ಬಿಗ್​ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಡಬಲ್​ 'ಸಂತೋಷ'! ನಿಮ್ಗೂ ನಗಿಸಲು ಬರತ್ತಾ ಎಂದ ಫ್ಯಾನ್ಸ್​

Published : Oct 10, 2023, 12:04 PM IST
ಬಿಗ್​ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಡಬಲ್​ 'ಸಂತೋಷ'! ನಿಮ್ಗೂ ನಗಿಸಲು ಬರತ್ತಾ ಎಂದ ಫ್ಯಾನ್ಸ್​

ಸಾರಾಂಶ

ಬಿಗ್​ಬಾಸ್​​  ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಬಲ್​  ಸಂತೋಷದಿಂದ ಕೂಡಿದೆ. ಇದೇ  ಮೊದಲ ಬಾರಿಗೆ ಬಿಗ್​ಬಾಸ್ ನಗಿಸಿದ್ದಾರೆ ಕೂಡ. ಏನಿದು ವಿಷ್ಯ?  

ಬಿಗ್​ಬಾಸ್​ ಶುರುವಾಗಿ ಎರಡು ದಿನಗಳು ಕಳೆದಿವೆ. ಇದಾಗಲೇ ದೊಡ್ಮನೆಯಲ್ಲಿ ಬಗೆಬಗೆ ಚಟುವಟಿಕೆಗಳು ಶುರುವಾಗಿವೆ. ಆಟ ಶುರುವಾಗಿ ಒಂದೇ ದಿನಕ್ಕೆ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್​ ಈಶ್ವರ್​ ಹೊರಕ್ಕೆ ಬಂದಿದ್ದಾರೆ. ಇದು ಸಾಕಷ್ಟು ಕುತೂಹಲ ಕೆರಳಿಸಿದೆ. ತಾವು ಅತಿಥಿಯಾಗಿ ಹೋಗುತ್ತಿರುವುದು ಎಂದು ಮೊದಲೇ ಹೇಳಿದ್ದ ಪ್ರದೀಪ್​ ಈಶ್ವರ್​ ಅವರು ಹೊರಬರುವ ಕಾರಣಕ್ಕೂ ಕೊಟ್ಟಿದ್ದಾರೆ. ಅನಾಥ ಮಕ್ಕಳಿಗಾಗಿ ನಿಧಿ ಸಂಗ್ರಹಿಸಲು ತಾವು ಅಲ್ಲಿಗೆ ಹೋದುದಾಗಿ ಹೇಳಿದ್ದಾರೆ. ಅದೇ ಇನ್ನೊಂದೆಡೆ, ಬೇರೆ ಬೇರೆ ಸ್ಪರ್ಧಿಗಳು ವಿಭಿನ್ನ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದು, ಬಿಗ್​ಬಾಸ್​ ನೀಡುವ ಆದೇಶಗಳನ್ನು ಪಾಲಿಸುತ್ತಿದ್ದಾರೆ.  ಈ ಬಾರಿ ಮೊದಲಿಗಿಂತ ಭಿನ್ನವಾಗಿ ಶೋ ನಡೆಯುತ್ತಿದೆ. ಸದ್ಯ ಮನೆಯೊಳಗೆ ಮೊದಲ ದಿನ 17 ಮಂದಿ ಸದಸ್ಯರು ಎಂಟ್ರಿ ಕೊಟ್ಟಿದ್ದಾರೆ.  

ಸಾಮಾನ್ಯವಾಗಿ ಬಿಗ್​ಬಾಸ್​ ಎಂದರೆ ಸೀರಿಯಸ್​ ಎಂದೇ ಹೇಳಲಾಗುತ್ತದೆ. ಆದರೆ ಈ ಬಾರಿ ಬಿಗ್​ಬಾಸ್​ ಸ್ಪರ್ಧಿಗಳನ್ನು ಹಾಗೂ ಪ್ರೇಕ್ಷಕರನ್ನು ನಗಿಸಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಕತ್​ ರೆಸ್​ಪಾನ್ಸ್​ ಬಂದಿದೆ. ಅಷ್ಟಕ್ಕೂ ಆಗಿರೋದು ಏನೆಂದರೆ, ಬಿಗ್​ಬಾಸ್​ ಮನೆಯಲ್ಲಿ ಇಬ್ಬಿಬ್ಬರು ಸಂತೋಷ್ ಇದ್ದಾರೆ. ಹಳ್ಳಿಕಾರ್ ಬ್ರೀಡ್‌ನ ಸಂತೋಷ್ ಕುಮಾರ್ ಮತ್ತು ಹಾಸ್ಯ ನಟ ಸಂತೋಷ್ ಕುಮಾರ್ ಬಿಗ್ ಬಾಸ್‌ ಮನೆಯೊಳಗೆ ಇದ್ದಾರೆ. ಯಾರನ್ನು ಹೇಗೆ ಕರೆಯುವುದು ಎಂಬ ಬಗ್ಗೆ ಚರ್ಚೆ ಶುರುವಾಗಿತ್ತು. ಇದೇ ಬಿಗ್​ಬಾಸ್​ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಸಮಸ್ಯೆ ಶುರುವಾಗಿದ್ದು ಎನ್ನಲಾಗಿದೆ. ಇದಕ್ಕೆ ಬಿಗ್​ಬಾಸ್​ ಹಾಸ್ಯದ ರೂಪದಲ್ಲಿ ಪರಿಹಾರ ಕಂಡುಹಿಡಿದಿದ್ದಾರೆ. ಇದರ ವಿಡಿಯೋ ಸಕತ್​ ವೈರಲ್​ ಆಗಿದ್ದು, ಇಬ್ಬರು ಸಂತೋಷ ಮೊದಲ ಬಾರಿಗೆ ಇದ್ದಂತೆ, ಬಿಗ್​ಬಾಸ್​ ಈ ಪರಿ ಹಾಸ್ಯ ಮಾಡಿದ್ದೂ ಮೊದಲ ಬಾರಿಗೆ ಎನ್ನುವ ಕಮೆಂಟ್​ ಮಾಡಲಾಗುತ್ತಿದೆ. 

ಬಿಗ್​ಬಾಸ್​ ಮನೆಯಿಂದ ಹೊರಬಂದ ಶಾಸಕ ಪ್ರದೀಪ್​ ಈಶ್ವರ್​: ಕೊಟ್ಟ ಕಾರಣ ಕೇಳಿ ಟ್ರೋಲ್​ಗಳ ಸುರಿಮಳೆ!

ಅಷ್ಟಕ್ಕೂ ಬಿಗ್​ಬಾಸ್​ ಹೇಳಿದ್ದೇನೆಂದರೆ,  'ಈ ಮನೆಯಲ್ಲಿ ಒಂದು ಸಮಸ್ಯೆ ಎದುರಾಗಿದೆ. ಈ ಮುಂಚೆ ಈ ರೀತಿ ಪ್ರಾಬ್ಲಂ ಯಾವತ್ತೂ ಎದುರಾಗಿರಲಿಲ್ಲ. ಇಲ್ಲಿ ಸಂತೋಷ್ ಕುಮಾರ್ ಎನ್ನುವ ಹೆಸರು ಇಬ್ಬರು ಸ್ಪರ್ಧಿ ಇದ್ದಾರೆ. ಇದು ಎಲ್ಲರ  ಕನ್ಫ್ಯೂಸ್​ಗೆ ಕಾರಣವಾಗಿದೆ.  ನಿಮ್ಮನ್ನ ಬಿಗ್ ಬಾಸ್ ಏನಂತ ಕರಿಬೇಕು..' ಎಂದು ಬಿಗ್ ಬಾಸ್‌ ಕಡೆಯಿಂದಲೇ ಕೇಳಿಬಂತು.  ಆಗ ಹಳ್ಳಿಕಾರ್ ಬ್ರೀಡ್‌ನ ಸಂತೋಷ್ ಕುಮಾರ್ ಅವರು, ನನ್ನನ್ನು ವರ್ತೂರ್ ಸಂತೋಷ್ ಎಂದು ಕರೆಯಬಹುದು ಎಂದರೆ,  ಸಂತೋಷ್ ಕುಮಾರ್ ಅವರು, ನನ್ನನ್ನು  ತುಕಾಲಿ ಸ್ಟಾರ್ ಸಂತು ಎನ್ನಬಹುದು ಎಂದರು. ಆಗ ಬಿಗ್​ಬಾಸ್​ ಕಡೆಯಿಂದ ಬಲಗಡೆ ಇರುವವರನ್ನು ನಾನು ಸಂತೋಷ್​ ಎನ್ನುತ್ತೇನೆ ಎಂಬ ದನಿ ಬಂತು. ಆಗ ಬಲಗಡೆ ಇದ್ದವರು ತುಕಾಲಿ ಸಂತೋಷ್​. ಅವರು ಓಕೆ ಓಕೆ ಎಂದರು. ಆಗ ಬಿಗ್​ಬಾಸ್​ ನಿಮ್ಮದಲ್ಲ, ನನ್ನ ಬಲಗಡೆ ಇರುವವರು ಎಂದರು. ಇದನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕರು. 

ನಂತರ ವರ್ತೂರ್ ಸಂತೋಷ್ ಅವರಿಗೆ 'ಸಂತೋಷ್ ಕುಮಾರ್' ಎಂದು ಕರೆಯುವುದಾಗಿ ತಿಳಿಸಿದ ಬಿಗ್ ಬಾಸ್‌, ಇನ್ನೊಬ್ಬರಿಗೆ ತುಕಾಲಿ ಎಂದು ಕರೆಯಲ್ಲ, ಇದು ಚೆನ್ನಾಗಿರಲ್ಲ ಎಂದಿತು. ಇದಕ್ಕೆ ಎಲ್ಲರೂ ಹೌದೌದು ಎನ್ನುವಂತೆ ತಲೆಯಾಡಿಸಿದರು. ಆಗ ಸುಮ್ಮನಾಗದ ಬಿಗ್​ಬಾಸ್, ನಿಮ್ಮನ್ನು ಗೌರವದಿಂದ ತುಕಾಲಿಯವರೇ ಎಂದು ಕರೆಯಲಾಗುವುದು ಎಂದಾಗ ಎಲ್ಲರೂ ಮತ್ತೊಮ್ಮೆ ಜೋರಾಗಿ ನಕ್ಕರು. ಅಂತೂ ಬಿಗ್​ಬಾಸ್​ ಇಷ್ಟೊಂದು ಹಾಸ್ಯ ಮಾಡುತ್ತೀರಲ್ಲ ಎಂದು ಕಮೆಂಟಿಗರು ಹೇಳುತ್ತಿದ್ದಾರೆ. 

ಹಾಟ್​ ವಿಡಿಯೋ ಶೇರ್​ ಮಾಡಿ ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಡ್ತಿದ್ದಾರೆ ಮಾಜಿ ಮಿಸ್ ಇಂಡಿಯಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?