ಸೋಶಿಯಲ್ ಮೀಡಿಯಾದಲ್ಲಿ ಧಮಾಕಾ ಎಬ್ಬಿಸುತ್ತಿರುವ ಜೋಡಿ.. ಸುಮಿತ್‌ಗೆ ಕಲ್ಯಾಣಿ ಸಿಕ್ಕಿದ್ದು ಎಲ್ಲಿ ಗೊತ್ತಾ?

Published : Nov 19, 2026, 05:11 PM IST
Sumit and Kalyani

ಸಾರಾಂಶ

Sumit and Kalyani: ಸೋಶಿಯಲ್ ಮೀಡಿಯಾದಲ್ಲಿ ಧಮಾಕಾ ಎಬ್ಬಿಸುತ್ತಿರುವ ಜನಪ್ರಿಯ ಜೋಡಿ ಸುಮಿತ್ ಹಾಗೂ ಕಲ್ಯಾಣಿ ಮೊದಲ ಬಾರಿಗೆ ಭೇಟಿಯಾಗಿದ್ದು ಎಲ್ಲಿ ಗೊತ್ತಾ? ತಮ್ಮ ಕಂಟೆಂಟ್ ಜರ್ನಿ ಮತ್ತು ಮೊದಲ ಭೇಟಿಯ ಸ್ವಾರಸ್ಯಕರ ಸೀಕ್ರೆಟ್ ಅನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ ಸುಮಿತ್.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಾಮಿಡಿ ಹಾಗೂ ಕ್ಯೂಟ್ ಕಂಟೆಂಟ್‌ಗಳ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ಜೋಡಿ ಸುಮಿತ್ ಹಾಗೂ ಕಲ್ಯಾಣಿ. ಇನ್ಸ್ಟಾಗ್ರಾಮ್, ಯೂಟ್ಯೂಬ್‌ನಲ್ಲಿ ಸದಾ ಸದ್ದು ಮಾಡುವ ಈ ಜೋಡಿ ಮೊದಲ ಬಾರಿಗೆ ಎಲ್ಲಿ ಭೇಟಿಯಾದರು? ಇವರ ಈ ವಿಡಿಯೋ ಜರ್ನಿ ಶುರುವಾಗಿದ್ದು ಹೇಗೆ? ಎಂಬ ಬಗ್ಗೆ ಸುಮಿತ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

"ದಪ್ಪ ಆಗ್ಲಿಲ್ಲ, ಆದ್ರೆ ಕಲ್ಯಾಣಿ ಸಿಕ್ಕಳು!"

ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಸುಮಿತ್, ತಮ್ಮ ಮತ್ತು ಕಲ್ಯಾಣಿ ಭೇಟಿಯಾಗಿದ್ದು ಜಿಮ್‌ನಲ್ಲಿ ಎಂದು ಹೇಳಿದ್ದಾರೆ. "ನಾನು ಜಿಮ್‌ಗೆ ಹೋಗಿ ದಪ್ಪ ಅಂದರೆ ಫಿಟ್ ಆಗಲಿಲ್ಲ, ಆದರೆ ಜಿಮ್‌ಗೆ ಹೋಗಿದ್ದರಿಂದ ನನಗೆ ಕಲ್ಯಾಣಿ ಸಿಕ್ಕಳು. ನನ್ನ ಜೀವನದಲ್ಲಿ ಜಿಮ್‌ಗೆ ಹೋಗಿ ಆದ ಅತ್ಯುತ್ತಮ ವಿಷಯ ಅಂದರೆ ಕಲ್ಯಾಣಿ ಸಿಕ್ಕಿದ್ದು ಮಾತ್ರ" ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಕಲ್ಯಾಣಿ ಫಿಟ್‌ನೆಸ್ ವಿಚಾರದಲ್ಲಿ ಸಿಕ್ಕಾಪಟ್ಟೆ ಶಿಸ್ತು ಪಾಲಿಸುತ್ತಾರೆ, ನಿರಂತರವಾಗಿ ವರ್ಕೌಟ್ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಕಂಟೆಂಟ್ ಮಾಡೋಣ್ವಾ?' ಎಂದಿದ್ದಳು ಕಲ್ಯಾಣಿ

ಜಿಮ್‌ನಲ್ಲಿ ಇಬ್ಬರೂ ಮುಖಾಮುಖಿಯಾದ ಕ್ಷಣವನ್ನು ನೆನಪಿಸಿಕೊಂಡ ಸುಮಿತ್, "ಆಗಲೇ ನಾವಿಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುತ್ತಿದ್ದೆವು. ಹಾಗಾಗಿ ಆಕೆ ನನಗೆ ಗೊತ್ತಿತ್ತು, ನಾನೂ ಆಕೆಗೆ ಗೊತ್ತಿದ್ದೆ. ಆದರೆ ನಾನು ಧಾರವಾಡದವನು ಎಂಬ ವಿಷಯ ಆಕೆಗೆ ತಿಳಿದಿರಲಿಲ್ಲ. ಜಿಮ್‌ನಲ್ಲಿ ಕ್ಯಾಶುಯಲ್ ಆಗಿ ಮಾತನಾಡಿದಾಗ, ಕಲ್ಯಾಣಿಯೇ ಬಂದು 'ನಾವಿಬ್ಬರೂ ಸೇರಿ ಏನಾದರೂ ಕಂಟೆಂಟ್ ಮಾಡೋಣ್ವಾ?' ಎಂದು ಕೇಳಿದಳು. ನನಗೂ ಸಿಮಿಲರ್ ಕಂಟೆಂಟ್ ಮಾಡುವುದು ಇಷ್ಟವಿದ್ದ ಕಾರಣ ಒಪ್ಪಿಕೊಂಡೆ. ಹೀಗೆ ನಮ್ಮಿಬ್ಬರ ಜರ್ನಿ ಒಟ್ಟಿಗೆ ಶುರುವಾಯಿತು" ಎಂದಿದ್ದಾರೆ.

'ಪೆದ್ದು ಬಾಯ್‌ಫ್ರೆಂಡ್... ಶಾಣೆ ಹುಡುಗಿ' ಕಾನ್ಸೆಪ್ಟ್ ಹಿಟ್ ಆಯ್ತು!

ತಾವು ಮಾಡಿದ ಮೊದಲ ವಿಡಿಯೋದಿಂದಲೇ ಜನ ಇಷ್ಟಪಟ್ಟಿದ್ದನ್ನು ಸ್ಮರಿಸಿದ ಸುಮಿತ್, "ಸಾಮಾನ್ಯವಾಗಿ ಕಪಲ್ ಕಂಟೆಂಟ್‌ಗಳನ್ನು ಜನ ಬೇಗ ಜಡ್ಜ್ ಮಾಡುತ್ತಾರೆ. ಆದರೆ ನಾವು ಯಾವತ್ತೂ ಬಾರ್ಡರ್ ದಾಟಲಿಲ್ಲ. ಕುಟುಂಬ ಸಮೇತರಾಗಿ ನೋಡುವಂತಹ ಮಿತಿಯಲ್ಲೇ (ಬೌಂಡರಿ) ವಿಡಿಯೋಗಳನ್ನು ಮಾಡಿದ್ವಿ. ಮುಖ್ಯವಾಗಿ 'ಒಬ್ಬ ಪೆದ್ದು, ಮುಗ್ಧ ಬಾಯ್‌ಫ್ರೆಂಡ್ ಮತ್ತು ಇನ್ನೊಬ್ಬಳು ತುಂಬಾ ಚಾಲಾಕಿ-ಇಂಟೆಲಿಜೆಂಟ್ ಹುಡುಗಿ' ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿದ ವಿಡಿಯೋಗಳು ಜನರಿಗೆ ತಕ್ಷಣ ಕನೆಕ್ಟ್ ಆದವು. ಮೊದಲ ವಿಡಿಯೋದಿಂದಲೇ ಜನ ನಮ್ಮನ್ನು ಒಪ್ಪಿಕೊಂಡರು" ಎಂದು ಸಂತಸ ಹಂಚಿಕೊಂಡಿದ್ದಾರೆ.

ರೀಲ್ ಜೋಡಿಯ ರಿಯಲ್ ಕೆಮಿಸ್ಟ್ರಿ ಬಗ್ಗೆ ಜನರ ಕುತೂಹಲ

ಕೇವಲ ಕಂಟೆಂಟ್‌ಗಾಗಿ ಒಂದಾದ ಈ ಜೋಡಿಯ ನಡುವಿನ ಆನ್‌ಸ್ಕ್ರೀನ್ ಕೆಮಿಸ್ಟ್ರಿ ನೋಡಿ, ಸಾಮಾಜಿಕ ಜಾಲತಾಣಗಳಲ್ಲಿ "ಇವರಿಬ್ಬರು ನಿಜ ಜೀವನದಲ್ಲೂ ಲವರ್ಸಾ?" ಎಂಬ ಚರ್ಚೆಗಳು, ಕಮೆಂಟ್‌ಗಳು ಸದಾ ಹರಿದಾಡುತ್ತಿರುತ್ತವೆ. ಆದರೆ ಇಬ್ಬರ ಮಧ್ಯೆ ಇರುವ ಉತ್ತಮ ಸ್ನೇಹ ಮತ್ತು ಹೊಂದಾಣಿಕೆಯೇ ವಿಡಿಯೋಗಳಲ್ಲಿ ಇಷ್ಟೊಂದು ಸಹಜವಾಗಿ ಮೂಡಿಬರಲು ಕಾರಣ ಎನ್ನಲಾಗಿದೆ.

ಫಿಟ್‌ನೆಸ್ ಮತ್ತು ಕಂಟೆಂಟ್

ಕಲ್ಯಾಣಿ ಕೇವಲ ನಟನೆಯಷ್ಟೇ ಅಲ್ಲದೆ, ಫಿಟ್‌ನೆಸ್ ಫ್ರೀಕ್ ಕೂಡ ಹೌದು. ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಶಿಸ್ತನ್ನು ನೋಡಿಯೇ ಸುಮಿತ್ ಅವರಿಗೆ ಆರಂಭದಲ್ಲಿ ಆಕೆಯ ಬಗ್ಗೆ ಗೌರವ ಮೂಡಿತ್ತು. "ನಾನು ಜಿಮ್‌ಗೆ ಹೋಗಿ ಬಾಡಿ ಬಿಲ್ಡ್ ಮಾಡದಿದ್ದರೂ, ಲೈಫ್ ಬದಲಿಸುವಂತಹ ಕಂಟೆಂಟ್ ಪಾರ್ಟ್ನರ್ ಸಿಕ್ಕರು" ಎಂದು ಸುಮಿತ್ ತಮಾಷೆಯಾಗಿ ಹೇಳುವುದು ಇವರ ಬಾಂಡಿಂಗ್ ಅನ್ನು ತೋರಿಸುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕೊನೆ ಉಸಿರು ಇರುವವರೆಗೆ ನಿಮ್ಮನ್ನು ಮರೆಯೋದಿಲ್ಲ' ಪ್ರೀತಿಪಾತ್ರರನ್ನು ಕಳೆದುಕೊಂಡ ಗಾಯಕಿ ಅರ್ಚನಾ ಉಡುಪ
ಗಿಫ್ಟ್ ನೋಡುತ್ತಿದ್ದಂತೆ "ಇದಕ್ಕಿಂತ ದೊಡ್ಡ ಆಶೀರ್ವಾದ ಬೇಕಾ?" ಎಂದ ಐಶ್ವರ್ಯಾ-ಶಿಶಿರ್.. ಶರವಣ ಅವರು ಕೊಟ್ಟಿದ್ದೇನು?