾತಿ ಗಳಿಸಿರುವ ಅಮೂಲ್ಯ ಮತ್ತು ಆದ್ಯಾ ಜೋಡಿಯಾಗಿ ರೀಲ್ಸ್​ ಮಾಡಿದ್ದು ಫ್ಯಾನ್ಸ್ ಥಹರೇವಾಗಿ ಕಮೆಂಟ್ಸ್​ ಮಾಡುತ್ತಿದ್ದಾರೆ.  

ಕಿರುತೆರೆ ಕಲಾವಿದರು ಅದರಲ್ಲಿಯೂ ಹೆಚ್ಚಾಗಿ ಕಲಾವಿದೆಯರು ಇನ್​ಸ್ಟಾಗ್ರಾಮ್​ನಲ್ಲಿ ಸಕತ್​ ಆ್ಯಕ್ಟೀವ್​ ಇದ್ದಾರೆ. ಆಗಾಗ್ಗೆ ಶೂಟಿಂಗ್​ ನಡುವೆ ಬಿಡುವು ಮಾಡಿಕೊಂಡು ರೀಲ್ಸ್​ ಮಾಡಿ ಅದನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲವೊಂದು ಸಿಂಗಲ್​  ಆಗಿ, ಇನ್ನು ಕೆಲವೊಮ್ಮೆ ತಮ್ಮ ಸೀರಿಯಲ್​ ಸಹ ನಟ-ನಟಿಯರ ಜೊತೆ ರೀಲ್ಸ್​ ಮಾಡುತ್ತಿರುತ್ತಾರೆ. ಅಂಥದ್ದೇ ಒಂದು ರೀಲ್ಸ್​ ಮಾಡಿದ್ದಾರೆ ಗಟ್ಟಿಮೇಳ ಖ್ಯಾತಿಯ ರೌಡಿ ಬೇಬಿ ಎಂದೇ ಕರೆಯಲ್ಪಡುವ ಅಮೂಲ್ಯಾ ಮತ್ತು ಆದ್ಯಾ. ಒಂಥರಾ ಹಿಡಿಸಿದೆ ರೀಲ್ಸ್​ಗೆ ಈ ಜೋಡಿ ಸಕತ್​ ಸ್ಟೆಪ್​ ಹಾಕಿದೆ. ಅಂದಹಾಗೆ ಅಮೂಲ್ಯಾ ಅವರ ನಿಜವಾದ ಹೆಸರು ನಿಶಾ ರವಿಕೃಷ್ಣನ್​ ಮತ್ತು ಆದ್ಯಾ ಪಾತ್ರಧಾರಿಯ ಹೆಸರು  ಅನ್ವಿತಾ ಸಾಗರ್​. ಇವರಿಬ್ಬರ ರೀಲ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಆದರೆ ಷರ್ಟ್​ ಮಾತ್ರ ಯಾರದ್ದು ಎಂದು ಕಾಲೆಳೆಯುತ್ತಿದ್ದಾರೆ. ಅಮೂಲ್ಯಾ  ಮೇಡಂ, ನೀವು ಹಾಕಿದ್ದು ವೇದಾಂತ್​ ಷರ್ಟ್​ ಅಲ್ವಾ ಅಂತಿದ್ದಾರೆ ಫ್ಯಾನ್ಸ್​. ಇವರ ರೀಲ್ಸ್​ಗೆ ಹಾರ್ಟ್​ ಎಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದೆ. 

ಅಂದಹಾಗೆ ಅಮೂಲ್ಯಾ ಅರ್ಥಾತ್​ ನಿಶಾ ರವಿಕೃಷ್ಣನ್​ ಅವರು ಜನ ಮೆಚ್ಚಿರುವ ಕಿರುತೆರೆ ನಟಿ. ‘ಸರ್ವ ಮಂಗಲಮಾಂಗಲ್ಯೆ’ ನಿಶಾ ಅವರ ಮೊದಲ ಧಾರಾವಾಹಿ. ಆ ಬಳಿಕ ಅವರು ‘ಗಟ್ಟಿಮೇಳ’ದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಅವರಿಗೆ  ಸಾಕಷ್ಟು ಜನಪ್ರಿಯತೆ ತಂದುಕೊಡುತ್ತಿದೆ. ನಿಶಾ ರವಿಕೃಷ್ಣ ಸದ್ಯ ತೆಲುಗು ಧಾರಾವಾಹಿ ‘ಅಮ್ಮಾಯಿಗಾರು’ ನಟಿಸುತ್ತಿದ್ದಾರೆ.  ಅಂದಹಾಗೆ ಇವರು,  ಅತ್ಯುತ್ತಮ ನಟಿ ಮಾತ್ರವಲ್ಲ, ಅತ್ಯುತ್ತಮ ಸಿಂಗರ್‌ ಹಾಗೂ ಡಾನ್ಸರ್‌ ಕೂಡ.  ಯಾರ ತಂಟೆಗೂ ಹೋಗದ ತೀರಾ ಸಿಂಪಲ್‌, ಡೀಸೆಂಟ್‌ ನಟಿ ಎಂದೇ ಇವರು ಚಿರಪರಿಚಿತರು.   6 ನೇ ತರಗತಿಯಿಂದಲೇ ಮಕ್ಕಳ  ಚಾನೆಲ್‌ನಲ್ಲಿ ಆ್ಯಂಕರ್‌ ಆಗಿ ಕಾರ್ಯ ನಿರ್ವಹಿಸಿದ್ದ ನಿಶಾ ಅವರು,  ಖುದ್ದು ಪ್ರೋಗ್ರಾಂ ಪ್ಲಾನ್‌ ಮಾಡಿಕೊಂಡು ಕಾರ್ಯಕ್ರಮ ನಡೆಸಿದ್ದಾರೆ. ಓದಿನ ಜೊತೆಗೇ ಎಲ್ಲವನ್ನೂ ನಿರ್ವಹಿಸಿದ್ದಾರೆ.  

India vs Australia: ಡಾ. ಬ್ರೋ ಫ್ಯಾನ್ಸ್​ಗೆ ಬಿಗ್​ ಸರ್​ಪ್ರೈಸ್​ ನೀಡಿದ ಸ್ಟಾರ್​ ಸ್ಪೋರ್ಟ್​ನಿಂದ ಕುತೂಹಲದ ಮಾಹಿತಿ

ನಮ್ಮ ಅಪ್ಪ ರವಿಕೃಷ್ಣನ್‌ ಅವರು ಮದುವೆಗೂ ಮುನ್ನ ಮಂಡ್ಯ ರಮೇಶ್‌ ಅವರ ಟೀಮ್‌ ಜತೆಗೆ ಒಂದಿಷ್ಟು ಬೀದಿನಾಟಕ ಮಾಡುತ್ತಿದ್ದರಂತೆ. ಅವರಲ್ಲಿದ್ದ ಈ ಗುಣ ನನಗೆ ರಕ್ತಗತವಾಗಿ ಬಂದಿದೆ ಎನ್ನಬಹುದು. ಅವರ ಗೈಡ್‌ಲೈನ್ಸ್‌ ಕೂಡ ನನಗೆ ಮತ್ತಷ್ಟು ಹುರುಪು ತುಂಬಿದೆ. ಕಿರುತೆರೆಯಲ್ಲಿ ಹೆಸರು ಮಾಡಲು ಅಮ್ಮ ಉಷಾ ಪ್ರೋತ್ಸಾಹ ಕೂಡ ಕಾರಣ ಎಂದು ಈ ಹಿಂದೆ ನಟಿ ಸಂದರ್ಶನದಲ್ಲಿ ಹೇಳಿದ್ದರು. 

ಇನ್ನು, ಈ ಧಾರಾವಾಹಿಯಲ್ಲಿ ನಾಯಕ ವೇದಾಂತ್ ತಂಗಿ ಆದ್ಯಾ ಪಾತ್ರ ಎಲ್ಲರಿಗೂ ಇಷ್ಟ ಆಗಿದೆ. ತಂಗಿಯಾಗಿ, ಅಣ್ಣಂದಿರಿಗೆ ರೇಗಿಸುವುದು. ಅವರು ಪ್ರೀತಿಗೆ ಬೆಂಬಲ ನೀಡುವುದು ಜನರನ್ನು ಸೆಳೆದಿದೆ. ಈಕೆ  ಮಂಗಳೂರಿನವರು. ಅದ್ಭುತ ನಟನೆ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಕಿರುತೆರೆಗೆ ಬರುವುದಕ್ಕೆ ಮುಂಚೆ ಇವರು  ಮಾಡೆಲ್ ಆಗಿದ್ದರು. ಟಿವಿ ಚಾನೆಲ್ ಗಳಲ್ಲಿ ನಿರೂಪಣೆ ಮಾಡಿ ಫೇಮಸ್​ ಆಗಿದ್ದಾರೆ. ಸ್ನಾತ್ತಕೋತ್ತರ ಪದವಿ ಪಡೆಯುತ್ತಿರುವಾಗಲೇ ಅನ್ವಿತಾ ನಾಲ್ಕು ವರುಷಗಳ ಕಾಲ ನಮ್ಮ ಟಿ.ವಿ ಚಾನಲ್ ನಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದರು. ಮಾತ್ರವಲ್ಲದೇ,  ಕನ್ನಡ ಮತ್ತು ತುಳು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇವರ  ಸಹೋದರ ಅನೂಪ್ ಸಾಗರ್, ತುಳು ಚಿತ್ರರಂಗದಲ್ಲಿ ಮಿಂಚುತ್ತಿರುವಂತಹ ನಟ. 2015 ರಲ್ಲಿ ಇವರು ರಂಜಿತ್ ಬಜ್ಪೆ ನಿರ್ದೇಶನದ ದಂಡ್ ತುಳುಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪದಾರ್ಪಣೆ ಮಾಡಿದ್ದರು.  ಇದರ ನಂತರ ಹಲವಾರು ತುಳು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.

ನಕ್ಷತ್ರಕ್ಕೆ ಸಾನ್ಯಾ ಅಯ್ಯರ್​ ಹೆಸರು: ಪುನೀತ್​, ಸುದೀಪ್​ ಬಳಿಕ ನಟಿಗೆ ಫ್ಯಾನ್ಸ್​ ಗೌರವ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?